ವಿಮಾನದ ಬಾಡಿಗೆ ನೀಡದೇ ಇರುವುದರಿಂದ ಮಲೇಶಿಯಾದಿಂದ ಕ್ರಮ !
ಇಸ್ಲಾಮಾಬಾದ (ಪಾಕಿಸ್ತಾನ) – ಆರ್ಥಿಕ ದಿವಾಳೆಯ ಹೊಸ್ತಿಲಲ್ಲಿರುವ ಪಾಕಿಸ್ತಾನಕ್ಕೆ ಅದರ ಮುಸಲ್ಮಾನ ಸ್ನೇಹಿತ ದೇಶ ಮಲೇಶಿಯಾ ಪೆಟ್ಟು ನೀಡಿದೆ. ಮಲೇಶಿಯಾ ಪಾಕಿಸ್ತಾನಕ್ಕೆ ಸರಕಾರಿ ವಿಮಾನ ಸಾರಿಗೆ ಕಂಪನಿಯ ‘ಬೋಯಿಂಗ್ ೭೭೭’ ಈ ವಿಮಾನ ವಶಪಡಿಸಿಕೊಂಡಿದೆ. ಪಾಕಿಸ್ತಾನವು ಮಲೇಶಿಯಾದ ಸಾಲದ ಹಣ ಹಿಂತಿರುಗಿಸದೆ ಇರುವುದರಿಂದ ಮಲೇಶಿಯಾ ಈ ಕ್ರಮ ಕೈಗೊಂಡಿದೆ.
#BreakingNews | Pakistan International Airways plane confiscated by the Malaysian authorities because of unpaid bills
Exclusive inputs by @manojkumargupta @siddhantvm shares more details with @poonam_burde #NationaAt5 #Pakistan #Malaysia #PakistanAirlines #PIA pic.twitter.com/OGrGnfxoWI
— News18 (@CNNnews18) May 30, 2023
ಪಾಕಿಸ್ತಾನಿ ಏರಲಾಯಿನ್ ಈ ವಿಮಾನ ಮಲೇಶಿಯಾದಿಂದ ಬಾಡಿಗೆಗೆ ಪಡೆದಿತ್ತು. ಪಾಕಿಸ್ತಾನ ವಿಮಾನದ ಬಾಡಿಗೆ ನೀಡದೆ ಇರುವುದರಿಂದ ಮಲೇಶಿಯಾದ ರಾಜಧಾನಿ ಕುಲಾಲಂಪುರ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಅದನ್ನು ವಶಪಡಿಸಿಕೊಂಡಿದೆ. ಪಾಕಿಸ್ತಾನವು ಮಲೇಶಿಯಾಗೆ ಬಾಡಿಗೆ ಎಂದು ೩೩ ಕೋಟಿ ೮ ಲಕ್ಷ ರೂಪಾಯ ನೀಡಬೇಕಿತ್ತು. ೨೦೨೧ ರಲ್ಲಿ ಕೂಡ ಪಾಕಿಸ್ತಾನಿ ವಿಮಾನ ಕುಲಾಲಂಪುರ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅದರ ನಂತರ ಹಣ ನೀಡುವ ಆಶ್ವಾಸನೆ ನೀಡಿದ ನಂತರ ಮಲೇಶಿಯಾದಿಂದ ವಿಮಾನ ಹಿಂತಿರುಗಿಸಲಾಗಿತ್ತು; ಆದರೆ ಅದರ ನಂತರ ಕೂಡ ಪಾಕಿಸ್ತಾನ ಹಣ ನೀಡದೆ ಇರುವುದರಿಂದ ಮಲೇಶಿಯಾ ಮತ್ತೊಮ್ಮೆ ವಿಮಾನ ವಶಪಡಿಸಿಕೊಂಡಿದೆ.