ಸಾಧಕರೇ, ‘ಪ್ರಿಂಟರ್ನ ಅಯೋಗ್ಯ ನಿರ್ವಹಣೆಯಿಂದಾಗಿ ಗುರುಧನ ನಷ್ಟ ಆಗಬಾರದೆಂದು ಪ್ರಿಂಟರ್ ನ ನಿರ್ವಹಣೆ ಮತ್ತು ಕಾಳಜಿ ವಹಿಸುವುದು ಇದನ್ನು ಕಲಿತುಕೊಳ್ಳಿ !

ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದ ನಾವು ಉತ್ತಮ ಪ್ರತಿಗಳು ಬರುವ ‘ಪ್ರಿಂಟರ್ಗಳನ್ನು ಖರೀದಿಸುತ್ತೇವೆ; ಆದರೆ ಅನೇಕ ಸಾಧಕರಿಗೆ ‘ಪ್ರಿಂಟರ್ದಿಂದ ಪ್ರತಿಗಳನ್ನು (ಪ್ರಿಂಟ್‌ಗಳನ್ನು) ಹೇಗೆ ತೆಗೆಯಬೇಕು ಎಂಬುದು ತಿಳಿಯದೆ, ದುಬಾರಿ ‘ಮುದ್ರಕಗಳು ಹಾಳಾಗುತ್ತವೆ, ಅಂದರೆ ಸಾಧಕರ ಅಸಮರ್ಪಕ ನಿರ್ವಹಣೆಯಿಂದ ಗುರುಧನ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು, ಪ್ರಿಂಟರ್ ಅನ್ನು ಹೇಗೆ ನಿರ್ವಹಿಸಬೇಕು ಮತ್ತು ಕಾಳಜಿ ವಹಿಸಬೇಕು ? ಈ ವಿಷಯದ ಅಂಶಗಳು ಮುಂದೆ ನೀಡಲಾಗಿದೆ.

೧. ಪ್ರತಿ ತೆಗೆಯುವ ಮೊದಲು

೧ ಅ. ಪ್ರತಿ (ಮುದ್ರಣ) ಕಾಗದವನ್ನು ಪ್ಯಾಕೆಟ್‌ನಲ್ಲಿಡುವುದು : ಮುದ್ರಣದ ಕಾಗದಗಳನ್ನು ತೆರೆದಿಡದೆ ಕಾಗದದ ಪೊಟ್ಟಣದಲ್ಲಿ (ಕಾಗದದ ಪ್ಯಾಕೆಟ್‌ನಲ್ಲಿ) ಇಡಬೇಕು. ಕಾಗದವನ್ನು ತೆರೆದಿಟ್ಟಲ್ಲಿ ತೇವಾಂಶವು ತೇವವನ್ನು ಉಂಟುಮಾಡುತ್ತದೆ; ಪರಿಣಾಮವಾಗಿ, ಪ್ರತಿಗಳನ್ನು ಮಾಡುವಾಗ ಕಾಗದವು ಪ್ರಿಂಟರ್ ನಲ್ಲಿ ಸಿಲುಕಿಕೊಳ್ಳಬಹುದು ಮತ್ತು ಪ್ರಿಂಟರ್ ಹಾಳಾಗಬಹುದು.

೧ ಆ. ಕಾಗದವು ತೇವಾಂಶದಿಂದ ತೇವವಾಗಿ ಪ್ರಿಂಟರ್‌ನಲ್ಲಿ ಸಿಲುಕಿಕೊಂಡರೆ, ಅದನ್ನು ಬಿಸಿ ಮಾಡಬೇಕು ! : ಮಳೆಗಾಲದ ದಿನಗಳಲ್ಲಿ ತೇವಾಂಶ ಹೆಚ್ಚಾಗುವುದರಿಂದ ಪ್ರಿಂಟರ್‌ನಲ್ಲಿ ಪೇಪರ್ ಸಿಲುಕಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮರದ ಮುಚ್ಚಿದ ಕಪಾಟಿನಲ್ಲಿ ಅಥವಾ ಕಬ್ಬಿಣದ ಮುಚ್ಚಿದ ಕಪಾಟಿನಲ್ಲಿ ದಿನಕ್ಕೆ ಬೇಕಾದ ಕಾಗದಗಳನ್ನು ಬಿಸಿಮಾಡಲು ೪೦ ವ್ಯಾಟ್‌ನ ಬಲ್ಬ್ ಅನ್ನು ಹಚ್ಚಿಡಬಹುದು. ಎಲ್.ಇ.ಡಿ ಬಲ್ಬ್‌ಗಳನ್ನು ಹಚ್ಚಬಾರದು. ಕಾಗದವನ್ನು ಬಿಸಿ ಮಾಡಿದ ನಂತರ, ‘ಕಪಾಟ ಮುಚ್ಚಿರುವಂತೆ ನೋಡಬೇಕು. ಬಲ್ಬ್ ಮತ್ತು ಕಾಗದದ ನಡುವೆ ೨೦ ಸೆಂ.ಮೀ. ಅಂತರವಿರಬೇಕು.

ಗಾಳಿಯಲ್ಲಿನ ತೇವಾಂಶವನ್ನು ಅವಲಂಬಿಸಿ, ಕಾಗದವನ್ನು ಬಿಸಿ ಮಾಡುವ ಅವಧಿಯನ್ನು ಅಂದಾಜು ಮಾಡಬಹುದು; ಆದರೆ ಬಿಸಿಮಾಡಿದ ಕಾಗದವನ್ನು ಅಗತ್ಯಕ್ಕಿಂತ ಹೆಚ್ಚು ಸಮಯ ಇಟ್ಟುಕೊಂಡರೆ, ಕಾಗದದ ಬಣ್ಣ ಬದಲಾಗುತ್ತದೆ, ಮತ್ತು ಕೆಲವೊಮ್ಮೆ ಕಾಗದಕ್ಕೆ ಬೆಂಕಿ ಹಿಡಿಯಬಹುದು. ಆದ್ದರಿಂದ, ಕಾಗದವನ್ನು ಬಿಸಿ ಮಾಡುವ ಅವಧಿಯನ್ನು ಅಧ್ಯಯನ ಮಾಡಿದ ನಂತರ ನಿರ್ಧರಿಸಬೇಕು. ತೇವಾಂಶ ಹೆಚ್ಚಿರುವ ಸ್ಥಳಗಳಲ್ಲಿ ಬಿಸಿಯಾದ ಕಾಗದವನ್ನು ತೆರೆದ ಗಾಳಿಯಲ್ಲಿ ಬಿಟ್ಟರೆ ೧೦ ರಿಂದ ೧೫ ನಿಮಿಷಗಳಲ್ಲಿ ಮತ್ತೆ ತೇವವಾಗುತ್ತದೆ. ಹಾಗಾಗಿ ಅಂತಹ ಕಾಗದವನ್ನು ಮುದ್ರಿಸುವ ಬದಲು ಮತ್ತೆ ಬಿಸಿ ಮಾಡಿ ಬಳಸಬೇಕು.

ಈ ರೀತಿ ಕಪ್ಪು ಬಣ್ಣದ ಮಸಿಯಿರುವ ಪಟ್ಟಿಯಿರುವ ಕಾಗದವನ್ನು ಪ್ರಿಂಟರಗಾಗಿ ಉಪಯೋಗಿಸಬಾರದು

೧ ಇ. ಕಪ್ಪು ಶಾಯಿಯ ಗೆರೆ ಇರುವ ಕಾಗದವನ್ನು ಬಳಸಬೇಡಿ ! : ಮುಂದೆ ಅಥವಾ ಹಿಂದಿನ ಭಾಗಕ್ಕೆ ಕಪ್ಪು ಅಥವಾ ಗಾಢವಾದ ಶಾಯಿಯ ಗೆರೆ ಅಥವಾ ಕಲೆ ಹೊಂದಿರುವ ಪೇಪರ್ ಪ್ರಿಂಟ್ ತೆಗೆಯಲು ಬಳಸಿದರೆ, ಕಾಗದದ ಮೇಲಿನ ಶಾಯಿ ಕರಗಿ ಅದು ಪ್ರಿಂಟರ್‌ನ ಒಳಭಾಗಕ್ಕೆ ಅಂಟಿಕೊಳ್ಳುತ್ತದೆ ಮತ್ತು ಮುದ್ರಕ ಹಾಳಾಗುತ್ತದೆ. ಆದ್ದರಿಂದ ಅಂತಹ ಕಾಗದವನ್ನು ಯಾವುದೇ ಮುದ್ರಕಕ್ಕೆ ಬಳಸಬಾರದು.

