ಮುಂಬಯಿ – ೨೦೦೨ ರಲ್ಲಿ, ಗುಜರಾತ್‌ನ ಗೋಧಾರಾ ರೈಲು ನಿಲ್ದಾಣದಲ್ಲಿ ಮತಾಂಧ ಮುಸ್ಲಿಮರು ಸಾಬರಮತಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಬೋಗಿಯಲ್ಲಿದ್ದ ೫೯ ಕಾರಸೇವಕರು ಸಾವನ್ನಪ್ಪಿದ್ದರು. ಇದಾದ ನಂತರ ಗುಜರಾತ್‌ನಲ್ಲಿ ಗಲಭೆ ಆರಂಭವಾಯಿತು. ಈಗ ಈ ಘಟನೆಯ ಮೇಲೆ ‘ಗೋಧರಾ : ಅಪಘಾತ ಅಥವಾ ಷಡ್ಯಂತ್ರ’ ಎಂಬ ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಲನಚಿತ್ರದ ಸಂಕ್ಷಿಪ್ತ ಜಾಹೀರಾತು ಅಂದರೆ ‘ಟೀಸರ್’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ಎಂ.ಕೆ. ಶಿವಾಕ್ಷ್ ಅವರು ನಿರ್ಮಿಸಿದ್ದಾರೆ.
ಒಂದು ನಿಮಿಷದ ಜಾಹೀರಾತಿನಲ್ಲಿ ಯಾವುದೇ ನಟರ ಮುಖ ಕಾಣಿಸುವುದಿಲ್ಲ; ಆದರೆ ಆ ಘಟನೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಮಾತ್ರ ತೋರಿಸಲಾಗಿದೆ. ‘ಈ ಚಲನಚಿತ್ರವು ೨೦೦೨ ರ ಗೋಧರಾ ದುರಂತದ ನೈಜ ಘಟನೆಗಳನ್ನು ಆಧರಿಸಿದೆ ಎಂದು ಜಾಹೀರಾತು ಹೇಳುತ್ತದೆ. ಇದರೊಂದಿಗೆ ‘ಸಾಬರಮತಿ ಎಕ್ಸ್‌ಪ್ರೆಸ್, ಬೋಗಿ ನಂ. ಎಸ್ ೬, ೫೯’ ಅಕ್ಷರಗಳನ್ನು ಬಹಳ ಪ್ರಮುಖವಾಗಿ ತೋರಿಸಲಾಗಿದೆ.