ಸನಾತನ ಹಿಂದೂಗಳು ಎಚ್ಚೆತ್ತುಕೊಂಡು ಮತ ಚಲಾಯಿಸುತ್ತಾರೆ, ಆಗ ಮಾತ್ರ ಹಿಂದೂ ರಾಷ್ಟ್ರ ಬರುತ್ತದೆ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಪಟಲಿಪುತ್ರ (ಬಿಹಾರ) – ಸನಾತನಿ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಅರಿತುಕೊಂಡ ದಿನವೇ ಭಾರತವು ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಫೇಸ್‌ಬುಕ್ ಲೈವ್’ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ರಾಜಕೀಯ ನಾಯಕನಲ್ಲ ಮತ್ತು ನಾನು ಯಾರಿಗೂ ಬೆಂಬಲ ನೀಡುವುದಿಲ್ಲ. ನಾವು ಹಿಂದೂ ರಾಷ್ಟ್ರವನ್ನು ಬಯಸುವುದು ಕಾಗದದ ಮೇಲೆ ಅಲ್ಲ ಹೃದಯದಲ್ಲಿ, ಇದರಿಂದ ನಮ್ಮ ಸಂಸ್ಕೃತಿ ಸುರಕ್ಷಿತವಾಗಿರುತ್ತದೆ.

(ಸೌಜನ್ಯ: IndiaTV )

‘ಧರ್ಮಗುರುಗಳಿಗೆ ಇಂತಹ ವಿಷಯಗಳ ಬಗ್ಗೆ ಮಾತನಾಡುವ ಹಕ್ಕಿಲ್ಲಂತೆ !’ – ಜನತಾ ದಳ (ಸಂಯುಕ್ತ)

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜನತಾ ದಳ (ಸಂಯುಕ್ತ) ಪಕ್ಷದ ವಕ್ತಾರ ನೀರಜ್ ಕುಮಾರ್ ಇವರು, ಇಂತಹ ಹೇಳಿಕೆಗಳನ್ನು ನೀಡುವುದು ಧರ್ಮಗುರುಗಳ ಕೆಲಸವಲ್ಲ. ಇಂತಹ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರ ಧರ್ಮಗುರುಗಳಿಗೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದರಿಂದ ಏನೂ ಆಗುವುದಿಲ್ಲ. ಹಿಂದೂ ರಾಷ್ಟ್ರಕ್ಕಾಗಿ ಸಂಸತ್ತಿಗೆ ಹೋಗಬೇಕು ಎಂದು ಹೇಳಿದರು.

‘ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನವನ್ನು ಬದಲಾಯಿಸಲಾಗುತ್ತದೆಯೇ?’ – ಆರ್ಜೆಡಿ

ಸಂವಿಧಾನವನ್ನು ಇಲ್ಲಿಯವರೆಗೆ 100 ಬಾರಿ ತಿದ್ದುಪಡಿ ಮಾಡಲಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸೇರಿಸಿದರು. ಇಂತಹ ಸಮಯದಲ್ಲಿ ಹಿಂದೂಗಳು ಆರಿಸಿದ ಸಂಸದರು ‘ಹಿಂದೂ ರಾಷ್ಟ್ರ’ ಎಂದು ಸಂವಿಧಾನದಲ್ಲಿ ತಿದ್ದುಪಡಿ ತಂದರೆ ಅದರಲ್ಲಿ ತಪ್ಪೇನು ?

ರಾಷ್ಟ್ರೀಯ ಜನತಾ ದಳದ ಮುಖಂಡ ಮೃತ್ಯುಂಜಯ ತಿವಾರಿ ಇವರು ಮಾತನಾಡಿ, ಭಾರತವು ಸಂವಿಧಾನ ಮತ್ತು ಕಾನೂನುಗಳಿಂದ ಆಡಳಿತ ನಡೆಸುವ ರಾಷ್ಟ್ರವಾಗಿದೆ. ನಾನು ಧೀರೇಂದ್ರಕೃಷ್ಣ ಶಾಸ್ತ್ರಿ ಅವರನ್ನು, ಅವರು ಹಿಂದೂ ರಾಷ್ಟ್ರವನ್ನು ಮಾಡಲು ಸಂವಿಧಾನವನ್ನು ಬದಲಾಯಿಸುತ್ತಾರೆಯೇ? ಎಂದು ಕೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.