ಸಾಧಕರೇ, ಸನಾತನದ ಕಾರ್ಯಕ್ಕೆ ಸಹಾಯ ಮಾಡುವ ಜಿಜ್ಞಾಸು ಮತ್ತು ಹಿತಚಿಂತಕರಿಗೆ ಸಾಧನೆಯಲ್ಲಿನ ಆನಂದ ಅನುಭವಿಸುವಂತಾಗಲು ಅವರಿಗೆ ಸಾಧನೆಯ ಮುಂದಿನ ದಿಶೆಯನ್ನು ತೋರಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸನಾತನದ ಕಾರ್ಯ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಸನಾತನದ ಬಗ್ಗೆ ಆಸಕ್ತಿಯಿರುವ ಹಿತಚಿಂತಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಮಾಜದಲ್ಲಿನ ಅನೇಕ ಜಿಜ್ಞಾಸುಗಳು ‘ಸನಾತನ ಪ್ರಭಾತ ನಿಯತಕಾಲಿಕೆಗಳನ್ನು ನಿಯಮಿತವಾಗಿ ಓದುತ್ತಾರೆ. ಬಹಳಷ್ಟು ಉದ್ಯಮಿಗಳು ಮತ್ತು ನ್ಯಾಯವಾದಿಗಳು ತಮ್ಮ ವ್ಯವಹಾರವನ್ನು ಸಂಭಾಳಿಸಿಕೊಂಡು ಸಂಸ್ಥೆಯ ರಾಷ್ಟ್ರ ಮತ್ತು ಧರ್ಮಕಾರ್ಯಕ್ಕೆ ನಿರಪೇಕ್ಷತನವಾಗಿ ಸಹಾಯ ಮಾಡುತ್ತಾರೆ. ಜಾಹಿರಾತುಗಳನ್ನು ನೀಡಿ ಅಥವಾ ಧನರೂಪದಲ್ಲಿ ಅರ್ಪಣೆ ನೀಡಿ ಸನಾತನದ ಧರ್ಮಕಾರ್ಯಕ್ಕೆ ಸಹಾಯಮಾಡುವ ಹಿತಚಿಂತಕರ ಸಂಖ್ಯೆಯೂ ಬಹಳಷ್ಟಿದೆ.

ಸಾಧಕರು ಬಹಳಷ್ಟು ಸಲ ಸಂಚಿಕೆಗಳ ವಿತರಣೆಗಾಗಿ, ಜಾಹಿರಾತುಗಳನ್ನು ತರಲು ಅಥವಾ ಅರ್ಪಣೆ ಪಡೆಯಲು ಈ ಹಿತಚಿಂತಕರನ್ನು ಭೇಟಿಯಾಗುತ್ತಾರೆ; ಆದರೆ ಇತರ ಸಮಯದಲ್ಲಿ ಅವರನ್ನು ಭೇಟಿಯಾಗಿ ಹೊಸ ಉಪಕ್ರಮಗಳ ಮಾಹಿತಿಯನ್ನು ಹೇಳುವುದು, ಸಾಧನೆಯ ಬಗ್ಗೆ ಹೇಳುವುದು, ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು ಮುಂತಾದ ಪ್ರಯತ್ನಗಳನ್ನು ಮಾಡುವುದಿಲ್ಲ. ನಿಜ ಹೇಳಬೇಕಾದರೆ ‘ಪರಾತ್ಪರ ಗುರು ಡಾಕ್ಟರರು ಆರಂಭಿಸಿದ ಅಧ್ಯಾತ್ಮ ಮತ್ತು ಧರ್ಮ ಪ್ರಸಾರಕಾರ್ಯವನ್ನು ಎಲ್ಲೆಡೆ ತಲುಪಿಸುವುದು ಮತ್ತು ಸಾಧನೆಯ ಒಲವಿರುವ ಪ್ರತಿಯೊಬ್ಬ ಜಿಜ್ಞಾಸುವನ್ನು ಯೋಗ್ಯ ಸಾಧನೆಯ ಕಡೆಗೆ ಕರೆದೊಯ್ಯುವುದೇ ಸಾಧಕರ ನಿಜವಾದ ಸಮಷ್ಟಿ ಸಾಧನೆಯಾಗಿದೆ.

ಈ ದೃಷ್ಟಿಯಿಂದ ಸಾಧಕರು ಹಿತಚಿಂತಕರನ್ನು ಆಗಾಗ ಪ್ರತ್ಯಕ್ಷ ಭೇಟಿಯಾಗಬೇಕು. ಅವರ ಅಭಿರುಚಿಯನ್ನು ಗುರುತಿಸಿ ಅವರಿಗೆ ಸಾಧನೆಯ ಮುಂದಿನ ದಿಶೆಯನ್ನು ನೀಡಬೇಕು ಮತ್ತು ಅವರಿಗೆ ಸಾಧನೆಯಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗಬೇಕೆಂದು ಪ್ರಯತ್ನಿಸಬೇಕು.

ಸಾಧಕರೇ, ‘ಸನಾತನದೊಂದಿಗೆ ಜೋಡಿಸಲ್ಪಟ್ಟ ವಾಚಕರು, ಹಿತಚಿಂತಕರು ಮತ್ತು ಜಿಜ್ಞಾಸುಗಳಿಗೆ ಸಾಧನೆಯ ಯೋಗ್ಯ ದಿಶೆಯನ್ನು ನೀಡಿ ಸಮಷ್ಟಿ ಸಾಧನೆಯನ್ನು ಮಾಡಿರಿ ಮತ್ತು ಸಮಾಜಋಣದಿಂದ ಮುಕ್ತರಾಗಿರಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೩.೨೦೨೩)