ಪ್ರಕರಣಗಳನ್ನು ವೇಗವಾಗಿ ಇತ್ಯರ್ಥಗೊಳಿಸಲು ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳೋಣ ! – ನೂತನ ಕಾನೂನು ಸಚಿವ ಮೇಘವಾಲ

ಕೇಂದ್ರ ಸಚಿವ ಅರ್ಜುನರಾಮ ಮೇಘವಾಲ

ಜೈಪುರ (ರಾಜಸ್ಥಾನ) – ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ‘ವರ್ಚುವಲ್ ಕೋರ್ಟ್‌ಗಳು’ ಅಂದರೆ ಆನ್‌ಲೈನ್ ಮೂಲಕ ನ್ಯಾಯಾಲಯ ನಡೆಸುವ ಪದ್ಧತಿಗಳನ್ನು ನಡೆಸಲಾಗುವುದು. ಇದರಿಂದ ಪ್ರಕರಣಗಳ ಶೀಘ್ರವಾಗಿ ಇತ್ಯರ್ಥಗೊಳ್ಳಲಿದೆ. ಅಗತ್ಯಕ್ಕನುಸಾರ ಹೆಚ್ಚುವರಿ ಉಚ್ಚ ನ್ಯಾಯಾಲಯಗಳನ್ನು ಆರಂಭಿಸುವ ದಿಕ್ಕಿನತ್ತ ಕಾರ್ಯ ಆರಂಭಿಸಬಹುದು, ಎಂದು ‘ಕೇಂದ್ರ ಸಚಿವ ಅರ್ಜುನರಾಮ ಮೇಘವಾಲ ಅವರು ಕಾನೂನು ಸಚಿವಾಲಯದ ಅಧಿಕಾರ ವಹಿಸಿಕೊಂಡ ನಂತರ ‘ಕೆಲಸದ ಆದ್ಯತೆ ಏನು’ ಎಂಬುದರ ಕುರಿತು ಮಾತನಾಡುತ್ತಿರುವಾಗ ತಿಳಿಸಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಜನರಿಗೆ ಶೀಘ್ರದಲ್ಲೇ ನ್ಯಾಯದ ನಿರೀಕ್ಷೆಯಿರುತ್ತದೆ. ಬಾಕಿ ಇರುವ ಪ್ರಕರಣಗಳು ಜನರ ನೋವಾಗಿದೆ. ಇದರಿಂದ ಪ್ರಕರಣಗಳ ತ್ವರಿತ ಇತ್ಯರ್ಥಗೊಳಿಸಲು ಕೆಲಸ ಮಡಲಾಗುವುದು. ರಾಜ್ಯಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವೆವು. ಇದರ ನೀಲನಕ್ಷೇಯೂ ತಯಾರಿಸಲಾಗಿದೆ ಎಂದು ಹೇಳಿದರು.