ಕೊಲೆ ಆರೋಪ ಹೊತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಒಂದು ದಿನವೂ ಪ್ರಚಾರಕ್ಕೆ ಹೋಗದೆ ಕ್ಷೇತ್ರದಿಂದ ಗೆಲುವು !

ಬೆಳಗಾವಿ – ಯೋಗೀಶ್ ಗೌಡ ಹತ್ಯೆ ಆರೋಪದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು. ವಿನಯ ಕುಲಕರ್ಣಿ ಒಂದು ದಿನವೂ ಚುನಾವಣಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೆ ತಮ್ಮ ಬಂಧುಗಳು, ಕಾರ್ಯಕರ್ತರು ಮಾಡಿದ ಪ್ರಚಾರದಿಂದಲೇ ಗೆಲುವು ಸಾಧಿಸಿದ್ದಾರೆ. ವಿನಯ ಕುಲಕರ್ಣಿ 89 ಸಾವಿರದ 333 ಮತಗಳನ್ನು ಪಡೆದರೆ, ಭಾಜಪದ ಪರಾಜಿತ ಅಭ್ಯರ್ಥಿ ಅಮೃತ ದೇಸಾಯಿ 71 ಸಾವಿರದ 296 ಮತಗಳನ್ನು ಪಡೆದರು.

ಸಂಪಾದಕೀಯ ನಿಲುವು

ಕೊಲೆ ಆರೋಪಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ವ್ಯವಸ್ಥೆಯಿಂದ ಏನು ಪ್ರಯೋಜನ ? ಇಂತಹ ಚುನಾಯಿತ ಅಭ್ಯರ್ಥಿಗಳಿಂದ ಸುರಾಜ್ಯದ ನಿರೀಕ್ಷಿಸಬಹುದೇ ?