ದೆಹಲಿಯಲ್ಲಿ ಸಾಧುಗಳು ಮತ್ತು ಹಿಂದೂಗಳ ಹತ್ಯೆಗೆ ಸಂಚು !

  • ದೆಹಲಿ ಪೊಲೀಸರ ಮಾಹಿತಿ !

  • ಭಯೋತ್ಪಾದಕ ನೌಶಾದ್ ಮತ್ತು ಯಾಕೂಬ್ ವಿರುದ್ಧ ದೋಷಾರೋಪ ಪತ್ರ ಸಲ್ಲಿಕೆ !

  • ಜನವರಿ ೨೦೨೩ ರಲ್ಲಿ ಬಂಧಿಸಲಾಗಿತ್ತು !

ನವ ದೆಹಲಿ : ಭಯೋತ್ಪಾದಕರಾದ ನೌಶಾದ್ ಮತ್ತು ಜಗಜಿತ್ ಸಿಂಗ್ ಜಸ್ಸಾ ಅಲಿಯಾಸ್ ಯಾಕೂಬ್ ಇವರು ಸಾಧುಗಳು ಮತ್ತು ಹಿಂದೂಗಳ ಹತ್ಯೆಯ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ದೆಹಲಿ ಪೊಲೀಸರು ಈ ಇಬ್ಬರು ಭಯೋತ್ಪಾದಕರ ವಿರುದ್ಧ ದಾಖಲಿಸಿರುವ ದೋಷಾರೋಪ ಪತ್ರದಲ್ಲಿ ನೀಡಿದ್ದಾರೆ. ಈ ಇಬ್ಬರನ್ನು ಜನವರಿ 2023 ರಂದು ದೆಹಲಿ ಪೊಲೀಸರು ಬಂಧಿಸಿದ್ದರು.

ಆರೋಪ ಪಟ್ಟಿಯಲ್ಲಿನ ಸೂತ್ರಗಳ ಪ್ರಕಾರ,

೧. ಐ.ಎಸ್.ಐ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯು ನೌಶಾದ್ ಮತ್ತು ಯಾಕೂಬ್ ಈ ಇಬ್ಬರು ಭಯೋತ್ಪಾದಕರಿಗೆ ಈ ಕೊಲೆಗೆ ಸುಪಾರಿ ನೀಡಿತ್ತು. ಐ.ಎಸ್.ಐ ನಿಂದ ಇಬ್ಬರಿಗೂ ಪ್ರತಿಯೊಂದು ಕೊಲೆಗೆ ಒಂದುವರೆ ಕೋಟಿ ರೂಪಾಯಿ ನೀಡಲಿದ್ದರು ಇದರೊಂದಿಗೆ, ಈ ಭಯೋತ್ಪಾದಕರು ಇತ್ತೀಚೆಗೆ ಬಂಧಿತರಾದ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್ ಅವರ ಮನೆಯಲ್ಲಿ ಅಡಗಿಕೊಳ್ಳುವುದಾಗಿ ಭರವಸೆ ನೀಡಿದ್ದರು. (ಇದರಿಂದ ಐ.ಎಸ್.ಐ ಮತ್ತು ಖಲಿಸ್ತಾನಿ ಪರ ನಡುವಿನ ಒಡಂಬಡಿಕೆಯನ್ನು ತೋರಿಸುತ್ತದೆ ! – ಸಂಪಾದಕರು)

೨. ನೌಶಾದ್ ಮತ್ತು ಯಾಕೂಬ್ ಇವರಿಬ್ಬರೂ ರಾಜ್ ಕುಮಾರ್ ಎಂಬ ಹಿಂದೂ ಯುವಕನನ್ನು ಅಪಹರಿಸಿ ಭಲಸ್ವಾ ಡೈರಿ ಭಾಗಕ್ಕೆ ಕರೆದೊಯ್ದು ಅಲ್ಲಿ ಅವನು ಕತ್ತು ಸೀಳಿ ದೇಹವನ್ನು ೮ ತುಂಡುಗಳಾಗಿ ಕತ್ತರಿಸಿದ್ದರು. ಅದರ ವಿಡಿಯೋ ಮಾಡಿ ಐ.ಎಸ್.ಐ.ಗೆ ಕಳುಹಿಸಿದ್ದರು. ಈ ವೀಡಿಯೋ ನೋಡಿದ ನಂತರ ಐ.ಎಸ್.ಐ ಮುಂದಿನ ಕೊಲೆಗಳ ಜವಾಬ್ದಾರಿಯನ್ನು ಇಬ್ಬರಿಗೆ ವಹಿಸಿದೆ. ರಾಜಕುಮಾರ್ ಕೈ ಮೇಲೆ ಶಿವನ ಹಚ್ಚೆಯ ಅಚ್ಚು ಹಾಕಿಸಿಕೊಂಡಿದ್ದನ್ನು ನೋಡಿ ಆತ ಹಿಂದೂ ಎಂದು ಇಬ್ಬರು ಗುರುತಿಸಿದರು. ಈ ಇಬ್ಬರ ಬಂಧನದ ನಂತರ ಅವರ ಮೊಬೈಲ್ ನಲ್ಲಿ ರಾಜಕುಮಾರ್ ಹತ್ಯೆಯ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ.

