ಜುಲೈನಲ್ಲಿ ಪ್ರದರ್ಶನಗೊಳ್ಳಿಲಿದೆ `ಅಜ್ಮೇರ 92’ ಚಲನಚಿತ್ರ !

ಈ ಚಲನಚಿತ್ರವು ಅಜ್ಮೆರ ದರ್ಗಾದ ಸೇವಕನಿಂದ 250 ಕ್ಕಿಂತಲೂ ಹೆಚ್ಚು ಹಿಂದೂ ಯುವತಿಯರ ಮೇಲೆ ನಡೆದಿರುವ ಬಲಾತ್ಕಾರದ ಪ್ರಕರಣವನ್ನು ಆಧಾರಿಸಿದೆ !

ಮುಂಬಯಿ– `ದಿ ಕಶ್ಮೀರ ಫಾಯಿಲ್ಸ’ ಮತ್ತು `ದಿ ಕೇರಳ ಸ್ಟೋರಿ’ ಈ ಚಲನಚಿತ್ರದಿಂದ ಹಿಂದೂಗಳ ಮೇಲೆ ಮತಾಂಧ ಮತ್ತು ಜಿಹಾದಿ ಭಯೋತ್ಪಾದಕರ ಅತ್ಯಾಚಾರ ಜಗತ್ತಿನ ಎದುರಿಗೆ ಬಹಿರಂಗವಾದ ಬಳಿಕ ಈಗ `ಅಜ್ಮೇರ 92’ ಈ ಚಲನಚಿತ್ರ ಬರುವ ಜುಲೈನಲ್ಲಿ ಪ್ರದರ್ಶನವಾಗಲಿದೆ. ಇದು ರಾಜಸ್ಥಾನದ ಅಜ್ಮೇರನಲ್ಲಿ 1992 ರಲ್ಲಿ ನಡೆದ ಸತ್ಯಕಥೆಯನ್ನು ಆಧರಿಸಿದ ಚಲನಚಿತ್ರವಾಗಿದೆ. ಅಭಿಷೇಕ ದುಧೈಯಾ ಇವರು ಈ ಚಲನಚಿತ್ರದ ಸಹನಿರ್ಮಾಪಕರು ಮತ್ತು ನಿರ್ದೇಶಕರಾಗಿದ್ದಾರೆ. ಹಾಗೆಯೇ `ಟಿಪ್ಸ್’ ಕಂಪನಿಯ ಮಾಲೀಕರಾದ ಕುಮಾರ ತೌರಾನಿಯವರು ನಿರ್ಮಾಪಕರಾಗಿದ್ದಾರೆ.

ಅಜ್ಮೇರ ದರ್ಗದ ಸೇವಕ ಮತ್ತು ಇತರೆ ಮತಾಂಧ ಮುಸಲ್ಮಾನರಿಂದ 250 ಕ್ಕಿಂತಲೂ ಹೆಚ್ಚು ವಿಶ್ವವಿದ್ಯಾಲಯದ ಹಿಂದೂ ಯುವತಿಯರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರ ಮೇಲೆ ಬಲಾತ್ಕಾರ ಮಾಡಿರುವ ಘಟನೆ ನಡೆದಿತ್ತು. ಇದರಲ್ಲಿ ಸಿಲುಕಿದ್ದ ಯುವತಿಯರನ್ನು ವೈಶ್ಯಾವಾಟಿಕೆಗೆ ದೂಡಲಾಗಿತ್ತು. ಈ ಪ್ರಕರಣ ಬಹಿರಂಗವಾದ ಬಳಿಕ ದೇಶಾದ್ಯಂತ ಆಕ್ರೋಶದ ಅಲೆಯೆದ್ದಿತ್ತು. ಇದರಲ್ಲಿ ಅನೇಕ ಜನರನ್ನು ಬಂಧಿಸಲಾಯಿತು ಹಾಗೆಯೇ ಅನೇಕ ಆರೋಪಿಗಳು ಇದುವರೆಗೂ ಪರಾರಿಯಾಗಿದ್ದಾರೆ.