ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರ ಹಿಂದೂದ್ರೋಹಿ ಹೇಳಿಕೆ
ನ್ಯೂಯಾರ್ಕ – ನಾನು ಮತ್ತು ನನ್ನ ಪತಿ ಗಿಡ್ಡವಾಗಿದ್ದೇವೆ. ನಾವು ದೇವರಿಗೆ ನಮ್ಮ ಮಗ ಎತ್ತರವಾಗಿ ಬೆಳೆಯಬೇಕೆಂದು ಪ್ರಾರ್ಥಿಸುತ್ತೇವೆ; ಆದರೆ ಹಿಂದೂಗಳಲ್ಲಿ ಎತ್ತರವನ್ನು ಹೆಚ್ಚಿಸುವ ಒಬ್ಬರೂ ದೇವರಿಲ್ಲ. ಹಿಂದೂಗಳಲ್ಲಿ 19 ಸಾವಿರ ದೇವತೆಗಳಿದ್ದಾರೆ; ಆದರೆ ಎತ್ತರವನ್ನು ಹೆಚ್ಚಿಸುವ ಒಂದೇ ಒಂದು ದೇವರಿಲ್ಲ, ಇದರ ಅವಶ್ಯಕತೆ ಭಾರತೀಯರಿಗೆ ಅತ್ಯಧಿಕವಾಗಿದೆ ಎಂದು ಹಿಂದೂದ್ರೋಹಿ ಹೇಳಿಕೆಯನ್ನು ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರು ನೀಡಿದ್ದಾರೆ. ಜರನಾ ಇವರ `ವನ್ ಇನ್ ಎ ಬಿಲಿಯನ್’ ಇಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಅವರು ಹಿಂದೂ ದೇವತೆಗಳನ್ನು ಮೇಲಿನಂತೆ ಘೋರ ಅಪಮಾನವನ್ನು ಮಾಡಿರುವುದು ಬಹಿರಂಗವಾಗಿದೆ.
Comedian Zarna Garg makes fun of Hindu gods. pic.twitter.com/IjRxqehN66
— Kreately.in (@KreatelyMedia) May 20, 2023
ಹಿಂದೂಗಳಿಂದ ಆಕ್ರೋಶ !
ಗರ್ಗ ಇವರ ಈ ಹಿಂದೂ ದ್ವೇಷಿ ಹೇಳಿಕೆಯ ಬಳಿಕ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದರು. `ಜರನಾ ಗರ್ಗ ಇವರು ಏನೋ ಹಾಸ್ಯವನ್ನು ಮಾಡಿ ತೋರಿಸುವ ಗುಂಗಿನಲ್ಲಿ ಅರ್ಥಹೀನ ಹಾಸ್ಯವನ್ನು ಮಾಡುತ್ತಾರೆ. ಈಗ ಅವರು ಹಿಂದೂಗಳ ದೇವತೆಗಳನ್ನು ಟೀಕಿಸುವ ಕೃತ್ಯವನ್ನು ಮಾಡುತ್ತಿದ್ದಾರೆ’ ಎಂದು ಹಿಂದೂಗಳು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಹಿಂದೂಗಳು ಜರನಾ ಗರ್ಗ ಇವರ ವಿರುದ್ಧ ಕ್ರಮ ಕೈಕೊಳ್ಳುವಂತೆ ಪೊಲೀಸರಲ್ಲಿ ಮನವಿ ಸಲ್ಲಿಸಿದ್ದಾರೆ.
ಸಂಪಾದಕರ ನಿಲುವು*ವಿಶ್ವ ಮಟ್ಟದಲ್ಲಿ ಹಿಂದೂ ಧರ್ಮದ ಮೇಲೆ ಆಗುತ್ತಿರುವ ಆಘಾತವನ್ನು ತಡೆಯಲು ಪ್ರಭಾವಿ ಹಿಂದೂ ಸಂಘಟನೆಗಳೊಂದೇ ಪರ್ಯಾಯವಾಗಿದೆ ! |