೧ ಇ. ಪ್ರತಿ ತೆಗೆಯಲು ಬಳಸುವ ಕಾಗದಗಳು ಸ್ಟೇಪ್ಲರ್ ಪಿನ್‌ಗಳನ್ನು ಹೊಂದಿರಬಾರದು ! : ನಕಲು ಮಾಡಲು ಬಳಸುವ ಕಾಗದವು ಸ್ಟೇಪ್ಲರ್ ಪಿನ್ ಇದ್ದರೆ, ಪಿನ್ ಪ್ರಿಂಟರ್‌ನಲ್ಲಿ ಸಿಲುಕಿಕೊಂಡರೆ ಮುದ್ರಕ ಹಾಳಾಗಿ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ. ಆದ್ದರಿಂದ ಪ್ರತಿ ತೆಗೆಯಲು ಬಳಸುವ ಮೊದಲು ಕಾಗದಕ್ಕೆ ಪಿನ್‌ಗಳು ಅಥವಾ ಗುಂಡುಸೂಜಿ ಇಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕವಾಗಿದೆ.

೨. ಪ್ರತಿಗಳನ್ನು ತೆಗೆಯುತ್ತಿರುವಾಗ

೨ ಅ. ಪ್ರತಿಗಳನ್ನು ತೆಗೆಯುವಾಗಲೇ ಪ್ರಿಂಟರ್ ಅನ್ನು ಆರಂಭಿಸುವುದು : ‘ಬೇಸಿಕ್ ಲೇಸರ್ ಪ್ರಿಂಟರ್ ೧೫ ನಿಮಿಷಗಳಿಗಿಂತ ಹೆಚ್ಚು ಕಾಲ ‘ಸ್ಟ್ಯಾಂಡ್ ಬೈ ಮೋಡ್ನಲ್ಲಿದ್ದರೂ, ಅದು ಸ್ವಲ್ಪ ವಿದ್ಯುತ ಶಕ್ತಿಯನ್ನು ಬಳಸುತ್ತದೆ. ಹಾಗಾಗಿ, ಪ್ರತಿ (ಪ್ರಿಂಟ್) ತೆಗೆದುಕೊಳ್ಳಬೇಕಾದಾಗ ಮಾತ್ರ ಪ್ರಿಂಟರ್‌ಅನ್ನು ಆರಂಭಿಸಬೇಕು. ಇತರ ಸಮಯಗಳಲ್ಲಿ ಮುಖ್ಯ ಕೀಲಿಯನ್ನು ಮುಚ್ಚಬೇಕು. ಈ ಅಂಶವು ಮಲ್ಟಿಫಂಕ್ಷನ್ ಪ್ರಿಂಟರ್‌ಗಳು, ಫೋಟೋ ಕಾಪಿ ಯಂತ್ರಗಳಿಗೆ ಅನ್ವಯಿಸುವುದಿಲ್ಲ; ಏಕೆಂದರೆ ಈ ರೀತಿಯ ಪ್ರಿಂಟರ್‌ನ ಮುಖ್ಯ ಸ್ವಿಚ್ ಅನ್ನು ಆನ್ ಮತ್ತು ಆಫ್ ಮಾಡುವುದರಿಂದ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ‘ಸ್ಟ್ಯಾಂಡ್ ಬೈ ಮೋಡ್ ತುಲನಾತ್ಮಕವಾಗಿ ಕಡಿಮೆ ವಿದ್ಯುತ ಶಕ್ತಿಯನ್ನು ಬಳಸುತ್ತದೆ. ಯಾವಾಗ ಯಂತ್ರವನ್ನು ಕಡಿಮೆ ಬಳಸುತ್ತೇವೆ, ಆಗ ಮುಖ್ಯ ಸ್ವಿಚ್ ಅನ್ನು ಆಫ್ ಮಾಡಬೇಕು.

