|
ವಾಸ್ಕೊ (ಗೋವಾ), ಮೇ ೨೫ (ವಾರ್ತೆ) – ವಿಶ್ವದಲ್ಲಿನ ಅನೇಕ ದೇಶಗಳು ಭಾರತಕ್ಕಿಂತಲೂ ಹೆಚ್ಚು ಸಂಪನ್ನವಾಗಿದ್ದು ಸಂಪತ್ತಿ, ಶಸ್ತ್ರಾಸ್ತ್ರಗಳು ಮತ್ತು ವಿಕಾಸದಲ್ಲಿ ಬಹಳ ಮುಂದೆ ಇರುವರು; ಆದರೆ ಭಾರತ ಅಧ್ಯಾತ್ಮ ಕ್ಷೇತ್ರದಲ್ಲಿ ಗುರುವಾಗಿದೆ. ಆಧ್ಯಾತ್ಮವೆ ಭಾರತದ ದೊಡ್ಡ ಶಕ್ತಿಯಾಗಿದೆ. ಜಗತ್ತಿನಾದ್ಯಂತ ಯಾವುದೆಲ್ಲ ಸಮಸ್ಯೆಗಳಿವೆ, ಅದಕ್ಕೆ ಪರಿಹಾರ ಆಧ್ಯಾತ್ಮದಲ್ಲಿ ಸಿಗುತ್ತೆದೆ. ಈ ದೃಷ್ಟಿಯಿಂದಲೇ ಅಂತರರಾಷ್ಟ್ರೀಯ ‘ಜಿ ೨೦’ ಯ ಅಂತರ್ಗತವಾಗಿರುವ ‘ಸಿ ೨೦’ ಯ ವಿವಿಧ ಕಾರ್ಯಕ್ರಮದ ಆಯೋಜನೆ ಮಾಡಿದೆ. ಗೋವಾದಲ್ಲಿ ಇದೇ ಮೊದಲಬಾರಿ ‘ಸಿ ೨೦’ ಪರಿಷತ್ತಿನ ಈ ವಿವಿಧತೆ, ಸರ್ವಸಮಾವೇಶಕ ಮತ್ತು ಪರಸ್ಪರ ಗೌರವ’ ಈ ವಿಷಯದ ಬಗ್ಗೆ ನಡೆಯಲಿದೆ. ಮೇ ೨೭, ೨೦೨೩ ರಂದು ಬೆಳಿಗ್ಗೆ ೧೦ ರಿಂದ ಸಾಯಂಕಾಲ ೫ ರ ವರೆಗೆ ‘ರಾಜಹಂಸ ನೌದಳ ಸಭಾಗೃಹ’ ದಾಬೋಲಿ, ವಾಸ್ಕೊ ಇಲ್ಲಿ ಈ ಪರಿಷತ್ ನಡೆಯುವುದು. ಈ ಪರಿಷತ್ತಿನಲ್ಲಿ ಸಹಭಾಗಿ ಆಗುವುದಕ್ಕೆ ‘ಸಿ ೨೦’ ಪರಿಷತ್ತಿನ ಅಂತರರಾಷ್ಟ್ರೀಯ ಸಮನ್ವಯಕರು ಹಾಗೂ ನವದೆಹಲಿಯ ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್’ ನ ಅಧ್ಯಕ್ಷರಾದ ಪ್ರಾ. ಡಾ. ಶಶಿ ಬಾಲಾ ಇವರು ಕರೆ ನೀಡಿದ್ದಾರೆ. ಅವರು ಪಣಜಿಯ ಹೋಟೆಲ್ ಡೇಲಮನ್ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆ ಸಮನ್ವಯಕರು ಸೌ. ಶ್ವೇತಾ ಮತ್ತು ಡಾ.(ಸೌ) ಅಮೃತಾ ದೇಶಮನೆ ಇವರು ಉಪಸ್ಥಿತರಿದ್ದರು.
೧. ‘ಸಿ ೨೦ ಪರಿಷತ್ತಿನ’ ಆಯೋಜನೆ ಗೋವಾ ಸರಕಾರ, ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ’, ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್’ ಮತ್ತು ‘ಭಾರತೀಯ ವಿದ್ಯಾ ಭವನ, ನವದೆಹಲಿ’, ಈ ಸಂಸ್ಥೆಗಳ ಜಂಟಿಯಾಗಿ ನಡೆಸಲಿದೆ. ಭಾರತದ ‘ಸಿ ೨೦’ ಪರಿಷತ್ತಿನ ಅಧ್ಯಕ್ಷಸ್ಥಾನ ‘ಮಾತಾ ಅಮೃತಾನಂದಮಯಿ ಮಠ’ದ ಸಂಸ್ಥಾಪಕಿ ಪರಮಪೂಜ್ಯ ಮಾತ ಅಮೃತಾನಂದಮಯಿ ಇವರು ಅಲಂಕರಿಸುವರು. ಈ ಪರಿಷತ್ತಿಗೆ ಗೋವಾದ ಪ್ರವಾಸೋದ್ಯಮ ಸಚಿವ ಶ್ರೀ. ರೋಹನ ಖವಂಟೆ ಮತ್ತು ಸಂಸ್ಕೃತಿಕ ಸಚಿವ ಶ್ರೀ. ಗೋವಿಂದ ಗಾವಡೇ ಇವರ ಪ್ರಮುಖ ಉಪಸ್ಥಿತಿ ಕೂಡ ಲಭಿಸುವುದು, ಎಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಸೌ. ಶ್ವೇತಾ ಇವರು ಈ ಸಮಯದಲ್ಲಿ ಮಾಹಿತಿ ನೀಡಿದರು. ಭಾರತದ ‘ಜಿ-೨೦’ ಅಧ್ಯಕ್ಷ ಸ್ಥಾನ ಜಗತ್ತಿಗೆ ‘ಉಪಾಯ, ಸುಸಂವಾದ ಮತ್ತು ಆಸೆ ಇದರ ಸಂದೇಶ ನೀಡುವುದಾಗಿರಲಿ’, ಅದಕ್ಕಾಗಿ ಎಲ್ಲರು ಒಟ್ಟಾಗಿ ಇದನ್ನು ಬೆಂಬಲಿಸಬೇಕು, ಎಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರು ಕರೆ ನೀಡಿದ್ದಾರೆ.
