ಬಂಗಾಳದಲ್ಲಿ ಚಿತ್ರ ತೋರಿಸದಂತೆ ಪೊಲೀಸ ಹಾಗೂ ಸರಕಾರದಿಂದ ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆ !

`ದಿ ಕೇರಳ ಸ್ಟೋರಿ’ಯ ನಿರ್ಮಾಪಕ ವಿಫುಲ ಶಹಾರ ಆರೋಪ

ಮುಂಬಯಿ – ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಬಳಿಕವೂ ಬಂಗಾಳದಲ್ಲಿ `ದಿ ಕೇರಳ ಸ್ಟೋರಿ’ ಚಲನಚಿತ್ರದ ಮೇಲೆ ಅನಧಿಕೃತವಾಗಿ ನಿರ್ಬಂಧವನ್ನು ಹೇರಲಾಗಿದೆ, ಇದು ಅತ್ಯಂತ ಅಪಾಯಕಾರಿಯಾಗಿದೆ. `ಒಂದು ವೇಳೆ ನೀವು ಟಿಕೀಟು ಮಾರಾಟದ ಕಿಡಕಿಗಳನ್ನು ತೆರೆದರೆ, ನಿಮ್ಮ ಚಿತ್ರಮಂದಿರ ಸುರಕ್ಷಿತವಾಗಿರುವುದಿಲ್ಲ‘; ಎನ್ನುವಂತಹ ಬೆದರಿಕೆಯ ದೂರವಾಣಿ ಕರೆಗಳು ಚಿತ್ರಮಂದಿರದ ಮಾಲೀಕರಿಗೆ ಪೊಲೀಸರು ಮತ್ತು ಸರಕಾರದಿಂದ ಬರುತ್ತಿದೆ ಎಂದು ಚಲನಚಿತ್ರ ನಿರ್ಮಾಪಕ ವಿಫುಲ ಶಹಾ ಇವರು ಆರೋಪ ಮಾಡಿದ್ದಾರೆ. ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ರಾಜ್ಯದಲ್ಲಿ ಈ ಚಲನಚಿತ್ರದ ಪ್ರದರ್ಶನದ ಮೇಲೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣವನ್ನು ನೀಡುತ್ತಾ ನಿರ್ಬಂಧವನ್ನು ವಿಧಿಸಿದ್ದರು. ಅದಕ್ಕೆ ವಿಫುಲ ಶಹಾ ಇವರು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಶ್ನಿಸಿದ್ದರು. ನ್ಯಾಯಾಲಯವು ಈ ನಿರ್ಬಂಧವನ್ನು ಹಿಂಪಡೆಯುವಂತೆ ಆದೇಶಿಸಿದ್ದರು; ಆದರೂ ಅಲ್ಲಿನ ಚಿತ್ರಮಂದಿರಗಳಲ್ಲಿ ಚಲನಚಿತ್ರವು ಪ್ರದರ್ಶನಗೊಳ್ಳದೇ ಇರುವುದರ ಹಿಂದೆ ಮೇಲಿನ ಕಾರಣಗಳಾಗಿವೆಯೆಂದು ಶಹಾ ಇವರು ಆರೋಪಿಸಿದ್ದಾರೆ. ವಿಫುಲಶಹಾ ಮಾತನ್ನು ಮುಂದುವರಿಸುತ್ತಾ, ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ಚಿತ್ರಮಂದಿರಗಳ ಮಾಲೀಕರಿಗೆ ಸಿಗುವ ಬೆದರಿಕೆಯ ವಿಷಯವನ್ನು ಬಹಿರಂಗವಾಗಿ ಹೇಳುವುದಿಲ್ಲ. ಈ ಚಲನಚಿತ್ರವನ್ನು ತೋರಿಸಲು ಅವರಿಗೆ ಆಸಕ್ತಿಯಿದೆ; ಆದರೆ ಅವರಿಗೆ ಅನುಮತಿ ನೀಡಲಾಗುತ್ತಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಬಳಿಕ ಈ ರೀತಿ ನಡೆಯುತ್ತಿರುವುದು ಸರಿಯಲ್ಲವೆಂದು ಹೇಳಿದರು.

