ಬೀದಿನಾಯಿಗಳ ಆತಂಕ !

ನಿಮ್ಮ ಪರಿಸರದಲ್ಲಿ ಅಥವಾ ನಗರದಲ್ಲಿ ಇಂತಹ ಸ್ಥಿತಿ ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿರಿ !

ಇತ್ತೀಚೆಗೆ ಪುಣೆಯಲ್ಲಿ ನಾಯಿ ಕಚ್ಚುವ ಘಟನಗಳು ಮಿತಿಮೀರಿದ್ದು ಅದರಿಂದ ಅಲ್ಲಿನ ನಾಗರಿಕರು ಹತಾಶರಾಗಿದ್ದಾರೆ. ಪ್ರತಿ ತಿಂಗಳು ಸುಮಾರು ೧ ಸಾವಿರದ ೫೦೦ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದು ಪಾಲಿಕೆಯ ಪಶುವೈದ್ಯಕೀಯ ವಿಭಾಗವು ಪುಣೆಯಲ್ಲಿ ಕಳೆದ ವರ್ಷವಿಡೀ ನಾಯಿ ಕಚ್ಚಿದ ೧೬ ಸಾವಿರದ ೫೬೯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಅಂಕಿಅಂಶಗಳು ಆಡಳಿತದವರಿಗೆ ನಾಚಿಕೆಗೀಡಾಗಿದೆ ಎಂದೇ ಹೇಳಬೇಕಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳಾದರೂ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಆಡಳಿತವು ವಿಫಲವಾಗಿದೆ ಎಂಬುದು ಚಿಂತಾಜನಕವಾಗಿದೆ. ನಾಯಿ ಕಚ್ಚುವುದರಿಂದ ಹರಡುವ ‘ರೆಬೀಜ್ ಒಂದು ವೈರಾಣುಜನ್ಯ ರೋಗವಾಗಿದೆ. ರೆಬೀಜ್ ರೋಗಿಯ ಶರೀರದೊಳಗೆ ಹೋದನಂತರ ನರವ್ಯೂಹದ ಮೇಲೆ ಆಕ್ರಮಣ ಮಾಡುತ್ತದೆ. ಇದರಿಂದ ರೋಗಿಯ ಮೆದುಳಿನಲ್ಲಿ ಮತ್ತು ಬೆನ್ನುಹುರಿಯಲ್ಲಿ ಬಾವು ಬರುತ್ತದೆ. ಜಾಗತಿಕ ಆರೋಗ್ಯ ಸಂಘಟನೆಯ ಅಭಿಪ್ರಾಯಕ್ಕನುಸಾರ ಯಾವುದೇ ವ್ಯಕ್ತಿಯಲ್ಲಿ ರೆಬೀಜ್‌ನ ಲಕ್ಷಣಗಳು ಕಾಣಿಸಿದರೆ ಅದು ಹೆಚ್ಚುಕಡಿಮೆ ಶೇ. ೧೦೦ ರಷ್ಟು ಅಪಾಯಕಾರಿಯಾಗಿರು ತ್ತದೆ. ಮಹತ್ವದ ವಿಷಯವೆಂದರೆ ಶೇ. ೯೯ ರಷ್ಟು ಪ್ರಕರಣಗಳಲ್ಲಿ ರೆಬೀಜ್ ವೈರಾಣುಗಳು ಮಾನವರಲ್ಲಿ ಹರಡಲು ಸಾಕುನಾಯಿಗಳೇ ಕಾರಣವಾಗಿರುತ್ತವೆ. ಇಂದು ಕೂಡ ಭಾರತದಲ್ಲಿ ಪ್ರತಿವರ್ಷ ರೆಬೀಜ್‌ನಿಂದ ೨೧ ಸಾವಿರಕ್ಕಿಂತಲೂ ಹೆಚ್ಚು ಜನರು ಸಾಯುತ್ತಾರೆ. ಜಗತ್ತಿನಲ್ಲಿ ಅತೀ ಹೆಚ್ಚು ನಾಯಿ ಕಚ್ಚುವ ಪ್ರಮಾಣ ಭಾರತದಲ್ಲಿದೆ. ನಾಯಿ ಕಚ್ಚಿದ ನಂತರ ರೆಬೀಜ್ ನಿಂದಾಗುವ ಸಾವನ್ನು ತಪ್ಪಿಸಲು ಲಸಿಕೆಯನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬೇಕು ? ಎನ್ನುವ ವಿಷಯದಲ್ಲಿ ಅಜ್ಞಾನವಿದೆ. ೨೦೩೦ ರ ವರೆಗೆ ರೆಬೀಜನ್ನು ಸಂಪೂರ್ಣ ಉಚ್ಚಾಟಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನ ಆರಂಭವಾಗಿದೆ; ಆದರೆ ಭಾರತದಲ್ಲಿ ಅದು ಕೇವಲ ಗೋವಾ, ಅಂಡಮಾನ ಹಾಗೂ ಸಿಕ್ಕಿಮ್‌ನಲ್ಲಿ ನಡೆಯುತ್ತಿದೆ. ಪಾಶ್ಚಿಮಾತ್ಯರಿಂದ ಕೆಲವು  ವಿಷಯಗಳು ಕಲಿಯುವ ಹಾಗಿದೆ. ಸಿಂಗಾಪುರ, ಸ್ಟಾಕ್‌ಹೋಮ್,  ಚಿಕಾಗೋ, ಸಿಡ್ನಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಿದೆ. ಅವರು ಲಕ್ಷಗಟ್ಟಲೆ ನಾಯಿಗಳನ್ನು ಕೊಂದು ಹಾಕಿ ಈ ಸಮಸ್ಯೆಯನ್ನು ಬಗೆಹರಿಸಿದ್ದಲ್ಲ, ಅವರು ೩ ಹಂತಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಒಂದು ಮುಚ್ಚಿಡುವ ಕಸದ ಪೆಟ್ಟಿಗೆ, ಇನ್ನೊಂದು ನಾಯಿಗಳಿಗೆ ಪರವಾನಿಗೆ ಕಡ್ಡಾಯ, ಮೂರನೆಯದು ನಾಯಿಗಳಿಗೆ ಸಾಮೂಹಿಕ ಲಸೀಕರಣ ! ಒಮ್ಮೆ ನಾಯಿಗಳ ಸಂಖ್ಯೆ ನಿಯಂತ್ರಿತಗೊಂಡರೆ, ಬೀದಿನಾಯಿಗಳ ಸಮಸ್ಯೆ ಕಡಿಮೆಯಾಗುತ್ತದೆ. ಭಾರತದಿಂದಲೂ ರೆಬೀಜ್ ಗಡಿಪಾರು ಮಾಡಲು ಸಾಧ್ಯವಿದೆ; ಆದರೆ ಅದಕ್ಕಾಗಿ ಸರಕಾರಿ ವ್ಯವಸ್ಥೆಯು ಕೃತಿಶೀಲವಾಗಿ ಪ್ರಯತ್ನಿಸುವ ಅವಶ್ಯಕತೆ ಯಿದೆ. ಭಾರತದ ಜನರ ಮಾನಸಿಕತೆ ಹಾಗೂ ಜನರಿಗೆ ಯಾವುದು ಯೋಗ್ಯ ? ಎಂಬುದರ ಅಭ್ಯಾಸ  ಮಾಡಿ ಹಾಗೆ ಕೃತಿ ಮಾಡಿದರೆ ಮಾತ್ರ ಬೀದಿ ನಾಯಿಗಳ ಸಮಸ್ಯೆ ಪರಿಹಾರವಾಗಬಹುದು; ಆದರೆ ರಾಜಕೀಯ  ಇಚ್ಛಾಶಕ್ತಿ ಇದ್ದರೆ ಮಾತ್ರ ಇವೆಲ್ಲವೂ ಸಾಧ್ಯವಾಗಬಹುದು !

– ಸೌ. ಅಪರ್ಣಾ ಜಗತಾಪ, ಪುಣೆ (ಆಧಾರ : ೭.೪.೨೦೨೩)