ಹಿಂದೂ ಜನಜಾಗೃತಿ ಸಮತಿಯಿಂದ ‘ದಿ ಕೇರಳ ಸ್ಟೋರಿ : ಲವ್ ಜಿಹಾದ್‌ನಿಂದ ಐಸಿಸ್ ವರೆಗೆ ! ಈ ವಿಷಯದಲ್ಲಿ ವಿಶೇಷ ಸಂವಾದ

ಮುಂಬೈ – ‘ಜನಸಂಖ್ಯಾ ಹೆಚ್ಚಳ, ‘ಲ್ಯಾಂಡ್ ಜಿಹಾದ್ ಮತ್ತು ‘ಲವ್ ಜಿಹಾದ್ ಇವು ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಗುರಿಗಳಾಗಿವೆ. ಎಡ ಮತ್ತು ಪಾಶ್ಚಾತ್ಯ ಮಾಧ್ಯಮಗಳು ಇದನ್ನು ಕಾಲ್ಪನಿಕ ಎಂದು ಕರೆಯುತ್ತವೆ; ಆದರೆ ‘ದಿ ಕೇರಳ ಸ್ಟೋರಿಯು ಒಂದು ಕಹಿ ಸತ್ಯವಾಗಿದ್ದು ‘ಲವ್ ಜಿಹಾದ್ ಇದು ಹಿಂದೂ-ಕ್ರೈಸ್ತ ಮಹಿಳೆಯರ ಗರ್ಭಾಶಯದ ಮೇಲಿನ ಭಯೋತ್ಪಾದಕ ದಾಳಿಯಾಗಿದೆ. ೨೦೧೯ ರಲ್ಲಿ ‘ಹಲಾಲಾ ಪದ್ಧತಿಯ ಆಧಾರದ ಮೇಲೆ ‘ಹಲಾಲಾ ಎ ಕರ್ಸ್ ಎಂಬ ಚಲನಚಿತ್ರವನ್ನು ಕಾಂಗ್ರೆಸ್ ವಿರೋಧಿಸಿತು; ಆದರೆ ಚಲನಚಿತ್ರ ನಿರ್ಮಾಪಕರು ‘ಹಲಾಲಾ ಪದ್ಧತಿಯ ಭಯಾನಕ ಸತ್ಯವನ್ನು ನ್ಯಾಯಾಲಯದ ಮುಂದೆ ಸಿದ್ಧಪಡಿಸಿದ್ದರಿಂದ ಕಾಂಗ್ರೆಸ್‌ನ ವಿರೋಧ ವಿಫಲವಾಯಿತು. ೨೦೧೦ ರಲ್ಲಿಯೂ ಕೇರಳ ಉಚ್ಚ ನ್ಯಾಯಾಲಯದಲ್ಲಿ ‘ಲವ್ ಜಿಹಾದ್ ಸತ್ಯ ಬೆಳಕಿಗೆ ಬಂದಿತ್ತು. ಇದನ್ನು ತಡೆಯಲು ಸರಕಾರ ಅಂತರ್ಜಾತೀಯ ವಿವಾಹಕ್ಕೆ ನಿರ್ಬಂಧ ಹೇರಬೇಕಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ‘ದಿ ಕೇರಳ ಸ್ಟೋರಿ ಸಿನಿಮಾ ಮಾಡಲಾಗಿದೆ. ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನೆಯಲ್ಲಿ ಪಾಕಿಸ್ತಾನವು ತೊಡಗಿದೆ ಎಂದು ಹಿಂಸಾತ್ಮಕ ಘಟನೆಗಳು ತೋರಿಸುತ್ತವೆ, ಆದರೆ ಕೇರಳದಲ್ಲಿನ ಭಯೋತ್ಪಾದನೆಯು ‘ಲವ್ ಜಿಹಾದ್ ಎಂಬ ‘ಸಾಫ್ಟ್ ಟೆರರಿಸಮ್ನ ಭಾಗವಾಗಿದ್ದು ‘ಲವ್ ಜಿಹಾದ್ಗಳಿಗೆ ‘ಸೌದಿ ಮತ್ತು ‘ಸಿರಿಯಾದಂತಹ ದೇಶಗಳು ಇದರ ಹಿಂದಿವೆ, ಎಂದು ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಇವರು ಖಂಡತುಂಡವಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ದಿ ಕೇರಳ ಸ್ಟೋರಿ : ಲವ್ ಜಿಹಾದ್‌ನಿಂದ ಐಸಿಸ್ ವರೆಗೆ ! ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಕು. ಪ್ರತೀಕ್ಷಾ ಕೊರಗಾಂವಕರ್ ಇವರು ಮಾತನಾಡಿದರು.
