ಅಹಿಂಸೆಯ ಮೂಲಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಿಸಬಹುದು ! – ಜೈನ ಮುನಿ

ಆಚಾರ್ಯ ಧರ್ಮಧುರಂದರ ಸೂರಿ ಮಹಾರಾಜ

ಇಸ್ಲಾಮಾಬಾದ (ಪಾಕಿಸ್ತಾನ) – ಅಹಿಂಸೆಯಿಂದ ಭಾರತ ಮತ್ತು ಪಾಕಿಸ್ತಾನ ಇವರಲ್ಲಿನ ಸಂಬಂಧ ಸುಧಾರಿಸಬಹುದು. ಅಹಿಂಸೆಯೆ ಜಗತ್ತಿನಲ್ಲಿನ ಹದಗೆಟ್ಟಿರುವ ದೇಶಗಳ ಸಂಬಂಧಗಳು ಸುಧಾರಿಸ ಬಹುದು; ಆದರೆ ರಾಜಕೀಯ ನಡೆಸುವವರು ಹೀಗೆ ಆಗಲು ಬಿಡುವುದಿಲ್ಲ, ಎಂದು ಪಾಕಿಸ್ತಾನದ ಪ್ರವಾಸದಲ್ಲಿರುವ ಆಚಾರ್ಯ ಧರ್ಮಧುರಂದರ ಸೂರಿ ಮಹಾರಾಜ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಲಾಹೋರ್ ಮತ್ತು ಗುಂಜಾರವಾಲ ಈ ಎರಡು ನಗರಗಳಿಗೆ ಭೇಟಿ ನೀಡುವವರಿದ್ದಾರೆ.

ಸ್ವಾತಂತ್ರ್ಯದ ನಂತರ ಮೊಟ್ಟ ಮೊದಲು ಒಬ್ಬ ಜೈನಮುನಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಈಗ ಒಬ್ಬ ಜೈನ ಕೂಡ ಉಳಿದಿಲ್ಲ. ಆದರೂ ಕೂಡ ಮುನಿಗಳ ಸ್ವಾಗತಕ್ಕಾಗಿ ನೂರಾರು ಜನರು ಬಂದಿದ್ದರು. ಆ ಸಮಯದಲ್ಲಿ ಲಾಹೋರದ ಜೈನಮಂದಿರದ ಜೀರ್ಣೋದ್ಧಾರದ ಬಗ್ಗೆ ಧರ್ಮಧುರಂದರ ಸೂರಿ ಮಹಾರಾಜರು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಮಂದಿರ ಕನಿಷ್ಠ ಜೈನಮಂದಿರದ ಹಾಗೆ ಕಾಣಬೇಕು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಜಿಹಾದಿ ಪಾಕಿಸ್ತಾನ ಇದು ಎಂದಿಗೂ ಒಪ್ಪುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !