ಮುಸಲ್ಮಾನ ಹುಡುಗಿಯರು ಹಿಂದುಗಳ ಜೊತೆ ಕಾಣಿಸಿದರೆ ಅವರನ್ನು ಥಳಿಸುವ ಇಸ್ಲಾಮಿ ಗುಂಪು ಸಕ್ರಿಯ !

ಬಿಜನೌರ (ಉತ್ತರ ಪ್ರದೇಶ) – ಇತ್ತೀಚಿನ ಕಾಲದಲ್ಲಿ ಮುಸಲ್ಮಾನ ಹುಡುಗಿಯರು ಹಿಂದುಗಳ ಜೊತೆ ಕಂಡು ಬಂದರೆ ಇಸ್ಲಾಮಿ ಗುಂಪಿನಿಂದ ಥಳಿತ ಮತ್ತು ದೌರ್ಜನ್ಯ ನಡೆದಿರುವ ಅನೇಕ ಘಟನೆಗಳು ಘಟಿಸಿವೆ. ಈ ಪ್ರಕರಣದಲ್ಲಿ ಬಿಜನೌರನಲ್ಲಿ ಪೊಲೀಸರು ಇಂತಹ ನಾಲ್ಕು ಮುಸಲ್ಮಾನ ಯುವಕರನ್ನು ಬಂಧಿಸಿದ್ದಾರೆ. ಅಲ್ಲಮಾಸ, ಫರದಿನ, ಮಹಮ್ಮದ್ ಅನಸ್ ಮತ್ತು ಅಮೀರ್ ಎಂದು ಹೆಸರುಗಳಾಗಿವೆ. ಈ ಮುಸಲ್ಮಾನ ಯುವಕರು ಪರಿಸರದಲ್ಲಿ ಸುತ್ತಾಡುತ್ತಾರೆ. ಮುಸಲ್ಮಾನ ಹುಡುಗಿ ಹಿಂದುಗಳ ಜೊತೆ ಕಾಣಿಸಿದರೆ, ಅವರನ್ನು ತಡೆದು ವಿಡಿಯೋ ತಯಾರಿಸುವುದು. ಅದರ ನಂತರ ಹುಡುಗಿಯ ಕುಟುಂಬದವರಿಗೆ ಇದರ ಮಾಹಿತಿ ನೀಡುತ್ತಾರೆ.

ಒಂದು ವಾರ್ತಾ ವಾಹಿನಿ ನೀಡಿರುವ ಮಾಹಿತಿ ಪ್ರಕಾರ, ಅಫಝಲಗಡದ ನಿವಾಸಿ ವಿನೋದ ಇವರು ಧಾಮಪುರದಿಂದ ಹೋಗುತ್ತಿದ್ದರು. ದಾಮಪುರದಲ್ಲಿ ವಿನೋದ ಇವರ ಮುಸಲ್ಮಾನ ಸ್ನೇಹಿತನ ಸಹೋದರಿಯ ಜೊತೆ ವಾಹನದ ದಾರಿ ಕಾಯುತ್ತಾ ನಿಂತಿದ್ದನು. ಅವನು ವಿನೋದ ಅವರಿಗೆ ಸಹೋದರಿಯನ್ನು ಮನೆಗೆ ತಲುಪಿಸಲು ವಿನಂತಿಸಿದನು. ವಿನೋದ ಸ್ನೇಹಿತನ ಇಬ್ಬರು ಸಹೋದರಿಯ ಜೊತೆಗೆ ಗಾಡಿಯ ಮೇಲೆ ಹೊರಟನು. ಡೆಹ್ರಾಡೂನ್ – ನೈನಿತಾಲ್ ಮಹಾಮಾರ್ಗದಲ್ಲಿ ಮೂರು ವಾಹನ ಸವಾರರು ಅವರನ್ನು ಹಿಂಬಾಲಿಸಿದರು. ಅವರು ವಿನೋದನ ವಾಹನ ತಡೆದರು. ಅವರು ವಿನೋದನಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಾ ಥಳಿಸಿದರು ಮತ್ತು ಮುಸಲ್ಮಾನ ಹುಡುಗಿ ಸಹಿತ ಅವನ ವಿಡಿಯೋ ತಯಾರಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮೇಲಿನ ನಾಲ್ಕು ಯುವಕರನ್ನು ಬಂಧಿಸಿದ್ದಾರೆ.

ಇತ್ತೀಚಿನ ಸಮಯದಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ಇಂತಹ ಅನೇಕ ಘಟನೆಗಳು ಘಟಿಸಿವೆ. ಹಿಂದೂ ಯುವಕ ಮುಸಲ್ಮಾನ ಹುಡುಗಿಯ ಜೊತೆ ಕಾಣಿಸಿದರೆ ಅವರನ್ನು ಮುಸಲ್ಮಾನ ಗುಂಪಿನಿಂದ ಗುರಿ ಮಾಡಲಾಗುತ್ತಿದೆ. ಮೇ ೨೧, ೨೦೨೩ ರಂದು ಉತ್ತರ ಪ್ರದೇಶದ ಮುರಾದಾಬಾದನ ಒಬ್ಬ ಮುಸಲ್ಮಾನ ಹುಡುಗಿಯನ್ನು ಹಿಂದೂ ಹುಡುಗನ ಜೊತೆ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿರುವುದನ್ನು ನೋಡಿ ಮುಸಲ್ಮಾನ ಯುವಕರ ಒಂದು ಗುಂಪು ಹಿಂದೂ ಹುಡುಗನನ್ನು ಹಿಗ್ಗಮುಗ್ಗಾ ಥಳಿಸಿತು.