ನನಗೆ ಸ್ವ ಇಚ್ಛೆಯಿಂದ ಸನಾತನ ಧರ್ಮವನ್ನು ಸ್ವೀಕರಿಸುವುದಿದೆ ! – ಬಾಂಗ್ಲಾದೇಶದ ಮುಸಲ್ಮಾನ ಯುವತಿ

ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಕಥಾವಾಚನದ ಸಮಯದಲ್ಲಿ ಬಾಂಗ್ಲಾದೇಶದಿಂದ ಬಂದಿದ್ದ ಮುಸಲ್ಮಾನ ಯುವತಿಯಿಂದ ಮನವಿ

ಬಾಲಾಘಾಟ (ಮಧ್ಯಪ್ರದೇಶ) – ಇಲ್ಲಿಯ ಪರಸವಾಡಾ ಪ್ರದೇಶದಲ್ಲಿ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ರಾಮಕಥಾ ವಾಚನದ ಸಮಯದಲ್ಲಿ ಬಾಂಗ್ಲಾದೇಶಿ ಮುಸಲ್ಮಾನ ಯುವತಿಯು ತನ್ನ ವಿಚಾರವನ್ನು ಮಂಡಿಸಿದಳು. ಶಾಸ್ತ್ರಿಯವರು ಅವಳನ್ನು ವ್ಯಾಸಪೀಠದ ಮೇಲೆ ಕರೆಸಿದ್ದರು. ಅವಳು, ಭಗವಾನ ರಾಮನ ಹೆಸರನ್ನು ಹೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. `ಯೂ-ಟ್ಯೂಬ’ ಮೇಲೆ ಹಿಂದೂ ಧರ್ಮದ ಭಜನೆ, ಕೀರ್ತನೆ, ಧಾರ್ಮಿಕ ಕಥೆ ಮತ್ತು ನಿಮ್ಮ (ಧೀರೇಂದ್ರಕೃಷ್ಣ ಶಾಸ್ತ್ರಿಯವರ) ರಾಮಕಥೆಯನ್ನು ನೋಡುತ್ತೇನೆ ಈಗ ನನಗೆ ಸನಾತನ ಧರ್ಮವನ್ನು ಸ್ವೀಕರಿಸಬೇಕಿದೆ. ಸನಾತನ ಧರ್ಮಕ್ಕಿಂತ ಯಾವುದೇ ದೊಡ್ಡ ಧರ್ಮವಿಲ್ಲವೆಂದು ಹೇಳಿದಳು.

ಧೀರೇಂದ್ರಕೃಷ್ಣ ಶಾಸ್ತ್ರಿಯವರು ಈ ಯುವತಿಯನ್ನು, `ನೀನು ಯಾರ ಒತ್ತಡದಿಂದ ಹೀಗೆ ಹೇಳುತ್ತಿದ್ದೀಯಾ?’ ಎಂದು ಕೇಳಿದಾಗ, ಅವಳು, `ನಾನು ಸ್ವ- ಇಚ್ಛೆಯಿಂದ ವೀಸಾ ತೆಗೆದುಕೊಂಡು ಭಾರತಕ್ಕೆ ಬಂದಿದ್ದು, ನನ್ನ ಮೇಲೆ ಯಾರ ಒತ್ತಡವೂ ಇಲ್ಲ’ ಎಂದು ಹೇಳಿದಳು. ಇದಕ್ಕೆ ಶಾಸ್ತ್ರಿಯವರು `ಈಗ ನೀನು ನಿನ್ನ ಧರ್ಮದಲ್ಲಿಯೇ ಇರು. ನಮ್ಮ ಮೇಲೆ ಉಪದ್ರವ ನಿರ್ಮಾಣ ಮಾಡುವ ಆರೋಪವನ್ನು ಮಾಡಲಾಗುತ್ತಿದೆ; ಆದರೆ ನಾನು ಯಾವುದೇ ಧರ್ಮದ ವಿರುದ್ಧ ಮತ್ತು ಮತಾಂತರದ ಮೇಲೆ ನನ್ನ ವಿಶ್ವಾಸವಿಲ್ಲ. ಶ್ರೀರಾಮನಾಮದ ಮೇಲೆ ಮತ್ತು ಪುನರ್ ಪ್ರವೇಶದ ಮೇಲೆ ನನ್ನ ವಿಶ್ವಾಸವಿದೆಯೆಂದು ಹೇಳಿದರು.