ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆ ರಾಷ್ಟ್ರಪತಿಗಳಿಂದ ಮಾಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕೃತ !

ನವದೆಹಲಿ – ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆ ಯಾರು ಮಾಡಬೇಕು ? ಇದರ ಬಗ್ಗೆ ನಡೆದಿರುವ ವಿವಾದದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿ ತಿರಸ್ಕರಿಸಿದೆ. ಹೊಸ ಕಟ್ಟಡದ ಉದ್ಘಾಟನೆ ರಾಷ್ಟ್ರಪತಿಗಳಿಂದ ಮಾಡಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಿಂದ ಲೋಕಸಭಾ ಸಚಿವಾಲಯಕ್ಕೆ ಆದೇಶ ನೀಡಲು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ನ್ಯಾಯಲಯವು, ಈ ಅರ್ಜಿ ಏಕೆ ದಾಖಲಿಸಲಾಗಿದೆ ? ಎಂಬುದು ನಮಗೆ ತಿಳಿದಿದೆ, ಇಂತಹ ಅರ್ಜಿಗಳ ಬಗ್ಗೆ ಗಮನಹರಿಸುವುದು ಇದು ಸರ್ವೋಚ್ಚ ನ್ಯಾಯಾಲಯದ ಕೆಲಸವಲ್ಲ. ಈ ಅರ್ಜಿಯ ಲಾಭ ಯಾರಿಗೆ ಆಗುವುದು ? ಎಂದು ಅರ್ಜಿದಾರನಿಗೆ ಪ್ರಶ್ನೆ ಕೇಳಿದಾಗ ಅದರ ನೇರ ಉತ್ತರ ನೀಡಲು ಸಾಧ್ಯವಾಗಲಿಲ್ಲ, ಎಂದು ನ್ಯಾಯಾಲಯ ಹೇಳಿತು.