‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಕ್ಕೆ ತಮಿಳುನಾಡಿನ ದ್ರಮುಕ ಸರಕಾರದಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಜ್ಞಾಪತ್ರ !
ನವ ದೆಹಲಿ – ಬಂಗಾಲ ಮತ್ತು ತಮಿಳುನಾಡು ರಾಜ್ಯಗಳಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ಬಿಡುಗಡೆಗೆ ನಿಷೇಧ ಹೇರಿರುವುದನ್ನು ವಿರೋಧದಲ್ಲಿ ಚಲನಚಿತ್ರದ ನಿರ್ಮಾಪಕರಾದ ವಿಪುಲ್ ಶಹಾ ಮತ್ತು ನಿರ್ದೇಶಕ ಸುದೀಪ್ತೋ ಸೇನ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣದ ಹಿಂದಿನ ವಿಚಾರಣೆ ವೇಳೆ ಎರಡೂ ರಾಜ್ಯದ ಸರಕಾರಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಅದಕ್ಕಾಗಿ ತಮಿಳುನಾಡು ಸರಕಾರ ನ್ಯಾಯಾಲಯಕ್ಕೆ ಪ್ರತಿಜ್ಞಾಪತ್ರ ಸಲ್ಲಿಸಿದೆ. ಅರಕಾರವು, ‘ಚಿತ್ರ ನಿರ್ಮಾಪಕರು ಅರ್ಜಿಯಲ್ಲಿ ಸುಳ್ಳು ದಾವೆ ಮಾಡಿದ್ದಾರೆ ಎಂದು ಹೇಳಿದೆ. ನಾವು ರಾಜ್ಯದಲ್ಲಿ ಚಲನಚಿತ್ರವನ್ನು ನಿಷೇಧಿಸಲಿಲ್ಲ. ಚಿತ್ರಮಂದಿರದ ನಿರ್ವಾಹಕರು ಸ್ವತಃ ಚಿತ್ರಮಂದಿರಗಳಿಂದ ಚಲನಚಿತ್ರವನ್ನು ತೆಗೆದುಹಾಕಿದ್ದಾರೆ. ವೀಕ್ಷಕರಿಂದ ಕಡಿಮೆ ಪ್ರತಿಕ್ರಿಯೆ ಬಂದಿದ್ದರಿಂದ ಚಿತ್ರವನ್ನು ತೆಗೆಯಲಾಗಿದೆ ಎಂದು ಹೇಳಿದೆ.
‘The Kerala Story बैन नहीं की, बल्कि लोग ही फिल्म…’- हलफनामे में बोली तमिलनाडु सरकार#TheKeralaStory #tamilnadu #adahsharmahttps://t.co/i0jnuSMlXu
— रिपब्लिक भारत (@Republic_Bharat) May 16, 2023
೧. ಸರಕಾರವು, ೧೯ ಮಲ್ಟಿಪ್ಲೆಕ್ಸ್ ಚಲನಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಅರ್ಜಿದಾರರು ಚಲನಚಿತ್ರವನ್ನು ನಿಷೇಧಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ರಾಜ್ಯದಲ್ಲಿ ವಾಸ್ತವವಾಗಿ ಪ್ರತಿ ಮಲ್ಟಿಪ್ಲೆಕ್ಸ್‌ನಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿತ್ತು. ಸಿನಿಮಾ ನೋಡುವಾಗ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ರಾಜ್ಯ ಸರಕಾರ ಎಚ್ಚರ ವಹಿಸಿತ್ತು. ಚಿತ್ರ ಪ್ರದರ್ಶನ ಮಾಡುವ ೨೧ ಚಲನಚಿತ್ರಮಂದಿರ ಭದ್ರತೆಗಾಗಿ ೨೫ ಉಪ ಪೊಲೀಸ್ ಆಯುಕ್ತರು ಸೇರಿದಂತೆ ೯೬೫ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚಲನಚಿತ್ರಮಂದಿರ ಮಾಲೀಕರೇ ಚಿತ್ರಕ್ಕೆ ಸ್ಪಂದನೆ ಸಿಗದ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು ಮತ್ತು ಚಲನಚಿತ್ರ ಪ್ರದರ್ಶಿಸುವ ಚಲನಚಿತ್ರಮಂದಿರಗಳಿಗೆ ಭದ್ರತೆ ಒದಗಿಸಿದ್ದು ಬಿಟ್ಟರೆ ಪ್ರೇಕ್ಷಕರನ್ನು ಹೆಚ್ಚಿಸಲು ತಮಿಳುನಾಡು ರಾಜ್ಯ ಏನೂ ಮಾಡಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿದೆ.
೨. ವಿಪುಲ್ ಶಾಹ ಇವರು ಅರ್ಜಿಯಲ್ಲಿ, ‘ರಾಜ್ಯ ಸರಕಾರವು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲು ಚಿತ್ರಮಂದಿರದ ನಿರ್ವಾಹಕರಿಗೆ ಬೆಂಬಲ ನೀಡುವುದಿಲ್ಲ. ಇದರಿಂದಾಗಿ ರಾಜ್ಯದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಹಿಂಪಡೆದಿವೆ’, ಎಂದು ಸರಕಾರದಿಂದ ಅನೌಪಚಾರಿಕವಾಗಿ ಹೇಳಲಾಗಿತ್ತು.” ಈ ಬಗ್ಗೆ ತಮಿಳುನಾಡು ಸರಕಾರ ಈ ಹೇಳಿಕೆಯನ್ನು ತಳ್ಳಿಹಾಕಿದೆ ಮತ್ತು ‘ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಚಲನಚಿತ್ರವು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ತೋರಿಸಲಾಗುತ್ತಿದ್ದು ಅದರಿಂದ ೧೦೦ ಕೋಟಿ ರೂಪಾಯಿಗಳನ್ನು ಗಳಿಸಿದೆ. ಹೀಗುರುವಾಗಲೂ ತಮಿಳುನಾಡಿನಲ್ಲಿ ಬಿಡುಗಡೆಯಾದ ಮೊದಲ ೩ ದಿನಗಳಲ್ಲಿ ಚಲನಚಿತ್ರಮಂದಿರದ ಮಾಲೀಕರು ಅದನ್ನು ತೆಗೆದುಹಾಕಿದ್ದಾರೆ. ಇದರಿಂದ ದ್ರಮುಖ ಸರಕಾರವು ನ್ಯಾಯಾಲಯದಲ್ಲಿ ಹೇಳುತ್ತಿರುವುದು ಎಷ್ಟು ಸುಳ್ಳು ಎಂಬುದು ಇದರಿಂದ ತಿಳಿಯುತ್ತದೆ ! ಹಿಂದುದ್ವೇಷದಲ್ಲಿ ದ್ರಮುಕ ಸರಕಾರದಿಂದ ಇನ್ನೇನು ನಿರೀಕ್ಷಿಸಬಹುದು ? |