ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರ ಪ್ರಶ್ನೆ !
ಪಾಟಲಿಪುತ್ರ (ಬಿಹಾರ) – `ಭಾರತವನ್ನು ಹಿಂದೂ ರಾಷ್ಟ್ರ ಮಾಡೋಣ’ ಎಂದು ಯಾರು ಹೇಳುತ್ತಾರೆಯೋ, ಅವರ ಬಗ್ಗೆ ನನಗೆ ಆಶ್ಚರ್ಯವೆನಿಸುತ್ತದೆ. ಹೀಗೆ ಮಾತನಾಡುವ ಆವಶ್ಯಕತೆಯೇನಿದೆ ? ಇಲ್ಲಿ ಹಿಂದೂ ಮತ್ತು ಮುಸಲ್ಮಾನ ಹೀಗೆ ಸರ್ವ ಧರ್ಮದ ಜನರಿದ್ದಾರೆ. ಎಲ್ಲರಿಗೂ ಅವರ ಪದ್ಧತಿಯಿಂದ ಪೂಜೆಯನ್ನು ಮಾಡುವ ಅಧಿಕಾರವಿದೆ. ಸರ್ವ ಧರ್ಮವನ್ನು ಒಪ್ಪಿಕೊಳ್ಳಲು ಎಲ್ಲರಿಗೂ ಅಧಿಕಾರವಿದೆ, ಎಂದು ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹಿಂದೂ ರಾಷ್ಟ್ರದ ವಿಷಯದಲ್ಲಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಕಳೆದ 4 ದಿನಗಳಿಂದ ಪಾಟಲಿಪುತ್ರದಲ್ಲಿ ಹನುಮಾನ ಕಥಾವಾಚನ ಮಾಡುತ್ತಿದ್ದಾರೆ. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹನುಮಾನ ಕಥೆಗೆ ಉಪಸ್ಥಿತರಿರುವಂತೆ ಮುಖ್ಯಮಂತ್ರಿ ನಿತೀಶ ಕುಮಾರ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರಿಗೆ ಆಮಂತ್ರಣವನ್ನು ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು.
#Bihar CM #NitishKumar‘s sharp response to #BageshwarBaba #DhirendraShashtri‘s comment
Know what he said…https://t.co/HaRVPEGFVo
— DNA (@dna) May 16, 2023
`ಹಿಂದೂ ರಾಷ್ಟ್ರದ ವಿಷಯದಲ್ಲಿ ಹೇಳಿಕೆ ನೀಡುವುದು ಸಂವಿಧಾನದ ಉಲ್ಲಂಘನೆಯಂತೆ !’
ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡುವುದರಿಂದ ಸಂವಿಧಾನದ ಉಲ್ಲಂಘನೆ ಎಲ್ಲಿಯೂ ಆಗುವುದಿಲ್ಲ. ಸಂವಿಧಾನದಲ್ಲಿ ಇಲ್ಲಿಯವರೆಗೆ 100 ಕ್ಕಿಂತ ಹೆಚ್ಚು ಸಲ ತಿದ್ದುಪಡಿ ಮಾಡಲಾಗಿದೆ. ಅದರಲ್ಲಿ ಇನ್ನೊಂದು ತಿದ್ದುಪಡಿ ಮಾಡಿ ಭಾರತವು ಹಿಂದೂ ರಾಷ್ಟ್ರವಾಗಿದೆಯೆಂದು ಘೋಷಿಸಬಹುದಾಗಿದೆ !
ನಿತೀಶಕುಮಾರರು ತಮ್ಮ ಮಾತನ್ನು ಮುಂದುವರಿಸಿ, ಸಂವಿಧಾನ ಎಲ್ಲರ ಅನುಮೋದನೆಯೊಂದಿಗೆ ರಚಿಸಲಾಗಿದೆ. ಯಾರು ಹಿಂದೂ ರಾಷ್ಟ್ರದ ವಿಷಯದಲ್ಲಿ ತಮ್ಮಿಷ್ಟದಂತೆ ಮಾತನಾಡುತ್ತಾರೆಯೋ, ಅದಕ್ಕೆ ಯಾವುದೇ ಮಹತ್ವವಿಲ್ಲ.”ಇಂತಹ ಹೇಳಿಕೆ ನೀಡುವುದೆಂದರೆ ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ಪ್ರಸಾರಮಾಧ್ಯಮಗಳು ಹೇಳಬೇಕು. ಯಾರು ಹಿಂದೂ ರಾಷ್ಟ್ರ ವಿಷಯದಲ್ಲಿ ಮಾತನಾಡುತ್ತಿದ್ದಾರೆಯೋ, ಅವರ ಜನನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆಗಿಲ್ಲ. ಸಂವಿಧಾನ ಪ್ರತಿಯೊಬ್ಬರ ಉನ್ನತಿಗಾಗಿ ಇರುವುದು. ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದಿದ್ದರೆ, ಸಂಸತ್ತಿನಲ್ಲಿ ಎರಡು ತೃತೀಯಾಂಶ ಬಹುಮತ ಇರಬೇಕು ಎಂದು ಹೇಳಿದರು.
ಸಂಪಾದಕರುಜಗತ್ತಿನಲ್ಲಿ 52 ಮುಸ್ಲಿಂ, 150 ಕ್ಕಿಂತಲೂ ಹೆಚ್ಚು ಕ್ರೈಸ್ತ ರಾಷ್ಟ್ರಗಳಿವೆ; ಆದರೆ 100 ಕೋಟಿ ಹಿಂದೂಗಳ ಒಂದೇ ಒಂದು ಹಿಂದು ರಾಷ್ಟ್ರವಿಲ್ಲ. ಒಂದು ವೇಳೆ ಬಹುಸಂಖ್ಯಾತ ಹಿಂದೂಗಳಿಗೆ `ನಮ್ಮ ಹಿಂದೂ ರಾಷ್ಟ್ರವಿರಬೇಕು’ ಎಂದು ಎನಿಸುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ? |