ದೆಹಲಿಯ ಶಾಲೆಯೊಂದರಲ್ಲಿ ಹಿಂದೂ ಮಕ್ಕಳ ಕೈಗೆ ಕಟ್ಟಿದ್ದ ಕೆಂಪು ದಾರವನ್ನು ಕತ್ತರಿಸಿದ ಶಿಕ್ಷಕರ ವಿರುದ್ಧ ಪ್ರತಿಭಟಿಸಿದ ನಂತರ ಅಮಾನತು !

ನವ ದೆಹಲಿ – ಇಲ್ಲಿಯ ಮಯೂರ ವಿಹಾರ ಪ್ರದೇಶದಲ್ಲಿನ ‘ವನಸ್ಥಲಿ ಪಬ್ಲಿಕ್ ಸ್ಕೂಲ್’ ಈ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡಿದ್ದ ಕೆಂಪು ದಾರವನ್ನು ಕತ್ತರಿಸುವ ಹಾಗೂ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿದ ೯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ವಿದ್ಯಾರ್ಥಿಗಳ ಅಮಾನತು ಹಿಂಪಡೆಯಲಾಯಿತು.

ಶಾಲೆಯ ಶಿಕ್ಷಕ ಅನೂಪ ರಾವತ ಇವರು ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡಿದ್ದ ಕೆಂಪು ದಾರವನ್ನು ಕತ್ತರಿಸಿದ್ದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇದರೊಂದಿಗೆ ಶಿಕ್ಷಕ ರವಿ ಇವರು ಭಗವಾನ ಶ್ರೀರಾಮನ ಚಿತ್ರವಿರುವ ಭಿತ್ತಿಚಿತ್ರವನ್ನು ತೆಗೆಸಿದ್ದರು ಹಾಗೂ ರಿತು ಹೆಸರಿನ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನೂ ನೀಡಿದ್ದರು ಎಂದು ವಿದ್ಯಾರ್ಥಿಗಳು ಹೇಳಿದರು. ಈ ಕುರಿತು ಕೆಲವು ವಿದ್ಯಾರ್ಥಿಗಳು ಮಾಹಿತಿ ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಿಂದೂತ್ವನಿಷ್ಠ ಸಂಘಟನೆಗಳ ಪ್ರತಿಭಟನೆಯ ನಂತರ ಮೇಲಿನ ಎಲ್ಲಾ ಮೂವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ ರಿತು ಶಿಕ್ಷಕಿ ಕ್ರೈಸ್ತರಾಗಿದ್ದಾರೆ. ಈ ಶಾಲೆಯ ನಿರ್ದೇಶಕರು ರೋಹಿತ್ ಜೈನ ಮತ್ತು ಪ್ರಾಂಶುಪಾಲರು ಅನುರಾಧಾ ಜೈನ್ ಆಗಿದ್ದಾರೆ. ೨೦೦೨ ರಲ್ಲಿ ಈ ಶಾಲೆಯು ಪ್ರಾರಂಭವಾಯಿತು.

ಸಂಪಾದಕರ ನಿಲುವು

ಇಂತಹ ಕೃತ್ಯಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ರೂಪಿಸಬೇಕು, ಆಗ ಮಾತ್ರ ಇಂತಹ ಘಟನೆಗಳ ಮೇಲೆ ಕಡಿವಾಣ ಬೀಳುತ್ತದೆ !