ಪೊಲೀಸರು ವಿಫಲಗೊಳಿಸಿದ ಅಜಂಗಢ ಗ್ರಾಮದಲ್ಲಿ ಹಿಂದೂಗಳ ಮತಾಂತರದ ಸಂಚು !

೧೩ ಮತಾಂಧ ಮುಸಲ್ಮಾನರ ಸಹಿತ ೫ ಹಿಂದೂಗಳ ಬಂಧನ !

ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಮತಾಂತರ !

ಆಝಾಮಗಡ (ಉತ್ತರಪ್ರದೇಶ) – ಇಲ್ಲಿಯ ಚಿರಕಿಹಿಟ ಗ್ರಾಮದಲ್ಲಿ ಹಿಂದೂಗಳನ್ನು ಮುಸಲ್ಮಾನನ್ನಾಗಿ ಮಾಡುವ ಷಡ್ಯಂತ್ರ ಪೊಲೀಸರು ವಿಫಲಗೊಳಿಸಿ ೧೩ ಮತಾಂಧ ಮುಸಲ್ಮಾನರನ್ನು ಮತ್ತು ೫ ಹಿಂದೂಗಳನ್ನು ಬಂಧಿಸಿದ್ದಾರೆ. ಇದರಲ್ಲಿ ೨ ಮಹಿಳೆಯರು ಸೇರಿದ್ದಾರೆ. ಸಜ್ಜಾದ ಇವನು ಈ ಷಡ್ಯಂತ್ರದ ಮುಖ್ಯ ಸೂತ್ರಧಾರನಾಗಿದ್ದು ಅವನನ್ನು ಕೂಡ ಬಂಧಿಸಲಾಗಿದೆ.

ಇಲ್ಲಿಯ ಅವಧೇಶ ಪಾಸಿ ಇವರ ಮನೆಯಲ್ಲಿ ರಾತ್ರಿ ಇಡಿ ಮುಸಲ್ಮಾನ ಧರ್ಮಗುರುಗಳ ಛಾಯಾಚಿತ್ರ ಮತ್ತು ತ್ರಿಶೂಲ ನಿಲ್ಲಿಸಿ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತಿತ್ತು. ಈ ಮತಾಂತರಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಸ್ವರೂಪ ನೀಡಿ ಇಲ್ಲಿ ಕವ್ವಾಲಿಯ ಆಯೋಜನೆ ಮಾಡಲಾಗಿತ್ತು. ಈ ಮನೆಯಲ್ಲಿ ಗೋರಿಯ ಹಾಗೆ ವಾಸ್ತು ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಕಾಯಿಲೆ ವಾಸಿ ಮಾಡುವ ದಾವೆ ಮಾಡಲಾಗಿತ್ತು. ಅವಧೇಶ ಪಾಸಿ ಕಳೆದ ೫ ವರ್ಷಗಳಿಂದ ಬಾರಾಬಂಕಿಯ ದೇವಾ ಶರೀಫ್ ದರ್ಗಾಗೆ ಹೋಗುತ್ತಿದ್ದ. ಅಲ್ಲಿ ಸಜ್ಜಾದ ಭೂತ ಓಡಿಸುವ ಕೆಲಸ ಮಾಡುತ್ತಿದ್ದನು. ಅವನು ಅವದೇಶ ಇವರ ಬ್ರೈನ್ ವಾಶ್ ಮಾಡಿದ್ದನು. ಅವಧೇಶರ ಮನೆಯಲ್ಲಿ ಬಂದಿರುವ ಹಿಂದೂಗಳನ್ನು ಮತಾಂತರವಾಗಲು ಹೇಳಲಾಗುತ್ತಿತ್ತು. ಅವರಿಗೆ ಹಿಂದೂ ಧರ್ಮದ ವಿರುದ್ಧ ಪ್ರಚೋದಿಸಲಾಗುತ್ತಿತ್ತು. ಒಬ್ಬ ವ್ಯಕ್ತಿಯಿಂದ ಪೊಲೀಸರಿಗೆ ಈ ಮಾಹಿತಿ ದೊರೆತಿರುವುದರಿಂದ ಪೊಲೀಸರು ಅಲ್ಲಿಗೆ ಹೋಗಿ ಮಾಹಿತಿ ಪಡೆದು ಕ್ರಮ ಕೈಗೊಂಡರು.

ಸಂಪಾದಕರ ನಿಲುವು 

* ಹಿಂದೂಗಳಿಗೆ ಧರ್ಮಶಿಕ್ಷಣದ ಎಷ್ಟು ಅವಶ್ಯಕತೆ ಇದೆ, ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಬಹಿರಂಗವಾಗಿದೆ. ಈಗ ಹಿಂದುತ್ವನಿಷ್ಠ ಸಂಘಟನೆಗಳಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದಕ್ಕಾಗಿ ಕೃತಿಶೀಲರಾಗುವ ಅವಶ್ಯಕತೆ ಇದೆ !