ಸಲಿಂಗ ಮದುವೆಗೆ ಮೂರು ರಾಜ್ಯಗಳಿಂದ ವಿರೋಧ ! -ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಮಾಹಿತಿ

ನವ ದೆಹಲಿ – ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಅಸ್ಸಾಂ ಎಂಬ 3 ರಾಜ್ಯಗಳು ಸಲಿಂಗ ವಿವಾಹಕ್ಕೆ ವಿರೋಧವಿದೆ ಎಂದು ಕೇಂದ್ರ ಸರ್ಕಾರ ಮೇ 10 ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ, ನ್ಯಾಯಮೂರ್ತಿ ಸಂಜಯ ಕಿಶನ ಕೌಲ್, ನ್ಯಾ. ಎಸ್. ಆರ್. ಭಟ್, ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಸಂವಿಧಾನ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಣಿಪುರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳು ತಮ್ಮ ಉತ್ತರವನ್ನು ತಕ್ಷಣವೇ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಈ ವಿಷಯದ ಬಗ್ಗೆ ವಿವರವಾದ ಚರ್ಚೆಯ ಅಗತ್ಯವಿದೆ ಎಂದು ಹೇಳಿವೆ. ವಿಚಾರಣೆ ವೇಳೆ ನ್ಯಾಯಾಲಯವು, ‘ಭಾರತೀಯ ಕಾನೂನುಗಳ ಪ್ರಕಾರ ಮಗುವನ್ನು ದತ್ತು ಪಡೆಯುವ ಹಕ್ಕು ಒಬ್ಬನೇ ವ್ಯಕ್ತಿಗೆ ಇದೆ. ಆದರ್ಶ ಕುಟುಂಬವು ಒಬ್ಬರ ಸ್ವಂತ ಜೈವಿಕ ಮಕ್ಕಳನ್ನು ಒಳಗೊಂಡಿದೆ; ಆದರೆ ಪರಿಸ್ಥಿತಿ ವಿಭಿನ್ನವಾಗಿರಬಹುದು ಎಂದು ಕಾನೂನು ಗುರುತಿಸುತ್ತದೆ.’ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣೆ ಕಾನೂನು ಆಯೋಗವು’, ವಾದಿಸಿದ್ದು, ‘ಲಿಂಗದ ಪರಿಕಲ್ಪನೆಯು ಅಸ್ಪಷ್ಟವಾಗಿರಬಹುದು; ಆದರೆ ತಾಯಿ ಮತ್ತು ಮಾತೃತ್ವದ ಪರಿಕಲ್ಪನೆಯು ಅಸ್ಪಷ್ಟವಾಗಿಲ್ಲ”, ಎಂದಿತು. ‘ನಮ್ಮ ಎಲ್ಲಾ ಕಾನೂನುಗಳು ಭಿನ್ನಲಿಂಗೀಯ ದಂಪತಿಗಳ ಮಕ್ಕಳ ಹಿತಾಸಕ್ತಿ ಮತ್ತು ಕಲ್ಯಾಣವನ್ನು ರಕ್ಷಿಸುತ್ತವೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮತ್ತೊಂದೆಡೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು “ವಿಭಿನ್ನಲಿಂಗಿ ದಂಪತಿಗಳ ಮಕ್ಕಳು ಮತ್ತು ಸಲಿಂಗ ದಂಪತಿಗಳ ಮಕ್ಕಳ ನಡುವೆ ವ್ಯತ್ಯಾಸವನ್ನು ತೋರಿಸುವ ಸರ್ಕಾರದ ನಿಲುವು ಸರಿಯಾಗಿದೆ” ಎಂದು ಹೇಳಿದರು.