ಸನಾತನದ ಮೊದಲ ಬಾಲಕಸಂತರಾದ ‘ಭಾರ್ಗವರಾಮರಿಗೆ ಆ ಹೆಸರನ್ನು ನಾಮಕರಣ ಮಾಡಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಸೂಚಿಸಿದ್ದರು. ಅವರಿಟ್ಟಿರುವ ಹೆಸರಿನಲ್ಲಿನ ಚೈತನ್ಯದ ಬಗ್ಗೆ ಪೂ. ಭಾರ್ಗವರಾಮರ ತಾಯಿ ಸೌ. ಭವಾನಿ ಪ್ರಭು ಇವರ ಗಮನಕ್ಕೆ ಬಂದಿರುವ ಕೆಲವು ಅನುಭವದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
೧. ಭಾರ್ಗವರಾಮ ಎಂಬ ಹೆಸರು ಹೇಳಲು ದೊಡ್ಡದಾಗಿದ್ದರೂ ಯಾರೂ ಅವರನ್ನು ‘ಭಾರ್ಗವ ಅಥವಾ ‘ರಾಮ ಎಂದು ಕರೆಯುವುದಿಲ್ಲ. ಮನೆಯಲ್ಲಿನ ನಾವೆಲ್ಲರೂ, ನಮ್ಮ ಮನೆಯ ಅಕ್ಕಪಕ್ಕದವರು ಮತ್ತು ಪೂ. ಭಾರ್ಗವರಾಮರ ಶಾಲೆಯ ಶಿಕ್ಷಕರೂ ಸಹ ಅವರನ್ನು ಪೂರ್ಣ ಹೆಸರಿನಿಂದಲೇ ಕರೆಯುತ್ತಾರೆ.
೨. ಪೂ. ಭಾರ್ಗವರಾಮ ಎಂದು ಹೇಳಿದಾಗ ನನಗೆ ಬಹಳ ಅಂತರ್ಮುಖತೆಯ ಅರಿವಾಗುತ್ತದೆ. ‘ಭಾರ್ಗವರಾಮ ಈ ಹೆಸರಿನಿಂದ ನನ್ನಲ್ಲಿ ಈ ಜೀವದ ಬಗ್ಗೆ ಗೌರವ ಮತ್ತು ಭಾವ ಹೆಚ್ಚಾಗಿದೆ.
೩. ಸಮಾಜದಲ್ಲಿನ ವ್ಯಕ್ತಿಗಳಿಗೆ ‘ಪೂ. ಭಾರ್ಗವರಾಮ ಈ ಹೆಸರಿನಲ್ಲಿನ ಚೈತನ್ಯದಿಂದ ಬಂದಿರುವ ಅನುಭವಗಳು !
೩ ಅ. ‘ಪುರೋಹಿತರಿಗೆ ಅವರ ‘ಕುಲದೇವರು ಪೂ. ಭಾರ್ಗವರಾಮರವರ ರೂಪದಲ್ಲಿ ಬಂದಿದ್ದಾರೆ ಎಂದು ಅನಿಸಿ ಅವರ ಭಾವಜಾಗೃತವಾಗುವುದು : ‘ಭಾರ್ಗವರಾಮರು ಓರ್ವ ಪುರೋಹಿತರ ಕುಲದೇವರು ಆಗಿದ್ದಾರೆ. ಒಂದು ಸಲ ಅವರ ಮನೆಯಲ್ಲಿ ಒಂದು ಕಾರ್ಯಕ್ರಮವಿತ್ತು. ಅವರು ನನಗೆ ಪೂ. ಭಾರ್ಗವರಾಮರನ್ನು ತಪ್ಪದೇ ಕರೆದುಕೊಂಡು ಬರಲು ವಿನಂತಿಸಿದ್ದರಿಂದ ನಾನು ಪೂ. ಭಾರ್ಗವರಾಮ ಅವರನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಪೂ. ಭಾರ್ಗವರಾಮರನ್ನು ನೋಡಿದ ಕ್ಷಣವೇ ಪುರೋಹಿತರ ಭಾವಜಾಗೃತವಾಯಿತು. “ನನ್ನ ಕುಲದೇವರೇ ಬಾಲ ರೂಪ ದಲ್ಲಿ ಇಲ್ಲಿ ಬಂದಿದ್ದಾರೆ ಎಂದು ಹೇಳಿದರು, ಅವರು ಪೂ. ಭಾರ್ಗವರಾಮ ಅವರನ್ನು ತುಂಬಾ ಮುದ್ದಾಡಿದರು.
