‘ಹಿಂದೂ ರಾಷ್ಟ್ರದ ಬೇಡಿಕೆ ಭಾರತ ವಿರೋಧಿಯಂತೆ !’ – ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ಹಿಂದೂ ದ್ವೇಷ !

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ಹಿಂದೂದ್ವೇಷಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೇ 21, 2023 ರಂದು ಬುದ್ಧ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರದ ಬೇಡಿಕೆ ಭಾರತ ವಿರೋಧಿಯಾಗಿದೆ. ಭಯೋತ್ಪಾದಕರು ನನ್ನನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾಗ ಯೋಗಿ ಸರಕಾರ ಮೌನವಾಗಿದ್ದರು ಎಂದು ಹೇಳಿದ್ದಾರೆ.

ಸ್ವಾಮಿ ಪ್ರಸಾದ ಮೌರ್ಯ ಅವರು ರಾಮರಾಜ್ಯವನ್ನು ತೆಗೆದುಹಾಕುವ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ರಾಮಚರಿತಮಾನಸವನ್ನು ಅವಮಾನ ಮಾಡಿದ ನಂತರ ಬಂದ ಟೀಕೆಗಳನ್ನು ವಿವರಿಸಿದ ಅವರು, ಟೀಕಾಕಾರರನ್ನು ‘ಭಯೋತ್ಪಾದಕರು’ ಎಂದು ಕರೆದಿದ್ದರು.

ಸಾಧುಗಳು ಮತ್ತು ಸಂತರಿಂದ ಮೌರ್ಯನ ಮೇಲೆ ಟೀಕೆ

ಸ್ವಾಮಿ ಪ್ರಸಾದ ಮೌರ್ಯ ಅವರ ಹೇಳಿಕೆಯನ್ನು ಸಾಧು-ಸಂತರು ಟೀಕಿಸಿದ್ದಾರೆ. ಹನಮಾನ ಗಢಿಯ ಮಹಂತ ರಾಜು ದಾಸ ಒವರು, ಸ್ವಾಮಿ ಪ್ರಸಾದ್ ಮೌರ್ಯ ಯಾವಾಗಲೂ ಹಿಂದೂ ಧರ್ಮವನ್ನು ಗುರಿಯಾಗಿಸುತ್ತಾರೆ. ಭಗವಾನ ಶ್ರೀರಾಮನು ರಾಮರಾಜ್ಯದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಿದ್ದಾನೆ ಎಂದು ಹೇಳಿದರು. ರಾಮಲಾಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಇವರು, ಸ್ವಾಮಿ ಪ್ರಸಾದ ಮೌರ್ಯ ಅವರ ಹೇಳಿಕೆ ರಾಜಕೀಯವಾಗಿದೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಹಿಂದೂ ರಾಷ್ಟ್ರದ ಬೇಡಿಕೆಯನ್ನು ಭಾರತ ವಿರೋಧಿ ಎಂದು ಕರೆಯುವ ರಾಜಕಾರಣಿಗಳು ಭಯೋತ್ಪಾದಕರ ‘ಗಜ್ವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ನೀತಿಯ ಬಗ್ಗೆ ಒಂದೇ ಒಂದು ಮಾತನ್ನು ಆಡುವುದಿಲ್ಲ ಎಂಬುದನ್ನು ಗಮನಿಸಿ !