ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ರಾಜ್ಯ ಸರಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಿದೆ. ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಹಿಂದೂ ರಾಷ್ಟ್ರದ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಅವರ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಅವರ ವಿರೋಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ಸಂಘಟನೆಗಳು ಅವರಿಗೆ ಸವಾಲುಗಳನ್ನು ನೀಡಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಲು ಸರಕಾರ ನಿರ್ಧರಿಸಿದೆ.
ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಜೀವನಾಧಾರಿತ ಸಿನೆಮಾ ಬರಲಿದೆ
‘ಬಾಗೇಶ್ವರ್ ಧಾಮ್ ಸರಕಾರ’ ಈ ಹೆಸರಿನ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಜೀವನಾಧಾರಿತ ಚಿತ್ರವು ನಿರ್ಮಿಸಲಾಗುವುದು. ವಿನೋದ್ ತಿವಾರಿ ಅವರು ಈ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹಿಂದಿ ಸಹಿತ ಹಲವು ಭಾಷೆಗಳಲ್ಲಿ ಚಲನಚಿತ್ರ ನಿರ್ಮಾಣವಾಗಲಿದೆ.
Bageshwar Dham’s #DhirendraShastri gets Y-category security from Madhya Pradesh govt@ReporterRavish | https://t.co/4PHNUJrSig
— IndiaToday (@IndiaToday) May 24, 2023
‘ವೈ’ ಶ್ರೇಣಿಯ ಭದ್ರತೆ ಎಂದರೇನು ?
ದೇಶದಲ್ಲಿ ಭದ್ರತಾ ವ್ಯವಸ್ಥೆಗಳಲ್ಲಿ ಹಲವು ವರ್ಗಗಳಿವೆ. ಗುಪ್ತಚರ ವರದಿಗಳ ಆಧಾರದ ಮೇಲೆ ಒದಗಿಸಬೇಕಾದ ಭದ್ರತೆಯ ಪ್ರಕಾರವನ್ನು ನಿರ್ಣಯಿಸಲಾಗುತ್ತದೆ. ದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ೪ ಹಂತಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ‘ಝೆಡ್ ಪ್ಲಸ್’ ಶ್ರೇಣಿಯ ಭದ್ರತೆ ಅತ್ಯುನ್ಯತ ಎಂದು ಪರಿಗಣಿಸಲಾಗಿದೆ. ನಂತರ ‘ಝೆಡ್’ ‘ವೈ’ ಮತ್ತು ‘ಎಕ್ಸ’ ಈ ಭದ್ರತಾ ವ್ಯವಸ್ಥೆಗಳಿವೆ. ‘ವೈ’ ಶ್ರೇಣಿಯ ಭದ್ರತೆಯಲ್ಲಿ ೧೧ ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ ೧ ಅಥವಾ ೨ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಇದರ ಅಡಿಯಲ್ಲಿ ೨ ಖಾಸಗಿ ಭದ್ರತಾ ಅಧಿಕಾರಿಗಳೂ ಇರುತ್ತಾರೆ.
ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಿ ! – ಧೀರೇಂದ್ರಕೃಷ್ಣ ಶಾಸ್ತ್ರಿಗಳ ಆಗ್ರಹ* ಮಧ್ಯಪ್ರದೇಶದ ನಕ್ಸಲ ಪೀಡಿತ ಬಾಲಾಘಾಟ್ ಜಿಲ್ಲೆಯಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಹನುಮಂತನ ಪ್ರವಚನದ ಕಾರ್ಯಕ್ರಮ ನಡೆಯುತಿತ್ತು. ಈ ವೇಳೆ ‘ಹಿಂದೂ ರಾಷ್ಟ್ರದ ಸೂತ್ರ ಧಾರ್ಮಿಕವಲ್ಲ ಸಾಂಸ್ಕೃತಿಕವಾಗಿದೆ’ ಎಂದು ಹೇಳಿಕೆ ನೀಡಿ ರಾಮಾಯಣ ಮತ್ತು ಮಹಾಭಾರತ ಎರಡನ್ನೂ ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. |