೩ ಆ. ಶಿಬಿರದ ವ್ಯಕ್ತಿಗಳು ಪೂ. ಭಾರ್ಗವರಾಮರವರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು : ಪೂ. ಭಾರ್ಗವರಾಮ ಒಂದು ಮಂದಿರದಲ್ಲಿ ನಡೆದ ಸಂಸ್ಕಾರ ಶಿಬಿರ ಮತ್ತು ಸಂಸ್ಕೃತ ಭಾರತಿ ಕೇಂದ್ರದ ಶಿಬಿರದಲ್ಲಿ ಸಹಭಾಗಿಯಾಗಿದ್ದರು. ಅಲ್ಲಿ ಬಂದಿದ್ದ ಎಲ್ಲ ವ್ಯಕ್ತಿಗಳು ಮತ್ತು ಶಿಕ್ಷಕಿ ಪೂ. ಭಾರ್ಗವರಾಮರ ಹೆಸರನ್ನು ನೆನಪಿನಲ್ಲಿಟ್ಟುಕೊಂಡಿದ್ದರು. ಅವರು ನಮ್ಮನ್ನು ಯಾವಾಗಲಾದರೂ ಎಲ್ಲಿಯಾದರೂ ಭೇಟಿಯಾದರೆ, ಅವರು ಭಾರ್ಗವರಾಮ ಈ ಹೆಸರನ್ನು ನೆನಪಿನಲ್ಲಿಟ್ಟಿಕೊಂಡು ಪೂ. ಭಾರ್ಗವರಾಮ ಎಂದು ಅವರನ್ನು ಕರೆಯುತ್ತಾರೆ.
೩ ಇ. ಅಂಗಡಿಯವರು ಮತ್ತು ಪುರೋಹಿತರು ಪೂ. ಭಾರ್ಗವರಾಮರನ್ನು ಅವರ ಹೆಸರಿನಿಂದ ಕರೆಯುವುದು : ನಾವು ಯಾವಾಗಲಾದರು ಅಂಗಡಿಗೆ ಮತ್ತು ದೇವಸ್ಥಾನಕ್ಕೆ ಹೋದರೆ ಕೆಲವು ಅಂಗಡಿಯವರು ಮತ್ತು ಪುರೋಹಿತರು ಪೂ. ಭಾರ್ಗವರಾಮರ ಹೆಸರು ಕೇಳುತ್ತಾರೆ. ನಂತರ ನಾವು ಅಲ್ಲಿಗೆ ಪುನಃ ಯಾವಾಗಲಾದರು ಹೋದರೆ ಅವರು “ಪೂ. ಭಾರ್ಗವರಾಮರಿಗೆ ಏನು ಬೇಕು ?, ಎಂದು ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಕೇಳುತ್ತಾರೆ. ಆಗ ನನಗೆ ಬಹಳ ಆಶ್ಚರ್ಯವಾಗುತ್ತದೆ.