ಜಗಜಿತ್ ಸಿಂಗ್ ಜಸ್ಸಾ ಅಲಿಯಾಸ್ ಯಾಕೂಬ್ ಮತ್ತು ನೌಶಾದ್

೩. ಈ ಹತ್ಯೆಗಳಿಗಾಗಿ ಐ.ಎಸ್.ಐ ಯು ‘ಕಾಶ್ಮೀರ-ಖಾಲಿಸ್ತಾನ ವಿಭಾಗ’ವು ಸಾಬೀತುಪಡಿಸಿದ ‘ಹಿಟ್ ಲಿಸ್ಟ್’ನಲ್ಲಿ ಪಂಜಾಬ್‌ನ ಶಿವಸೇನೆ, ಬಜರಂಗದಳ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರು ಮತ್ತು ಹಿರಿಯ ಕಾಂಗ್ರೆಸ್ ನಾಯಕರೂ ಸೇರಿದ್ದಾರೆ.

೪. ಈ ಹತ್ಯೆಗಳ ಮೂಲಕ, ಐ.ಎಸ್.ಐ.ಗೆ ಭಾರತದಾದ್ಯಂತ ಗಲಭೆಗಳನ್ನು ಸೃಷ್ಟಿಸಲು ಮತ್ತು ಹಿಂದೂಗಳು ಮತ್ತು ಸಿಖ್ಖರ ನಡುವೆ ಅಪನಂಬಿಕೆಯನ್ನು ಸೃಷ್ಟಿಸಲು ಬಯಸಿದೆ. ಇದು ಖಲಿಸ್ತಾನಿ ಭಯೋತ್ಪಾದನೆಗೆ ಉತ್ತೇಜನ ನೀಡಲು ಐ.ಎಸ್.ಐ. ಸಂಚು ನಡೆಸಿತ್ತು.

೫. ನೌಶಾದ್ ಇತ ‘ಹರ್ಕತ್ ಉಲ್ ಅನ್ಸಾರ್’ ಈ ಸಂಘಟನೆಯ ಸದಸ್ಯವಾಗಿದ್ದಾನೆ. ಈತ ೨ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದಕ್ಕಾಗಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದರೊಂದಿಗೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ೧೦ ವರ್ಷ ಶಿಕ್ಷೆಯೂ ಆಗಿದೆ. ಯಾಕೂಬ್ ‘ಬಂಬಿಹಾ’ ಗ್ಯಾಂಗ್ ಸದಸ್ಯನಾಗಿದ್ದು, ಕೊಲೆಯೊಂದರಲ್ಲಿಯೂ ಭಾಗಿಯಾಗಿದ್ದ. ಇಬ್ಬರನ್ನೂ ಹಲ್ದ್ವಾನಿ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ಅವರಿಬ್ಬರ ಪರಿಚಯವಾಯಿತು. ಈ ಇಬ್ಬರು ಒಂದು ವರ್ಷದ ಹಿಂದೆ ಪೆರೋಲ್ ನಲ್ಲಿದ್ದರು. ಆ ನಂತರ ಮತ್ತಷ್ಟು ಅಪರಾಧಗಳನ್ನು ಮಾಡಲು ಆರಂಭಿಸಿದ್ದರು.

ಸಂಪಾದಕರ ನಿಲುವು

ಸರಕಾರವು ಎಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರನ್ನು ಗಲ್ಲಿಗೇರಿಸುವುದಿಲ್ಲವೋ ಅಲ್ಲಿಯವರೆಗೆ ಅವರಲ್ಲಿ ಭಯ ಹುಟ್ಟುವುದಿಲ್ಲ ಮತ್ತು ಅವರು ಹಿಂದೂಗಳ ಸಾಧು ಸಂತರನ್ನು ಮತ್ತು ನಾಯಕರನ್ನು ಕೊಲ್ಲುತ್ತಲೇ ಇರುತ್ತಾರೆ !

ಇಂತಹ ಜಿಹಾದಿ ಭಯೋತ್ಪಾದಕರ ದಾಳಿಯನ್ನು ಎದುರಿಸಲು ಎಷ್ಟು ಹಿಂದೂಗಳು ಸಿದ್ಧರಾಗಿದ್ದಾರೆ ? ಆದ್ದರಿಂದ ಹಿಂದೂಗಳು ಈಗಲೇ ಸ್ವಸಂರಕ್ಷಣ ಮಾಡಲು ಕಲಿಯಬೇಕು !