ಸಾಧಕರೇ, ಪ್ರತಿಷ್ಠೆ ಕಾಪಾಡುವುದು ಎಂಬ ಅಹಂನ ಲಕ್ಷಣದಿಂದ ಸ್ವಂತದ ತಪ್ಪುಗಳನ್ನು ಮುಚ್ಚಿಟ್ಟು ಭಗವಂತನ ಚರಣಗಳಿಂದ ದೂರ ಹೋಗುವ ಬದಲು, ತಪ್ಪುಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಮತ್ತು ಈಶ್ವರಪ್ರಾಪ್ತಿಯ ಕಡೆಗೆ ಸಾಗಿರಿ !

ಶ್ರೀಸತ್‌ಶಕ್ತಿ (ಸದ್ಗುರು) ಸೌ. ಬಿಂದಾ ಸಿಂಗಬಾಳ

ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಸಾಧಕರಲ್ಲಿ ಪ್ರಾಮಾಣಿಕತನ ಎಂಬ ಮೂಲ ಭೂತ ಗುಣವಿರುವುದು ಅನಿವಾರ್ಯವಾಗಿದೆ. ಕೆಲವು ಸಾಧಕರು ತಮ್ಮ ತಪ್ಪುಗಳನ್ನು ಜವಾಬ್ದಾರ ಸಾಧಕರಿಂದ ಮತ್ತು ಸಹಸಾಧಕರಿಂದ  ಮುಚ್ಚಿಡುತ್ತಾರೆ ಅಥವಾ ಅವರಿಗೆ ಸರಿಪಡಿಸಿ ಹೇಳುವುದು ಅವರಲ್ಲಿ ಸುಳ್ಳು ಹೇಳುವುದು; ಆದ ಪ್ರಯತ್ನಗಳನ್ನು ಮಾತ್ರ ತಿಳಿಸುವುದು, ಮಾಡದಿರುವ ಪ್ರಯತ್ನಗಳನ್ನು ಉಲ್ಲೇ ಖಿಸದಿರುವುದು ಇತ್ಯಾದಿ ಆಯೋಗ್ಯ ಕೃತಿಗಳನ್ನು ಸ್ವಂತದ ಪ್ರತಿಮೆಯನ್ನು ಹಾಳಾಗಬಾರದು; ಎಂದು ಸಮಯ ಕಳೆಯಲು ಮಾಡಲಾಗುತ್ತದೆ. ಇಂತಹ ಅಪ್ರಾಮಾಣಿಕ ಕೃತಿಗಳಿಂದ ಸಾಧನೆಯಲ್ಲಿ ಶೀಘ್ರ ಅವನತಿಯಾಗಿ ಅಧೋಗತಿಗೆ ಕಾರಣವಾಗುತ್ತದೆ ಈಶ್ವರನಿಗೆ ನಮ್ಮ ಪ್ರತಿಯೊಂದು ಕೃತಿಯ ಕಡೆ ಗಮನವಿರುತ್ತದೆ. ಯಾವ ಪಾಪಿಯು ತನ್ನ ಪಾಪವನ್ನು ಇಡೀ ಜಗತ್ತಿಗೆ ಹೇಳುತ್ತಾನೆ, ಅವನೇ ಮಹಾತ್ಮನಾಗಲು ಅರ್ಹನು, ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಸಾಧಕರು ಪ್ರಯತ್ನಿಸು ವುದು ಅಪೇಕ್ಷಿತವಿದೆ. ಅಪ್ರಾಮಾಣಿಕತನದ ತಪ್ಪುಗಳು ಆದರೆ, ಸಾಧಕರು ಪ್ರತಿಮೆ ಕಾಪಾಡುವುದು ಎಂಬ ಅಹಂನ ಲಕ್ಷಣವನ್ನು ತೊಡೆದು ಸಹ ಸಾಧಕರಲ್ಲಿ ಮತ್ತು ಜವಾಬ್ದಾರಿ ಸಾಧಕರಲ್ಲಿ ಪ್ರಾಮಾಣಿಕವಾಗಿ ತಿಳಿಸಿ ಕ್ಷಮೆಯಾಚಿಸಬೇಕು. ನಮ್ಮಿಂದಾಗುವ ತಪ್ಪುಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು, ಬದಲಾವಣೆಯಾಗದಿದ್ದರೆ ಶಿಕ್ಷೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಿದರೆ ಅವನ ಪಾಪಗಳು ಪರಿಮಾರ್ಜನೆಯಾಗುವುದು. ಸ್ವಂತದ ತಪ್ಪುಗಳನ್ನು ಹೇಳುವುದರಲ್ಲಿ ಒತ್ತಡ ಅನಿಸುತ್ತಿದ್ದರೆ, ಸಾಧಕರು ಪ್ರಸಂಗವನ್ನು ಅಭ್ಯಾಸ ಮಾಡುವುದು ಪ್ರಯತ್ನಿಸ ಬೇಕು, ಬೋರ್ಡ್‌ನಲ್ಲಿ ತಪ್ಪನ್ನು ಬರೆದು ಬೈಟಕನಲ್ಲಿ ತಪ್ಪುಗಳನ್ನು ಹೇಳುವುದು, ಸ್ವಯಂ-ಸೂಚನೆಯನ್ನು ಕೊಡುವುದು, ಮುಂತಾದ ಪ್ರಯತ್ನಗಳನ್ನು ಮಾಡಬೇಕು.

ಸಾಧಕರೇ, ಪ್ರಾಮಾಣಿಕತನ ಎಂಬ ಗುಣವು ಈಶ್ವರ ಪ್ರಾಪ್ತಿಯ ಹಾದಿಯ ಮೊದಲ ಹೆಜ್ಜೆಯಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಪ್ರಯತ್ನಿಸಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧.೩.೨೦೨೩)