ಪೊಲೀಸರು ವಶಕ್ಕೆ ಪಡೆದು ಮಾನಸಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರು !
ಬಾಲಿ (ಇಂಡೋನೇಶಿಯಾ) – ಇಲ್ಲಿಯ ಒಂದು ಹಿಂದೂ ದೇವಸ್ಥಾನದಲ್ಲಿ ನಗ್ನಾವಸ್ಥೆಯಲ್ಲಿ ಪ್ರವೇಶಿಸಿದ ಜರ್ಮನಿಯ ಮಹಿಳಾ ಪ್ರವಾಸಿಯನ್ನು ಬಂಧಿಸಿ, ಅವಳನ್ನು ಮಾನಸಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾರಜಾ ತುಶಿಂಕ್ಸಿ ಹೆಸರಿನ ಈ ಮಹಿಳೆ ಸರಸ್ವತಿ ಉಬುದ ದೇವಸ್ಥಾನದ ನೃತ್ಯದ ಕಾರ್ಯಕ್ರಮವನ್ನು ನೋಡಲು ಬಂದಿದ್ದಳು; ಆದರೆ ಅವಳಿಗೆ ತಿಕೀಟು ಸಿಕ್ಕಿರಲಿಲ್ಲ. ಅದರಿಂದ ಅವಳು ಬಟ್ಟೆ ಕಳಚಿ ಒಳಗೆ ಪ್ರವೇಶಿಸಿದಳು.
1. ಪೊಲೀಸ ವಕ್ತಾರರು, ಮಹಿಳೆಯ ಈ ಕೃತ್ಯದಿಂದ ಬಾಲಿಯ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಇದರಿಂದ ದೇವಸ್ಥಾನದ ಶುದ್ಧೀಕರಣಕ್ಕಾಗಿ ವಿಧಿಗಳನ್ನು ಮಾಡಲಾಗಿದೆಯೆಂದು ಹೇಳಿದರು.
2. ಈ ಹಿಂದೆಯೂ ಇದೇ ರೀತಿಯ ಒಂದು ಘಟನೆ ನಡೆದಿತ್ತು. ರಷ್ಯಾದ ಮಹಿಳೆಯು ಮಂದಿರದ ಪರಿಸರದ ಪವಿತ್ರ ಅರಳಿ ಮರದ ಕೆಳಗೆ ನಗ್ನಳಾಗಿ ಛಾಯಾಚಿತ್ರವನ್ನು ತೆಗೆದಿದ್ದಳು. ತದನಂತರ ಹಿಂದೂಗಳು ಅದನ್ನು ವಿರೋಧಿಸಿದಾಗ ಆ ಮಹಿಳೆಯನ್ನು ಮರಳಿ ರಷ್ಯಾಗೆ ಕಳುಹಿಸಲಾಗಿತ್ತು.
Bali sends German tourist who stripped in temple for mental health treatment https://t.co/mJZ09RdKmX
— South China Morning Post (@SCMPNews) May 26, 2023