೨ ಆ. ಮುದ್ರಕದಿಂದ ಬೇರೆ ಧ್ವನಿ ಬಂದರೆ, ತಕ್ಷಣ ಮಾಹಿತಿ ಇರುವವರಿಗೆ ಕೇಳಿ ! : ಪ್ರಿಂಟರ್‌ನೊಳಗಿನ ರೋಲರ್‌ನಲ್ಲಿ ಏನಾದರೂ ಸಿಲುಕಿಕೊಂಡರೆ (ಇದು ಮುದ್ರಕದ ಮೂಲಕ ಕಾಗದವನ್ನು ತಳ್ಳುತ್ತದೆ), ಅದು ವಿಚಿತ್ರ ಶಬ್ದವನ್ನು ಮಾಡುತ್ತದೆ. ಈ ಸಂದರ್ಭದಲ್ಲಿ, ನಿರ್ಲಕ್ಷಿಸಿ ಪ್ರಿಂಟರ್‌ಅನ್ನು ಹಾಗೆ ಬಳಸಿದರೆ, ರೋಲರ್ ಹಾನಿಗೊಳಗಾಗಬಹುದು. ಇದರಿಂದ ರಿಪೇರಿಗಾಗಿ ಸಮಯ ಮತ್ತು ಹಣ ವ್ಯರ್ಥವಾಗಬಹುದು. ಪ್ರತಿ ತೆಗೆಯುವಾಗ ಯಾವುದೇ ವಿಚಿತ್ರ ಶಬ್ದ ಕೇಳಿಬಂದರೆ, ತಕ್ಷಣವೇ ಮುದ್ರಕವನ್ನು ಸ್ವಿಚ್ ಆಫ್ ಮಾಡಿ ಅದರ ಬಗ್ಗೆ ಮಾಹಿತಿ ತಿಳಿದವರ ಬಳಿ ಕೇಳಬೇಕು.

೨ ಇ. ‘ಇಂಕಜೆಟ್ ಮುದ್ರಕಗಳನ್ನು ಬಳಸುವ ಸಾಧಕರಿಂದ ಗಮನಿಸಬೇಕಾದ ಅಂಶಗಳು : ‘ಇಂಕಜೆಟ್ ಮುದ್ರಕದ ಕಾಟ್ರೆಜ್ ತುಂಬಾ ದುಬಾರಿ ಇರುತ್ತದೆ. ಮುದ್ರಕವನ್ನು ಸ್ವಲ್ಪ ಸಮಯದವರೆಗೆ ಬಳಸದಿದ್ದರೆ, ಅದು ಒಣಗುತ್ತದೆ ಮತ್ತು ಹಾಳಾಗುತ್ತದೆ. ಲೇಸರ್ ಮುದ್ರಕಗಳಿಗೆ ಹೋಲಿಸಿದರೆ ಈ ಮುದ್ರಕಗಳ ಪ್ರತಿಗಳು ದುಬಾರಿ. ಆದ್ದರಿಂದ ಈ ರೀತಿಯ ಪ್ರಿಂಟರ್ ಅನ್ನು ಬಳಸುವ ಸಾಧಕರು ‘ಮುದ್ರಕದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ?,ಎಂಬುದನ್ನು ಸಂಬಂಧಿತ ವ್ಯಕ್ತಿಯಿಂದ ತಿಳಿದುಕೊಳ್ಳಬೇಕು.

೩. ‘ಮುದ್ರಕವನ್ನು ಹೇಗೆ ಬಳಸಬೇಕೆಂದು ಕಲಿತುಕೊಳ್ಳಿ !

‘ಮುದ್ರಕವನ್ನು ಹೇಗೆ ಬಳಸುವುದು ? ಎಂದು ಯಾವ ಸಾಧಕರಿಗೆ ತಿಳಿದಿಲ್ಲವೋ, ಅವರು ಅದರ ಬಗ್ಗೆ ತಿಳಿದಿರುವವರಿಂದ ಕಲಿತು ನಂತರ ಅದನ್ನು ಬಳಸಬೇಕು. ಆಶ್ರಮ ಸೇವಕರು ಮತ್ತು ಜವಾಬ್ದಾರ ಸಾಧಕರು ಮುದ್ರಕವನ್ನು ನಿರ್ವಹಿಸುವಲ್ಲಿ ಸಂಬಂಧಪಟ್ಟವರಿಗೆ ತರಬೇತಿಯನ್ನು ನೀಡಲು ಆಯೋಜಿಸಬೇಕು ಮತ್ತು ನಂತರ ಅವರಿಗೆ ಮುದ್ರಕವನ್ನು ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. (೧.೩.೨೦೨೩)