ದೆಹಲಿಯಲ್ಲಿನ ಪಾಕಿಸ್ತಾನದ ಹೈಕಮೀಷನರನ ಶಾಲೆ ಬಂದ್

ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಸ್ಥಗಿತಗೊಳಿಸಿರುವ ಅನುಮಾನ

ದೆಹಲಿಯಲ್ಲಿ ಪಾಕಿಸ್ತಾನ ಹೈಕಮಿಷನ್

ನವ ದೆಹಲಿ – ಇಲ್ಲಿಯ ಪಾಕಿಸ್ತಾನದ ಹೈಕಮೀಷನರ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯ ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಬಂದ್ ಮಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ. ಆದರೂ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಸ್ಪಷ್ಟೀಕರಣ ನೀಡುವಾಗ ‘ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವುದರಿಂದ ಶಾಲೆಯನ್ನು ಬಂದ್ ಮಾಡಲಾಗಿದೆ’ ಎಂದು ತಿಳಿಸಿದೆ. ಹೈಕಮೀಷನರ ಕಾರ್ಯಾಲಯದ ಸಿಬ್ಬಂದಿಗಳ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು.

ಸಂಪಾದಕರ ನಿಲುವು

ಭಾರತದೊಂದಿಗೆ ಯುದ್ಧವನ್ನು ಮಾಡಿ ನಿಯಂತ್ರಣ ಪಡೆಯುವ ಕನಸನ್ನು ಕಾಣುವ ಪಾಕಿಸ್ತಾನದ ಈ ಸ್ಥಿತಿ, ದೇಶ ಆದಷ್ಟು ಬೇಗನೆ ನಷ್ಟವಾಗಲಿದೆಯೆನ್ನುವುದರ ದ್ಯೋತಕವಾಗಿದೆ !