೨. ಪ್ರಾ. ಡಾ. ಶಶಿ ಬಾಲಾ ಮಾತು ಮುಂದುವರಿಸಿ, ಆರ್ಥಿಕ ತೊಂದರೆ, ಹವಾಮಾನ ಬದಲಾವಣೆ, ಭಯೋತ್ಪಾದನೆ, ಮಹಾಮಾರಿ ಇಂತಹ ಅಂತರರಾಷ್ಟ್ರೀಯ ಸಮಸ್ಯೆಯ ವಿರುದ್ಧ ಹೋರಾಡುವುದು ಹಾಗೂ ಆಹಾರ, ಗೊಬ್ಬರ, ವೈದ್ಯಕೀಯ ಉತ್ಪಾದನೆ ಇದರ ಅಂತರರಾಷ್ಟ್ರೀಯ ಪೂರೈಕೆ ರಾಜಕೀಯದ ಪ್ರಭಾವದಿಂದ ಹೊರ ತರುವುದು, ಭೂ ರಾಜಕೀಯ ಒತ್ತಡ ತಪ್ಪಿಸುವುದು, ಮಾನವೀಯತೆಗಾಗಿ ಕಾರ್ಯ ಮಾಡುವುದು ಹಾಗೂ ಯುದ್ಧ ಮತ್ತು ಭಯೋತ್ಪಾದನೆ ನಿಲ್ಲಿಸುವುದು ಈ ಉದ್ದೇಶದಿಂದ ‘ಜಿ-೨೦’ ನಿರ್ಮಾಣವಾಯಿತು. ಆದ್ದರಿಂದ ‘ವಸುದೈವ ಕುಟುಂಬಕಂ’ (ಸಂಪೂರ್ಣ ಪೃಥ್ವಿ ಒಂದು ಕುಟುಂಬವಾಗಿದೆ.) ಇದು ‘ಜಿ-೨೦’ಯ ಬ್ರಿದವಾಕ್ಯವಿದೆ. ಈ ವರ್ಷ ‘ಜಿ-೨೦’ ಪರಿಷತ್ತಿನ ಅಧ್ಯಕ್ಷ ಸ್ಥಾನ ಭಾರತದ ಬಳಿ ಇದೆ. ‘ಜಿ-೨೦’ಯ ಅಂತರ್ಗತ ‘ಸಿ-೨೦’ ಅರ್ಥಾತ್ ಸಿವಿಲ್ ೨೦ ಯ # YouAre TheLigtht , ಈ ಬ್ರಿದವಾಕ್ಯ ಇರುವುದು. ಈ ‘ಸಿ-೨೦’ ಪರಿಷತ್ತಿನ ಅಂತರ್ಗತ ಆರೋಗ್ಯ, ಪರಿಸರ, ಶಿಕ್ಷಣ, ತಂತ್ರಜ್ಞಾನ, ಪಾರಂಪಾರಿಕ ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆ ಮುಂತಾದ ೧೪ ರೀತಿಯ ಗುಂಪು ಕಾರ್ಯನಿರತವಾಗಿದೆ. ಅದರಲ್ಲಿ ಕೇವಲ ವಿವಿಧತೆ, ಸಮಾವೇಶಕ ಮತ್ತು ಪರಸ್ಪರ ಗೌರವ’ ಈ ವಿಷಯದ ಬಗ್ಗೆ ‘ಸಿ-೨೦’ ಪರಿಷತ್ತಿನ ಆಯೋಜನೆ ಭಾರತದ ದೆಹಲಿ, ಬಿಲಾಸಪುರ, ರಾಂಚಿ, ಹಮೀರಪುರ, ಇಂದೋರ್, ನಾಗಪುರ, ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ ನಡೆದಿದ್ದು ಇಂಡೋನೇಷ್ಯಾ, ಥೈಲ್ಯಾಂಡ್ ಮುಂತಾದ ದೇಶಗಳಲ್ಲಿ ಆನ್ಲೈನ ಪರಿಷತ್ತುಗಳು ನಡೆದಿದೆ. ಇನ್ನು ಮುಂದೆ ೧೦ ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಈ ಪರಿಷತ್ತಿನ ಆಯೋಜನೆ ಆಗುವುದು. ಈ ಎಲ್ಲಾ ೧೪ ವಿಷಯಗಳು ಬಗ್ಗೆ ‘ಸಿ-೨೦’ಯ ದೇಶಾದ್ಯಂತ ಕಾರ್ಯಕ್ರಮಗಳಲ್ಲಿ ಎರಡು ಸಾವಿರಕ್ಕಿಂತಲೂ ಹೆಚ್ಚಿನ ಸಂಸ್ಥೆ ಮತ್ತು ಸಂಘಟನೆಗಳು ಸಹಭಾಗಿ ಆಗಿದ್ದವು.