|

ಇಂದೋರ್ (ಮಧ್ಯಪ್ರದೇಶ) – ಇಲ್ಲಿನ ಖಜರಾನಾ ಪ್ರದೇಶದ ಹಿಂದೂ ಹುಡುಗಿಯೊಬ್ಬಳು ತನ್ನ ಮುಸ್ಲಿಂ ಪ್ರೇಮಿ ಫೈಜಾನ್ ಖಾನ್ ವಿರುದ್ಧ ಪೊಲೀಸ್‌ರಲ್ಲಿ ದೂರು ದಾಖಲಿಸಿದ್ದಾಳೆ. ‘ದಿ ಕೇರಳ ಸ್ಟೋರಿ’ ಚಲನಚಿತ್ರ ನೋಡಿದಾಗ ಫೈಜಾನ್ ವಿರುದ್ಧ ದೂರು ದಾಖಲಿಸಲು ಯುವತಿಗೆ ಧೈರ್ಯ ಬಂತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಫೈಜಾನ್ ನನ್ನು ಬಂಧಿಸಿದ್ದಾರೆ.
ಫೈಜಾನ್ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಕಳೆದ ಕೆಲವು ಸಮಯಗಳಿಂದ ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅವಳೊಬ್ಬಳು ಕೆಲಸ ಮಾಡುತ್ತಾಳೆ ಆದರೆ ಅವನು ನಿರುದ್ಯೋಗಿಯಾಗಿದ್ದ. ಕಳೆದ ಹಲವು ತಿಂಗಳಿಂದ ಫೈಜಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ. ಫೈಜಾನ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇಸ್ಲಾಂಗೆ ಮತಾಂತರಗೊಳ್ಳುವಂತೆ ಆಕೆಗೆ ಒತ್ತಡ ಹೇರುತ್ತಿದ್ದ. ಆಕೆ ವಿರೋಧಿಸಿದಾಗ ಆಕೆಯನ್ನು ಥಳಿಸುತ್ತಿದ್ದ. ‘ನೀನು ಇಸ್ಲಾಂ ಧರ್ಮವನ್ನು ಸ್ವೀಕರಿಸದಿದ್ದರೆ ನಿನ್ನ ತಾಯಿ ಮತ್ತು ಸಹೋದರನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕುತ್ತಿದ್ದ.
(ಸೌಜನ್ಯ – Aaj Tak)
ಕೆಲವು ದಿನಗಳ ಹಿಂದೆ ಇಬ್ಬರೂ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿದ್ದರು. ಮೇ ೧೮ ರಂದು ಫೈಜಾನ್ ಆಕೆಗೆ, ‘ನೀನು ಯಾವಾಗ ಮತಾಂತರಗೊಳ್ಳುವುದು?’ ಎಂದು ಪ್ರಶ್ನಿಸಿದ. ಅವಳು ಅದಕ್ಕೆ ವಿರೋಧಿಸಿದಾಗ, ಅವನು ಅವಳನ್ನು ಹೊಡೆದನು. ಇದಾದ ಬಳಿಕ ಆಕೆ ಧೈರ್ಯದಿಂದ ಆತನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ ಎಂದು ಇಂದೋರ್ ಪೊಲೀಸ್ ಅಧಿಕಾರಿ ದಿನೇಶ್ ವರ್ಮಾ ಅವರು ಹೇಳಿದ್ದಾರೆ. ಫೈಜಾನ್ ವಿರುದ್ಧ ಅತ್ಯಾಚಾರ, ಹಲ್ಲೆ ಮತ್ತು ಮತಾಂತರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಎಂದು ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
Madhya Pradesh: Faizan Khan threatens to kill his Hindu girlfriend and her family for not converting to Islam
https://t.co/yiICQDirgA— OpIndia.com (@OpIndia_com) May 20, 2023
ಸಂಪಾದಕರ ನಿಲುವು‘ದಿ ಕೇರಳ ಸ್ಟೋರಿ’ ಚಲನಚಿತ್ರದಿಂದ ಇಂದು ಹಿಂದೂಗಳು ಧರ್ಮ ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳಲಾರಂಭಿಸಿದ್ದಾರೆ. ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡಿ ಸಾಧನೆ ಮಾಡುವ ಸಂಸ್ಕಾರವಾದರೆ, ಹಿಂದೂ ಹುಡುಗಿಯರನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯ ಲವ್ ಜಿಹಾದಿಯರು ಮಡುವುದಿಲ್ಲ, ಎಂಬುದನ್ನು ಗಮನಿಸಿ! |
ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧನಿಗೆ ೫ ಲಕ್ಷ ರೂಪಾಯಿ ವಂಚನೆ : Gorakhpur Cyber Scam
ಬಾಬರ, ಅಕ್ಬರ, ಹುಮಾಯೂನ ಮುಂತಾದ ಆಕ್ರಮಣಕಾರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ಪ್ರದರ್ಶಿಸಿ ! : Sangeet Singh Som
‘ನೀಟ್’ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ಅಮರಾವತಿಯಲ್ಲಿ 15 ವಾಹನಗಳ ಬೆಂಗಾವಲು ಪಡೆ!
ಕೊಲಕಾತಾ ವಿಮಾನ ನಿಲ್ದಾಣದ ‘ಬಾಂಕ್ರಾ ಮಸೀದಿ’ ಮತ್ತು ದೇವಸ್ಥಾನ ಸ್ಥಳಾಂತರ ಆಗಲಿದೆ
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