ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಕುಖ್ಯಾತ ಅಲಿ ಶಿರಾಝಿಯ ಬಂಧನ

ಅಲಿ ಅಝಗರ್ ಶಿರಾಝಿ

ಮುಂಬಯಿ – ಆಸ್ಟ್ರೇಲಿಯಾ ಮತ್ತು ಬ್ರಿಟನ್ ಈ ದೇಶಗಳ ಸಹಿತ ಭಾರತದಲ್ಲಿ ‘ಕೇಟಾಮೈನ್’ ಈ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಲಿ ಅಝಗರ್ ಶಿರಾಝಿನನ್ನು ಮೇ ೨೪ ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮುಂಬಯಿಯ ಕಿಲ್ಲಾ ನ್ಯಾಯಾಲಯವು ಶಿರಾಝಿ ಇವನಿಗೆ ಜೂನ್ ೧ ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ. ಶಿರಾಝಿ ಇವನು ‘ಏರ್ ಕಾರ್ಗೋ’ ನಲ್ಲಿ ಮರೆಮಾಚಿ ವಿದೇಶದಲ್ಲಿ ೮ ಕೋಟಿ ರೂಪಾಯಿಯ ಮಾದಕ ವಸ್ತುಗಳನ್ನು ಮಾರಾಟ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಅವನು ದುಬೈಗೆ ಪಲಾಯನ ಮಾಡುವ ಸಿದ್ಧತೆಯಲ್ಲಿದ್ದನು.

ಮುಂಬಯಿ ಪೊಲೀಸರು ಅಲಿ ಅಝಗರ್ ಶಿರಾಝಿ ಅವನನ್ನು ಕಂಡಲ್ಲಿ ಬಂಧಿಸುವ ನೋಟಿಸ್ ಜಾರಿ ಮಾಡಿದ್ದರು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವ ಅಂತರಾಷ್ಟ್ರೀಯ ಸಾಗಾಣಿಕೆದಾರ ಕೈಲಾಸ ರಾಜಪುತ ಇವನ ನಂಬಿಕಸ್ಥ ಶಿರಾಝಿ ಎಂದು ಹೇಳಲಾಗುತ್ತಿದೆ. ಕೈಲಾಸ ರಾಜಪುತ್ ಇವನಿಗೆ ಕೆಲವು ತಿಂಗಳ ಹಿಂದೆ ಬ್ರಿಟನ್ ನಲ್ಲಿ ಬಂಧಿಸಲಾಗಿತ್ತು, ಅವನನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಕೈಲಾಸ ರಾಜಪೂತ್ ಇವನ ಬಂಧನದ ನಂತರ ಅಲಿ ಅಝಗರ್ ಶಿರಾಝಿ ಇವನು ಅವನ ಮಾದಕ ವಸ್ತುಗಳ ವ್ಯವಹಾರ ನೋಡಿಕೊಳ್ಳುತ್ತಿದ್ದನು. ತನಿಖಾ ದಳದಿಂದ ಮಾರ್ಚ್ 16 ರಂದು ಮುಂಬಯಿಯಲ್ಲಿನ ಅಂಧೇರಿಯಲ್ಲಿ ದಾಳಿ ನಡೆಸಿ ಕೆಜಿ ೭೪೦ ಗ್ರಾಂ, ‘ಕೇಟಾಮೈನ್’ ಇದು ಸುಮಾರು ೮೭ ಲಕ್ಷ ರೂಪಾಯ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರ ನಂತರ ಶಿರಾಝಿ ಕಣ್ಮರೆಯಾಗಿದ್ದನು. ಶಿರಾಝಿನ ಬಂಧನದಿಂದ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ಇನ್ನೂ ಕೆಲವು ಸೂತ್ರಗಳು ಕೈ ಸೇರುವ ಸಾಧ್ಯತೆಯ ಇದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

ಸಂಪಾದಕರ ನಿಲುವು

* ಮಾದಕ ಪದಾರ್ಥಗಳ ಜಾಲ ನಾಶ ಮಾಡದೇ ಇರುವ ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಇಂತಹ ಪೊಲೀಸ ಇಲಾಖೆ ಸಮಾಜಹಿತ ಹೇಗೆ ಕಾಪಾಡುವರು ?