ಸರ್ವೋಚ್ಚ ನ್ಯಾಯಾಲಯದ ತೀರ್ಪು
ನವದೆಹಲಿ – ಮಹಾರಾಷ್ಟ್ರದ ಎತ್ತಿನಗಾಡಿಯ ಸ್ಪರ್ಧೆ ಹಾಗೂ ತಮಿಳುನಾಡಿನ ಜಲ್ಲಿಕಟ್ಟಿನ ಆಟಕ್ಕೆ ಅನುಮತಿ ನೀಡುವ ಕಾಯಿದೆಗಳನ್ನು ಪ್ರಶ್ನಿಸುವ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ನ್ಯಾಯಾಲಯದ 5 ನ್ಯಾಯಮೂರ್ತಿಗಳ ವಿಭಾಗೀಯ ಪೀಠವು ಈ ಆಟಗಳನ್ನು ಆಡುವ ಅನುಮತಿ ನೀಡಿದೆ.
1. ಹಿಂದಿನ ಆಲಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಜಲ್ಲಿಕಟ್ಟುವಿನಂತಹ ಎತ್ತುಗಳನ್ನು ನಿಯಂತ್ರಿಸುವ ಆಟದಲ್ಲಿ ಯಾವುದೇ ಪ್ರಾಣಿಯನ್ನು ಬಳಸಲು ಸಾಧ್ಯವೇ? ಎಂದು ಕೇಳಿತ್ತು.
2. ಸರಕಾರವು `ಜಲ್ಲಿಕಟ್ಟು ಇದು ಕೇವಲ ಮನೋರಂಜನೆಯ ಆಟವಲ್ಲ, ಬದಲಾಗಿ ಒಂದು ದೊಡ್ಡ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವಿರುವ ಕಾರ್ಯಕ್ರಮವಾಗಿದೆ. ಈ ಆಟದಲ್ಲಿ ಎತ್ತುಗಳೊಂದಿಗೆ ಕ್ರೌರ್ಯದ ವರ್ತನೆ ನಡೆಯುವುದಿಲ್ಲ’ ಎಂದು ಪ್ರತಿಜ್ಞಾಪತ್ರದಲ್ಲಿ ತಿಳಿಸಿತ್ತು.
3.ಸರಕಾರವು ತನ್ನ ಪ್ರತಿವಾದದಲ್ಲಿ `ಜಲ್ಲಿಕಟ್ಟು’ವಿನಲ್ಲಿ ಸಹಭಾಗಿಯಾಗಿರುವ ಎತ್ತುಗಳಿಗೆ ರೈತರು ವರ್ಷವಿಡೀ ಯಾರಿಗೂ ಯಾವುದೇ ಅಪಾಯವಾಗಬಾರದೆಂದು ತರಬೇತಿ ನೀಡಿರುತ್ತಾರೆ’ ಎಂದು ಹೇಳಿದೆ.
The #SupremeCourt upheld the validity of amendment Acts of #TamilNadu, #Maharashtra and #Karnataka which allowed bull-taming sport “Jallikattu”, bullock-cart races and buffalo racing sport “Kambala” respectively. #Jallikattu #Kambala #AnimalRights https://t.co/p6tbGMGz6P
— The Telegraph (@ttindia) May 18, 2023
`ಜಲ್ಲಿಕಟ್ಟು’ ಅಂದರೆ ಏನು ?ಪೊಂಗಲ ಹಬ್ಬದ ಮೂರನೇ ದಿನ ಜಲ್ಲಿಕಟ್ಟು ಆಟ ಆರಂಭವಾಗುತ್ತದೆ. ಈ ಆಟದಲ್ಲಿ ಕ್ರೀಡಾಪಟುಗಳಿಗೆ ಸ್ವತಂತ್ರವಾಗಿ ಬಿಟ್ಟಿರುವ ಎತ್ತುಗಳ ಮೇಲೆ ನಿಯಂತ್ರಣ ಸಾಧಿಸಬೇಕಾಗುತ್ತದೆ. ಒಂದು ವೇಳೆ ಯಾವುದೇ ಕ್ರೀಡಾಪಟುವು 15 ಮೀಟರಿನ ಒಳಗೆ ಎತ್ತಿನ ಮೇಲೆ ನಿಯಂತ್ರಣವನ್ನು ಸಾಧಿಸಿದರೆ, ಅವನನ್ನು ವಿಜಯಿಯೆಂದು ಘೋಷಿಸಲಾಗುತ್ತದೆ. |
ಇದು ಯಾವ ಪ್ರಕರಣ?
ವರ್ಷ 2011: ಆಗಿನ ಕೇಂದ್ರ ಸರಕಾರದಿಂದ ತರಬೇತಿ ಮತ್ತು ಪ್ರದರ್ಶನಗಳ ಮೇಲೆ ನಿರ್ಬಂಧ ಹೇರಲಾಗಿದ್ದ ಪ್ರಾಣಿಗಳ ಸೂಚಿಯಲ್ಲಿ ಎತ್ತುಗಳನ್ನೂ ಸೇರಿಸಲಾಗಿತ್ತು.
ಪ್ರಾಣಿಗಳ ರಕ್ಷಣೆ ಮಾಡುವುದಾಗಿ ಹೇಳಿಕೊಳ್ಳುವ `ಪೆಟಾ’ ಸಂಸ್ಥೆಯು ಜಲ್ಲಿ ಕಟ್ಟು ಆಟವನ್ನು ನಿಷೇದಿಸುವಂತೆ ಮನವಿ ಮಾಡಿತ್ತು !
ವರ್ಷ 2014: ಸರ್ವೋಚ್ಚ ನ್ಯಾಯಾಲಯದಿಂದ ಆಟದ ಮೇಲೆ ನಿರ್ಬಂಧ !
ತಮಿಳುನಾಡು ಸರಕಾರದಿಂದ ಈ ಆಟವನ್ನು ಮುಂದುವರಿಸಲು ಕೇಂದ್ರ ಸರಕಾರದಿಂದ ಸುಗ್ರೀವಾಜ್ಞೆ ನೀಡುವಂತೆ ಮನವಿ !
ವರ್ಷ 2016: ಕೇಂದ್ರ ಸರಕಾರವು ಒಂದು ಅಧಿನಿಯಮವನ್ನು ಜಾರಿಗೊಳಿಸಿ ಕೆಲವು ಷರತ್ತುಗಳೊಂದಿಗೆ ಜಲ್ಲಿಕಟ್ಟನ್ನು ಆಯೋಜಿಸಲು ಅನುಮತಿ ನೀಡಿತ್ತು.
`ಪೆಟಾ’ ಪುನಃ ಕಾನೂನಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯವು ಮೊದಲ ಅರ್ಜಿಯನ್ನು ತಿರಸ್ಕರಿಸಿತು. ಆದರೆ ಮರುವಿಚಾರಣೆಯ ಅರ್ಜಿನ್ನು ಸ್ವೀಕರಿಸಿ ಅಂತಿಮವಾಗಿ ಆಟಕ್ಕೆ ಅನುಮತಿಯನ್ನು ನೀಡಿದೆ.