…ಇದು ಹಿಂದೂಗಳ ಪರೀಕ್ಷೆ; ಹಿಂದೂಗಳು ಭವಿಷ್ಯದ ಅಪಾಯವನ್ನು ಅರಿತು ಎಚ್ಚರಿಕೆಯಿಂದಿರಬೇಕು ! – ಮಹಂತ ಶ್ರೀ ಸುಧೀರದಾಸಜಿ ಮಹಾರಾಜ

‘ಚರ್ಚಾ ಹಿಂದೂ ರಾಷ್ಟ್ರ ಕೀ’ಯಲ್ಲಿ ತ್ರಯಂಬಕೇಶ್ವರ ದೇವಸ್ಥಾನದ ಘಟನೆಯ ಕುರಿತು ‘ವಿಶೇಷ ಸಂವಾದ’ !

‘ಶ್ರೀ ಕಲಾರಾಮ ಮಂದಿರ’ದ ಆಚಾರ್ಯ ಮಹಾಮಂಡಲೇಶ್ವರ ಮಹಂತ ಶ್ರೀ ಸುಧೀರದಾಸಜಿ ಮಹಾರಾಜ

ಇತ್ತೀಚೆಗೆ, ಸಂದಲದ ನಿಮಿತ್ತ, 15-16 ಮುಸ್ಲಿಮರ ಗುಂಪು ಹಿಂದೂಗಳ ಜ್ಯೋತಿರ್ಲಿಂಗವಾದ ಶ್ರೀ ತ್ರಯಂಬಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಹಸಿರು ಚಾದರ್ ಅನ್ನು ಅರ್ಪಿಸಲು ಪ್ರಯತ್ನಿಸಿದ ಕೃತ್ಯವು ಹಿಂದೂಗಳಿಗೆ ಒಂದು ರೀತಿಯಲ್ಲಿ ಪರೀಕ್ಷೆಯೇ ಆಗಿತ್ತು. ಈ ರೀತಿ ಮಾಡಿದರೆ ಹಿಂದೂಗಳು ಏನು ಪ್ರತಿಕ್ರಿಯೆ ನೀಡಬಹುದು, ಎಂಬುದನ್ನು ಮುಸ್ಲಿಮರು ನೋಡಬೇಕೆಂದು ಬಯಸಿದ್ದರು. ಭವಿಷ್ಯದಲ್ಲಿ ಇದಕ್ಕಿಂತ ದೊಡ್ಡ ಷಡ್ಯಂತ್ರವನ್ನು ರಚಿಸಬಹುದು. ಆದ್ದರಿಂದ ಹಿಂದೂಗಳು ತಮ್ಮ ದೇವಸ್ಥಾನಗಳ ರಕ್ಷಣೆಗೆ ಈಗಿನಿಂದಲೇ ಜಾಗರೂಕತೆ ವಹಿಸಬೇಕು ಎಂದು ನಾಸಿಕ ಜಿಲ್ಲೆಯ ಪ್ರಸಿದ್ಧ ‘ಶ್ರೀ ಕಲಾರಾಮ ಮಂದಿರ’ದ ಆಚಾರ್ಯ ಮಹಾಮಂಡಲೇಶ್ವರ ಮಹಂತ ಶ್ರೀ ಸುಧೀರದಾಸಜಿ ಮಹಾರಾಜ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಮೂರ್ತಿ ಪೂಜೆಯನ್ನು ವಿರೋಧಿಸುವ ಮುಸ್ಲಿಮರು ತ್ರಯಂಬಕೇಶ್ವರ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ್ದು ಏಕೆ ?’ ಎಂಬ ವಿಷಯದ ಕುರಿತು ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಮಹಂತ ಶ್ರೀ ಸುಧೀರದಾಸಜಿ ಮಹಾರಾಜ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಸೌದಿ ಅರೇಬಿಯಾದಲ್ಲಿ ಎಲ್ಲಿಯೂ ಮಜಾರ್ ಇಲ್ಲ, ಎಲ್ಲಿಯೂ ಸಂದಲ ಇಲ್ಲ. ಭಾರತದಲ್ಲಿ ಮಾತ್ರ ಈ ಪ್ರಕಾರವು ಹೆಚ್ಚುತ್ತಿದೆ. ಇದರಿಂದ ದೇಶಾದ್ಯಂತ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಈಗ ಹಿಂದೂಗಳ ದೇವಸ್ಥಾನಗಳಲ್ಲಿ ನುಗ್ಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಒಂದೆಡೆ, ಈ ಜನರು ಮೂರ್ತಿಪೂಜೆಯನ್ನು ನಂಬುವುದಿಲ್ಲ. ಮತ್ತೊಂದೆಡೆ ದೇವಸ್ಥಾನಗಳ ಹೆಸರಿನಲ್ಲಿ ವ್ಯಾಪಾರ ಮಾಡುವುದು ದ್ವಿಮುಖ ನೀತಿಯಾಗಿದೆ. ಆದ್ದರಿಂದ ಹಿಂದೂಗಳು ಇಂತಹವರಿಂದ ಪೂಜೆ, ಪ್ರಸಾದ ಸಾಮಗ್ರಿಗಳನ್ನು ಏಕೆ ಖರೀದಿಸಬೇಕು ? ಅವರ ಪೂಜಾಸಾಹಿತ್ಯಗಳನ್ನು ಏಕೆ ಬಹಿಷ್ಕರಿಸಬಾರದು ? ಹಿಂದೂಗಳು ಈ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ಈ ಸಮಯದಲ್ಲಿ ‘ಶ್ರೀ ತ್ರಯಂಬಕೇಶ್ವರ ಪುರೋಹಿತ ಸಂಘ’ದ ಅಧ್ಯಕ್ಷ ಶ್ರೀ. ಮನೋಜ ಥೇಟೆ ಗುರೂಜಿ ಇವರು ಮಾತನಾಡಿ, ತ್ರಯಂಬಕೇಶ್ವರದಲ್ಲಿ ಮುಸ್ಲಿಮರ ಸಂದಲ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ; ಆದರೆ ದೇವಸ್ಥಾನದ ಒಳಗೆ ಹೋಗಿ ಧೂಪ ಅರ್ಪಿಸುವುದು ಅಥವಾ ಚಾದರ್ ಅರ್ಪಿಸುವುದು ಎಂದೂ ಆಗಿರಲಿಲ್ಲ. ಆ ಜನರು ಹಾದು ಹೋಗುವಾಗ ಧೂಪವನ್ನು ಅರ್ಪಿಸುತ್ತಿರಬಹುದು, ಹಾಗಾಗಿ ಇದು ದೇವಸ್ಥಾನದ ಸಂಪ್ರದಾಯವಲ್ಲ. ಈ ನಿಟ್ಟಿನಲ್ಲಿ ತ್ರಯಂಬಕೇಶ್ವರ ನಗರ ಪರಿಷತ ಕರೆದ ಗ್ರಾಮ ಸಭೆಯಲ್ಲಿ ತಪ್ಪಾದ ಬಗ್ಗೆ ಸಂಬಂಧಿಸಿದ ಮುಸ್ಲಿಮರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಿದರು.