(ಸೌಜನ್ಯ – CNN-News18)

ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆಗಳು ಬರುತ್ತಿವೆ ! – ಭಾಜಪ ಮುಖಂಡರ ಆರೋಪ

ಭಾಜಪದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ ಮಾಳವೀಯ ಇವರು, ಬಂಗಾಳದಲ್ಲಿ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ತೋರಿಸಲಾಗುತ್ತಿಲ್ಲವೆಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಚಲನಚಿತ್ರದ ಮೇಲಿನ ನಿರ್ಬಂಧದ ಮೊದಲು ಈ ಚಲನಚಿತ್ರಕ್ಕೆ ಪ್ರಚಂಡ ಪ್ರತಿಕ್ರಿಯೆ ಸಿಕ್ಕಿತ್ತು. ಕೋಲಕತಾದಲ್ಲಿ ಸ್ಥಳೀಯ ಆಡಳಿತಗಳು ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆಯನ್ನು ಹಾಕುತ್ತಿವೆ. `ಒಂದು ವೇಳೆ ಚಲನಚಿತ್ರವನ್ನು ಪ್ರದರ್ಶಿಸಿದರೆ, ದಂಡನಾರ್ಹ ಕ್ರಮವನ್ನು ಕೈಕೊಳ್ಳಲಾಗುವುದು’ ಎಂದು ಬೆದರಿಸಲಾಗುತ್ತಿದೆ. ಇದು ನ್ಯಾಯಾಲಯದ ಆದೇಶದ ಅಪಮಾನವಾಗಿದೆ. ನ್ಯಾಯಾಲಯವು ಇದನ್ನು ಗಮನಿಸಬೇಕಾಗಿದೆ. ಒಂದು ವೇಳೆ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಈ ರೀತಿ ಅಪಮಾನಿಸುತ್ತಿದ್ದರೆ, ಅಲ್ಲಿ ಕಾನೂನಿನ ರಾಜ್ಯ ಎಷ್ಟು ದುರ್ಬಲವಾಗಿದೆಯೆನ್ನುವುದು ಗಮನಕ್ಕೆ ಬರುತ್ತದೆಯೆಂದು ಹೇಳಿದರು.

 

ಬಂಗಾಳದ ಪರಿಸ್ಥಿತಿಯಲ್ಲಿ ಇದುವರೆಗೂ ಯಾವುದೇ ಬದಲಾವಣೆಯಿಲ್ಲ ! – ಚಲನಚಿತ್ರ ವಿತರಕರು

ಬಂಗಾಳದಲ್ಲಿ `ದಿ ಕೇರಳ ಸ್ಟೋರಿ’ ಚಲನಚಿತ್ರ ವಿತರಕರಾದ ಸತದೀಪ ಸಾಹಾ ಇವರು ಮಾತನಾಡುತ್ತಾ, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿಗೂ ಯಾವುದೇ ಚಿತ್ರಮಂದಿರಗಳ ಮಾಲೀಕರು ಚಲನಚಿತ್ರವನ್ನು ಪ್ರದರ್ಶಿಸಲು ಒಪ್ಪಿಗೆ ನೀಡಿರುವುದಿಲ್ಲವೆಂದು ಹೇಳಿದರು.

ಸಂಪಾದಕರ ನಿಲುವು

ಬಂಗಾಳದ ಹಿಂದೂದ್ವೇಷಿ ಮತ್ತು ಮತಾಂಧ ಮುಸಲ್ಮಾನ ಪ್ರೇಮಿ ತೃಣಮೂಲ ಕಾಂಗ್ರೆಸ್ಸಿನ ದಬ್ಬಾಳಿಕೆ ! ಇಂತಹ ಪಕ್ಷವನ್ನು ಆರಿಸಿದ ಬಂಗಾಳದ ಹಿಂದೂಗಳಿಗೆ ಮುಂದೆ ಮತಾಂಧರಿಂದ ದೊಡ್ಡ ಸಂಕಟವನ್ನು ಎದುರಿಸಬೇಕಾಗಿ ಬಂದರೆ ಆಶ್ಚರ್ಯ ಪಡಬಾರದು !