೩ ಈ. ಯಾರಾದರೂ ಪೂ. ಭಾರ್ಗವರಾಮರಿಗೆ ಅವರ ಹೆಸರನ್ನು ಕೇಳಿದಾಗ ಅವರು ‘ಭಾರ್ಗವರಾಮ ಪ್ರಭು ಎಂದು ಹೇಳುತ್ತಾರೆ. ಆಗ ಹೆಚ್ಚಿನ ಜನರು ಭಾರ್ಗವರಾಮರ ಹೆಸರನ್ನು ಮತ್ತೆ ಮತ್ತೆ ಉಚ್ಚರಿಸುತ್ತ, “ಎಷ್ಟು ಒಳ್ಳೆಯ ಹೆಸರಿದೆ ! ಎಂದು ಹೇಳುತ್ತಾರೆ. ಕೆಲವು ಜನರು “ಇದು ಪರಶುರಾಮನ ಹೆಸರಾಗಿದೆ ಎನ್ನುತ್ತಾರೆ.
೩ ಉ. ಒಂದು ಸಲ ನಾವು ಒಂದು ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಹೋಗಿದ್ದೆವು. ಆಗ ದಾರಿಯಲ್ಲಿ ಒಬ್ಬ ಅಪರಿಚಿತ ಮಹಿಳೆ ಭೇಟಿಯಾದಳು. ಆಗ ‘ಭಾರ್ಗವರಾಮ ಎಂಬ ಹೆಸರನ್ನು ಕೇಳಿ ಅವಳು ಪೂ. ಭಾರ್ಗವರಾಮರ ಚರಣಗಳನ್ನು ಹಿಡಿದು “ನೀವು ನಿಜವಾಗಿಯೂ ಭಾರ್ಗವರಾಮರಾಗಿರುವಿರಿ. ಈ ಮಗುವಿನಲ್ಲಿ ನನಗೆ ಭಾರ್ಗವರಾಮರು ಕಾಣಿಸುತ್ತಾರೆ, ಎಂದು ಹೇಳಿದಳು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಪೂ. ಭಾರ್ಗವರಾಮ ಎಂದು ಹೇಳಿದಾಗ, ‘ಅವರ ಅಪಾರ ಕೃಪಾದೃಷ್ಟಿ ಮತ್ತು ಅಗಾಧವಾದ ಪ್ರೀತಿ ಭಾರ್ಗವರಾಮರ ಮೇಲೆ ಮಳೆಯಂತೆ ಸುರಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಆಗ ನನ್ನ ಭಾವ ಜಾಗೃತವಾಗುತ್ತದೆ.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಪೂ. ಭಾರ್ಗವರಾಮ ಎಂದು ನಾಮಕರಣ ಮಾಡಿದ್ದಾರೆ. ‘ಅವರು ಈ ಮಾಧ್ಯಮದಿಂದ ಪೂ. ಭಾರ್ಗವರಾಮ ಇವರಿಗೆ ಶಕ್ತಿ, ಚೈತನ್ಯ ಮತ್ತು ಅಪಾರ ಆಶೀರ್ವಾದವನ್ನು ನೀಡಿದ್ದಾರೆ ಎಂದು ನನಗೆ ಅನಿಸುತ್ತದೆ.
ನಾನು ನನ್ನ ಈ ವಿಚಾರಗಳನ್ನು ಗುರುದೇವರ ಚರಣಗಳಲ್ಲಿ ಅರ್ಪಿಸುತ್ತೇನೆ. ಗುರುದೇವಾ, ಪ್ರತಿ ಕ್ಷಣವೂ ನೀವೇ ನನಗೆ ಪೂ. ಭಾರ್ಗವರಾಮ ಇವರ ಸ್ಮರಣೆ ಮಾಡುವ ಅವಕಾಶವನ್ನು ನೀಡಿ ನನ್ನನ್ನು ಉದ್ಧರಿಸುತ್ತಿದ್ದೀರಿ. ನಿಮ್ಮ ಚರಣಗಳಲ್ಲಿ ಹೃತ್ಪೂರ್ವಕ ಕೃತಜ್ಞತೆಗಳು !
– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು. (೨೦.೪.೨೦೨೩)
ಸನಾತನದ ೪೪ ನೇ ಸಂತರಾದ ಪೂ.(ಶ್ರೀಮತಿ) ರಾಧಾ ಪ್ರಭುರವರ ಹುಟ್ಟುಹಬ್ಬದಂದು ಅವರ ಮರಿಮೊಮ್ಮಗ ಪೂ. ಭಾರ್ಗವರಾಮ ಪ್ರಭು (ವಯಸ್ಸು ೬) ಇವರಿಂದ ಪಾದ್ಯಪೂಜೆ‘೧೦.೪.೨೦೨೩ ರಂದು ನನ್ನ ಹುಟ್ಟುಹಬ್ಬ ಇದೆ ಎಂದು ಗೊತ್ತಿದ್ದರೂ, ನಾನು ಅದಕ್ಕೆ ಅಷ್ಟೇನು ಮಹತ್ವ ಕೊಡಲಿಲ್ಲ. ನಾನು ನಿತ್ಯದಂತೆ ಬೆಳಗ್ಗೆ ಸ್ನಾನ ಮಾಡಿ ಅಲ್ಪಾಹಾರಕ್ಕಾಗಿ ಹೊರಟಿದ್ದೆ. ಆ ಸಮಯದಲ್ಲಿ ಭಾರ್ಗವರಾಮರು (ನನ್ನ ಮರಿಮೊಮ್ಮಗ) ಬೊಗಸೆ ತುಂಬ ಹೂವುಗಳನ್ನು ತೆಗೆದುಕೊಂಡು ನನ್ನ ಕೋಣೆಗೆ ಬಂದರು. ಅವರು ನನಗೆ ಮಂಚದ ಮೇಲೆ ಕುಳಿತುಕೊಳ್ಳಲು ಹೇಳಿದರು. ಅವರು ನನ್ನ ಪಾದಗಳ ಮುಂದೆ ಸಾಲುಗಳಲ್ಲಿ ಹೂವುಗಳನ್ನು ಜೋಡಿಸಿದರು. ನಾನು ಅವರಿಗೆ, “ನೀವು ಇದು ಏನು ಮಾಡುತ್ತಿದ್ದೀರಿ ? ಎಂದು ಕೇಳಿದಾಗ ಅವರು, “ಇಂದು ನಿಮ್ಮ ಹುಟ್ಟುಹಬ್ಬವಿದೆ; ಆದ್ದರಿಂದ ನಿಮ್ಮ ಪಾದ್ಯಪೂಜೆ ಮಾಡಿ ನಮಸ್ಕಾರ ಮಾಡಲು ಬಂದಿದ್ದೇನೆ ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿ ನನಗೆ ತುಂಬಾ ಭಾವಜಾಗೃತಿಯಾಯಿತು. ನಾನು ಅವರ ಮೇಲೆ ಪ್ರೀತಿಯ ಸುರಿಮಳೆಗೈದು ಮುತ್ತು ಕೊಟ್ಟೆನು. (‘ಪೂ. ಭಾರ್ಗವರಾಮರವರು ಇತರ ಚಿಕ್ಕ ಮಕ್ಕಳ ಹಾಗೆ ಪೂ. ರಾಧಾ ಪ್ರಭು ಇವರಿಗೆ ಕೇವಲ ನಮಸ್ಕರಿಸದೆ ಅವರ ಪಾದ್ಯ ಪೂಜೆ ಮಾಡಿದರು, ಇದರಿಂದ ಪೂ. ಭಾರ್ಗವರಾಮ ಇವರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಇರುವ ಪ್ರಗಲ್ಭತೆ ಮತ್ತು ಅಸಾಮಾನ್ಯತೆ ಗಮನಕ್ಕೆ ಬರುತ್ತದೆ. – ಸಂಪಾದಕರು) – ಪೂ. ರಾಧಾ ಪ್ರಭು (ಪೂ. ಭಾರ್ಗವರಾಮರ ಮುತ್ತಜ್ಜಿ), ಮಂಗಳೂರು (೧೫.೪.೨೦೨೩) |