9 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಮರಳಿಸಿದ ಕಳ್ಳ !

ಕದ್ದ ನಂತರ, ಕಳ್ಳನಿಗೆ ಅನೇಕ ಸಮಸ್ಯೆಗಳು ಎದುರಾಯಿತು !

ಭುವನೇಶ್ವರ (ಒಡಿಶಾ) – ಇಲ್ಲಿನ ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ಲಿಂಗರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಂತರ ತನಿಖೆಯನ್ನು ಪ್ರಾರಂಭಿಸಿದರು; ಆದರೆ ಕಳೆದ ೯ ವರ್ಷಗಳಿಂದ ಅವರ ಪತ್ತೆಯಾಗಲಿಲ್ಲ. ಇದೀಗ ೯ ವರ್ಷಗಳ ನಂತರ ಸ್ವತಃ ಈ ಕಳ್ಳನೇ ದೇವಸ್ಥಾನದಿಂದ ಕದ್ದ ಎಲ್ಲಾ ವಸ್ತುಗಳನ್ನು ವಾಪಸ್ ನೀಡಿದ್ದಾನೆ. ಅವನು ತನ್ನನ್ನು ತಾನೇ ದಂಡಿಸಿಕೊಂಡನು. ೧೦೧ ದಂಡವನ್ನೂ ಪಾವತಿಸಿದ್ದು, ೨೦೧ ರೂಪಾಯಿಯ ದಕ್ಷಿಣೆಯನ್ನು ನೀಡಿದ್ದಾನೆ. ಆತ ಒಂದು ಪತ್ರವನ್ನು ಬರೆದಿದ್ದಾನೆ. ಅದರಲ್ಲಿ ದೇವರ ಒಡವೆಗಳನ್ನು ಕದ್ದು ತಾನು ಎದುರಿಸಿದ ಕಷ್ಟಗಳ ಬಗ್ಗೆ ಬರೆದುಕೊಂಡಿದ್ದಾನೆ. ಈ ಕಾರಣದಿಂದಲೇ ದೇವರ ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ ಎಂದು ಆತ ಬರೆದಿದ್ದಾನೆ. ಕಳ್ಳನ ಗುರುತು ಇನ್ನೂ ಪತ್ತೆಯಾಗಲಿಲ್ಲ.

ಸಂಪಾದಕರ ನಿಲುವು

ಈ ಬಗ್ಗೆ ಅಂನಿಸ ಮತ್ತು ಬುದ್ಧಿವಾದಿಗಳು ಏನು ಹೇಳುತ್ತಾರೆ ?