ಈ ಸಂದರ್ಭದಲ್ಲಿ ಸಮಿತಿ ರಚಿಸುವ ಬಗ್ಗೆ ರಾಜ್ಯ ಸರಕಾರದಿಂದ ಉಚ್ಚ ನ್ಯಾಯಾಲಯಕ್ಕೆ ಪ್ರತಿಜ್ಞಾಪತ್ರ
ರಾಂಚಿ (ಝಾರಖಂಡ) – ಝಾರಖಂಡ ವಿಧಾನಸಭೆಯ ನೂತನ ಕಟ್ಟಡದಲ್ಲಿ ಮುಸಲ್ಮಾನರಿಗೆ ನಮಾಜಗಾಗಿ ಸ್ಥಳವನ್ನು ನೀಡುವ ಝಾರಖಂಡ ಮುಕ್ತಿ ಮೋರ್ಚಾ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಝಾರಖಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ. ಇದಕ್ಕೆ ಸರಕಾರದಿಂದ, ಈ ಪ್ರಕರಣದ ಬಗ್ಗೆ 7 ಸದಸ್ಯರ ಒಂದು ಸಮಿತಿ ಸ್ಥಾಪನೆಯನ್ನು ರಚಿಸಲಾಗಿದೆ. ಇತರ ರಾಜ್ಯದ ವಿಧಾನಸಭೆಗಳಲ್ಲಿ ಇಂತಹ ಪರಿಸ್ಥಿತಿಯಿದೆ ?, ಇದರ ಅಧ್ಯಯನವನ್ನು ನಡೆಸಿ ಸಮಿತಿಯು 31 ಜುಲೈಗೆ ನಮಗೆ ವರದಿಯನ್ನು ಒಪ್ಪಿಸಲಿದೆ ಎಂದು ಹೇಳಿದೆ.
1. ವಿಶೇಷವೆಂದರೆ ಸರಕಾರದ ಈ ಪ್ರಸ್ತಾವನೆ ಸಪ್ಟೆಂಬರ 2021 ರಲ್ಲಿ ಬಂದಿತ್ತು. ಆ ಸಮಯದಲ್ಲಿ ಇದನ್ನು ವಿರೋಧಿ ಪಕ್ಷವಾಗಿದ್ದ ಭಾಜಪದಿಂದ ವಿರೋಧ ವ್ಯಕ್ತಪಡಿಸಿದ ಬಳಿಕ ಸರಕಾರವು ಸಮಿತಿಯ ರಚನೆ ಮಾಡಿತ್ತು. 45 ದಿನಗಳಲ್ಲಿ ಈ ಸಮಿತಿ ವರದಿಯನ್ನು ಹಾಜರುಪಡಿಸುವುದರಲ್ಲಿತ್ತು; ಆದರೆ ಕಳೆದ 2 ವರ್ಷಗಳಲ್ಲಿ ಮೊದಲ ಸಮಿತಿಯ ವರದಿಯಲ್ಲಿ ಏನಿತ್ತು ? ಅಥವಾ ಆ ಸಮಯದಲ್ಲಿ ಏನಾಗಿದೆ ? ಆ ವರದಿ ಹಾಜರುಪಡಿಸಲಾಯಿತೆ ಅಥವಾ ಇಲ್ಲವೇ ? ಎನ್ನುವುದು ಇದುವರೆಗೂ ಯಾರಿಗೂ ತಿಳಿದಿಲ್ಲ. ವಿಧಾನಸಭೆಯಲ್ಲಿ 4 ಮುಸಲ್ಮಾನ ಶಾಸಕರು ಇದ್ದಾರೆ; ಆದರೆ ಅವರಲ್ಲಿ ಯಾರಿಗೂ ಪ್ರತ್ಯೇಕ ನಾಮಾಜಗಾಗಿ ಸ್ವತಂತ್ರ ಜಾಗವನ್ನು ನೀಡುವಂತೆ ಕೋರಿಲ್ಲ.
2. ಅರ್ಜಿದಾರ ಅಜಯಕುಮಾರ ಮೋದಿಯವರು ತಮ್ಮ ದೂರಿನಲ್ಲಿ, ಸರಕಾರದ ವ್ಯಾಪ್ತಿಗೆ ಒಳಪಡುವ ಒಂದು ಪ್ರದೇಶದಲ್ಲಿ ಈ ರೀತಿ ಯಾವುದಾದರೂ ಧರ್ಮಕ್ಕೆ ಪ್ರಾರ್ಥನೆ ಮಾಡಲು ಅನುಮತಿ ನೀಡುವುದು ಎಂದರೆ ಇತರೆ ಧರ್ಮದವರ ಮೂಲಭೂತ ಅಧಿಕಾರದ ಮೇಲೆ ಆಘಾತ ತರುವುದಾಗಿದೆ. `ಸರ್ವ ಧರ್ಮ ಸಮಾನ’ ಈ ತತ್ವದ ವಿರುದ್ಧವಾಗಿದೆ ಎಂದು ಹೇಳಿದರು.
#PoliticalPulse | Namaz room in Assembly or not: #Jharkhand govt still sitting on report, matter now in HChttps://t.co/gF7nj8SclQ
— The Indian Express (@IndianExpress) May 20, 2023
ಸಂಪಾದಕರ ನಿಲುವು* ಈ ಹಿಂದೆ ಸ್ಥಾಪನೆ ಮಾಡಲಾಗಿದ್ದ ಇಂತಹ ಸಮಿತಿಯ ವರದಿಯನ್ನು ಇದುವರೆಗೂ ಹಾಜರುಪಡಿಸಿರುವುದಿಲ್ಲ ! * ಹಿಂದೂಗಳಿಗೆ ನಾಮಜಪ, ಧ್ಯಾನ ಮತ್ತು ಧಾರ್ಮಿಕ ಕೃತಿಗಳನ್ನು ಮಾಡಲು ಸರಕಾರಿ ವಾಸ್ತುವಿನಲ್ಲಿ ಸ್ವತಂತ್ರ ಸ್ಥಳವನ್ನು ನೀಡುವ ವಿಚಾರವನ್ನು ಯಾವುದೇ ರಾಜಕೀಯ ಪಕ್ಷಗಳು ಯಾವತ್ತೂ ಮಾಡುವುದಿಲ್ಲ ಏಕೆ ? |