‘ಲವ್ ಜಿಹಾದ್ನ ೨೨ ಪ್ರಕರಣಗಳ ದಾಖಲಾದ ಬಗ್ಗೆ ‘ಮಾಹಿತಿ ಹಕ್ಕುನ ಅಡಿಯಲ್ಲಿ ವಿವರ ನೀಡಲಾಗಿದೆ ! – ಕು. ಪ್ರತೀಕ್ಷಾ ಕೊರಗಾಂವಕರ್

ಒಂದು ಕಡೆ ಕಾಂಗ್ರೆಸ್ ಮತ್ತು ಎಡಪಂಥೀಯರು ‘ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದರೆ, ಇನ್ನೊಂದು ಕಡೆ ೨೦೧೧ ರಲ್ಲಿ ಮಹಾರಾಷ್ಟ್ರದಲ್ಲಿ ಇದೇ ಕಾಂಗ್ರೆಸ್ ಪಕ್ಷದ ಸರಕಾರ ಇದ್ದಾಗ ಸುತ್ತೋಲೆ ಹೊರಡಿಸಿ ‘ಲವ್ ಜಿಹಾದ್ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕೇಳಿಕೊಂಡಿದ್ದು, ‘ಲವ್ ಜಿಹಾದ್ನ ೨೨ ಪ್ರಕರಣಗಳು ದಾಖಲಾಗಿರುವ ಬಗ್ಗೆ ‘ಮಾಹಿತಿ ಅಧಿಕಾರದ ಅಡಯಲ್ಲಿ ನೀಡಲಾಗಿತ್ತು. ಅಲ್ಲದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಆಗಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಇವರು ೨೦೧೦ ರಲ್ಲಿ ನೇರವಾಗಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ‘ಮುಂದಿನ ೨೦ ವರ್ಷಗಳಲ್ಲಿ ಕೇರಳವನ್ನು ‘ಇಸ್ಲಾಮಿಕ್ ಸ್ಟೇಟ್ ಮಾಡಲು ಸಂಚು ರೂಪಿಸ ಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಇಂಗ್ಲೆಂಡ್‌ನ ಗೃಹಸಚಿವರು ಇತ್ತಿಚೆಗೆ ಪಾಕಿಸ್ತಾನಿ ಮೂಲದ ಹುಡುಗರು ‘ಇಸ್ಲಾಮಿಕ್ ಗ್ರೂಮಿಂಗ್ ಗ್ಯಾಂಗ್ ಮೂಲಕ ಇಂಗ್ಲೆಂಡ್‌ನಲ್ಲಿರುವ ಕ್ರೈಸ್ತ ಹುಡುಗಿಯರನ್ನು ಗುರಿ ಯಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ‘ಸ್ವೀಡನ್ ‘ದಿ ಕೇರಳ ಸ್ಟೋರಿಯಂತೆ ತನ್ನ ದೇಶದಲ್ಲಿನ ಮಹಿಳೆಯರ ಮೇಲೆ ‘ಐಎಸ್‌ಐಎಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದಕರು ನಡೆಸಿದ ಭಯಾನಕ ದೌರ್ಜನ್ಯದ ಬಗ್ಗೆ ಚಲನಚಿತ್ರ ಸರಣಿಯನ್ನು ನಿರ್ಮಿಸಿತ್ತು ಮತ್ತು ಅದರ ಬಗ್ಗೆ ಜನಜಾಗೃತಿ ಮೂಡಿಸಲು ಪ್ರೋತ್ಸಾಹಿಸಿದ್ದರು.
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!