ಖಾಂಡವಾ (ಮಧ್ಯಪ್ರದೇಶ) – ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾದ ಹಿಂದೂ ಯುವಕನನ್ನು ಹುಡುಗಿಯ ಕುಟುಂಬ ಸದಸ್ಯರು ಬರ್ಬರವಾಗಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೨ ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಮೇಲೆ ನಿರ್ಲಕ್ಷ್ಯ ತೋರಿರುವ ಆರೋಪ ಮಾಡಲಾಗಿದೆ.
Khandwa, MP: Raju Saini falls in love and marries a Muslim woman, has a baby girl, and then is beaten and killed brutally by the girl’s familyhttps://t.co/32DOI5Vsxp
— OpIndia.com (@OpIndia_com) May 17, 2023
ರಾಜಸ್ಥಾನದ ಸಿಕರ್ ಜಿಲ್ಲೆಯ ಜಿತೇಂದ್ರ ಅಲಿಯಾಸ್ ರಾಜು ಸೈನಿ ೩ ವರ್ಷಗಳ ಹಿಂದೆ ಖಾಂಡವಾ, ಮಧ್ಯಪ್ರದೇಶದಲ್ಲಿ ಕೆಲಸಕ್ಕಾಗಿ ಬಂದಿದ್ದನು. ಅವರು ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಅಮ್ರೀನ್ ಳ ಜೊತೆ ಅವನ ಪರಿಚಯವಾಯಿತು. ಅವರಿಬ್ಬರಲ್ಲಿ ಪ್ರೀತಿ ಹುಟ್ಟಿದ ನಂತರ, ಇಬ್ಬರೂ ತಮ್ಮ ಮನೆಯವರ ವಿರುದ್ಧ ನಡೆದುಕೊಂಡು ಮದುವೆಯಾದರು. ಮದುವೆಯ ನಂತರ ಅವರು ಸಿಕಾರ್‌ನಲ್ಲಿರುವ ರಾಜು ಅವರ ಹಳ್ಳಿಗೆ ತೆರಳಿದರು. ಅಮ್ರೀನ್ ಕುಟುಂಬದವರು ಪೊಲೀಸರಿಗೆ ನಾಪತ್ತೆಯಾಗಿರುವ ದೂರು ನೀಡಿದ್ದರು. ಪೊಲೀಸರು ಅವಳನ್ನು ಹುಡುಕಲು ಪ್ರಾರಂಭಿಸಿದಾಗ, ಅವಳು ಸಿಕಾರ್‌ನಲ್ಲಿ ಕಾಣಿಸಿಕೊಂಡಳು. ಅಷ್ಟರಲ್ಲೇ ಅಮರೀನ್ ಒಂದು ಮಗಳ ತಾಯಿಯಾಗಿದ್ದಳು. ಪೊಲೀಸರು ಅಮರೀನ್ ಅವಳನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಅಮರೀನ್ ತಾನು ಪ್ರೌಢವಾಗಿರುವುದನ್ನು ಹೇಳಿ ರಾಜು ಸೈನಿ ಅವರೊಂದಿಗೆ ಇರಲು ಬಯಸುವುದಾಗಿ ಹೇಳಿದಳು, ಇಬ್ಬರಿಗೂ ಒಟ್ಟಿಗೆ ವಾಸಿಸಲು ನ್ಯಾಯಾಲಯ ಅನುಮತಿ ನೀಡಿದೆ. ಕೆಲವು ದಿನಗಳ ನಂತರ ಅಮ್ರೀನ್ ತನ್ನ ಹೆತ್ತವರನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದಳು. ಆಗ ರಾಜು ಸೈನಿ ಆಕೆಯನ್ನು ಅವಳ ತವರ ಮನೆಗೆ ಕರೆದುಕೊಂಡು ಹೋಗಿದ್ದಾನೆ ಕೆಲವು ದಿನಗಳ ನಂತರ, ರಾಜು ತನ್ನ ಹೆಂಡತಿ ಮತ್ತು ಮಗಳನ್ನು ಕರೆತರಲು ಹೋದಾಗ ಮಾತ್ರ ಅವನಿಗೆ ಹೊಡೆದು ಕಳಿಸಲಾಯಿತು. ರಾಜು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದನು; ಆದರೆ ಅದನ್ನು ನಿರ್ಲಕ್ಷಿಸಲಾಯಿತು. ಮೇ 13, ೨೦೨೩ ರಂದು, ರಾಜು ತನ್ನ ಮಾವನ ಮನೆಗೆ ಹೋಗಿದ್ದನು. ಆತ ಪತ್ನಿ ಹಾಗೂ ಮಗಳನ್ನು ಕಳುಹಿಸಬೇಕು ಎಂದು ಒತ್ತಾಯಿಸಿದನು. ಆಗ ರಾಜುಗೆ ಅತ್ತೆ, ಮಾವ, ಸೋದರ ಮಾವ ಸೇರಿ ಅಮಾನುಷವಾಗಿ ಥಳಿಸಿದ್ದಾರೆ. ಈ ದಾಳಿಯಿಂದ ರಾಜು ಸ್ಥಿತಿ ಹದಗೆಟ್ಟಿದೆ. ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಡೆವುತ್ತಿರುವಾಗ ೧೬ರಂದು ಮೃತಪಟ್ಟನು. ಖಾಂಡವ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಅವರ ಕೊಟ್ಟ ಮಾಹಿತಿಯ ಪ್ರಕಾರ, ಮೃತನ ಅತ್ತೆ, ಮಾವ ಮತ್ತು ಸೋದರ ಮಾವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕರ ನಿಲುವು
|