ಈ ಸಮಯದಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ಯ ಸಮನ್ವಯಕರಾದ ಶ್ರೀ. ಆನಂದ ಜಖೋಟಿಯಾ ಅವರು ಮಾತನಾಡಿ, ಈ ಘಟನೆಯ ಕುರಿತು ಕೆಲವು ಮಾಧ್ಯಮಗಳು ‘ಈ ಪದ್ಧತಿ ಮತ್ತು ಸಂಪ್ರದಾಯವನ್ನು ಹಿಂದೂಗಳು ಸ್ವಾಗತಿಸಿವೆ; ಆದರೆ ಕೆಲವು ಕಟ್ಟರ್ ಹಿಂದೂಗಳು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಿದ್ದಾರೆ’ ಇಂತಹದೊಂದು ಕಟ್ಟುಕಥೆ ನಿರ್ಮಿಸುತ್ತಿದ್ದಾರೆ; ಆದರೆ ಈ ಮಾಧ್ಯಮಗಳು ಹಿಂದೂಗಳ ಧಾರ್ಮಿಕ ಭಾವನೆಗಳ ವಿಚಾರ ಮಾಡುವುದಿಲ್ಲ. ಒಂದುವೇಳೆ ಮುಸ್ಲಿಮರಲ್ಲಿ ನಿಜವಾಗಿಯೂ ಶ್ರೀ ತ್ರಯಂಬಕೇಶ್ವರನ ಮೇಲೆ ಅಷ್ಟೊಂದು ಶ್ರದ್ಧೆ ಇದ್ದರೆ, ರಾಮಮಂದಿರಕ್ಕಾಗಿ ಹಿಂದೂಗಳಿಗೆ 500 ವರ್ಷಗಳ ಕಾಲ ಏಕೆ ಹೋರಾಡಬೇಕಾಯಿತು ? ಅವರು ಕಾಶಿ ಮತ್ತು ಮಥುರಾ ದೇವಸ್ಥಾನಗಳನ್ನು ಹಿಂದೂಗಳಿಗೆ ಏಕೆ ಒಪ್ಪಿಸುತ್ತಿಲ್ಲ ? ದೇವಸ್ಥಾನದ ಹೊರಗೆ ‘ಹಿಂದೂಯೇತರರಿಗೆ ಪ್ರವೇಶವಿಲ್ಲ’ ಎಂಬ ಸ್ಪಷ್ಟ ಸೂಚನಾ ಫಲಕ ಇರುವಾಗಲೂ ಮುಸ್ಲಿಮರು ಅದನ್ನು ಪಾಲಿಸದಿದ್ದರೆ ಅವರು ಯಾವ ಆಚಾರ, ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಿದ್ದಾರೆ ? ಅದೇ ಜನಸಮೂಹ 15-16 ಕ್ಕಿಂತ ದೊಡ್ಡದಾಗಿದ್ದರೆ ಮತ್ತು ಭದ್ರತಾ ಸಿಬ್ಬಂದಿ ಅವರನ್ನು ತಡೆಯದಿದ್ದರೆ ಏನಾಗುತ್ತಿತ್ತು ಎಂದು ಸರಕಾರ ಮತ್ತು ಹಿಂದೂಗಳು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.