ಜಮ್ಮುವಿನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ದಿ ಕೇರಳ ಸ್ಟೋರಿ’ಯಿಂದ ವಿದ್ಯಾರ್ಥಿಗಳ ನಡುವೆ ಘರ್ಷಣೆ : ೫ ಮಂದಿಗೆ ಗಾಯ

ಜಮ್ಮು (ಜಮ್ಮು-ಕಾಶ್ಮೀರ) – ಮೇ ೧೪ ರ ರಾತ್ರಿ ಸರಕಾರಿ ವೈದ್ಯಕೀಯ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಇದರಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ೧೫ ರಂದು ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದರು.

1. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಧ್ಯಯನದ ಗುಂಪಿನಲ್ಲಿ, ವಿದ್ಯಾರ್ಥಿಗಳು ಚಲನಚಿತ್ರಗಳನ್ನು ವೀಕ್ಷಿಸುವ ಕುರಿತು ಕೆಲವು ಪ್ರತಿಕ್ರಿಯೆಗಳನ್ನು ನೀಡಿದರು. ಇದಾದ ನಂತರ ವಿವಾದ ಹೆಚ್ಚಾಯಿತು. ಬಳಿಕ ನಡೆದ ಗಲಾಟೆಯಲ್ಲಿ ೫ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆ ಪ್ರಕರಣದಿಂದ ಮಹಾವಿದ್ಯಾಲಯವು ೧೦ ವಿದ್ಯಾರ್ಥಿಗಳನ್ನು ೨ ತಿಂಗಳ ಕಾಲ ವಸತಿನಿಲಯದಿಂದ ಅಮಾನತುಗೊಳಿಸಿದೆ.

2. ಈ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಕೇಂದ್ರ ಸರಕಾರವು ಹಿಂಸೆ ಮತ್ತು ದ್ವೇಷವನ್ನು ಉತ್ತೇಜಿಸುವ ಚಲನಚಿತ್ರಗಳನ್ನು ಉತ್ತೇಜಿಸುತ್ತಿದೆ. (ಸಿನಿಮಾದಲ್ಲಿ ಸತ್ಯವನ್ನು ತೋರಿಸಿದರೆ ಮತಾಂಧ ರಾಜಕಾರಣಿಗಳು ಹೊಟ್ಟೆಯುರಿಯಾಗುತ್ತದೆ ಎಂಬುದನ್ನು ಗಮನಿಸಿ ! – ಸಂಪಾದಕರು)

ಭಾಜಪ ಸಣ್ಣಪುಟ್ಟ ಲಾಭಕ್ಕಾಗಿ ಅಮಾಯಕರ ರಕ್ತವನ್ನು ಚೆಲ್ಲುತ್ತಿದೆ. ಈ ಬಗ್ಗೆ ರಾಜ್ಯಪಾಲರು ಪ್ರಕರಣದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸ ಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.