ಅಸ್ಥಿರ ಪಾಕಿಸ್ತಾನ ಭಾರತಕ್ಕೆ ಅಪಾಯಕಾರಿ – ಫಾರೂಖ ಅಬ್ದುಲ್ಲಾ

ಫಾರೂಖ ಅಬ್ದುಲ್ಲಾರ ಪಾಕಿಸ್ತಾನಪರ ಹೇಳಿಕೆ

ಫಾರೂಖ ಅಬ್ದುಲ್ಲಾ

ನವದೆಹಲಿ- ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರ ಬಂಧನದ ಬಳಿಕ ಪಾಕಿಸ್ತಾನದಲ್ಲಿ ಹಿಂಸಾಚಾರ ಮತ್ತು ಪ್ರತಿಭಟನೆಗಳು ಮುಂದುವರಿದಿವೆ. ಸಂಪೂರ್ಣ ದೇಶದಲ್ಲಿ ಅಸ್ಥಿರತೆ ಹರಡಿದೆ. ಈ ಹಿನ್ನೆಲೆಯಲ್ಲಿ ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ ಅಧ್ಯಕ್ಷ ಫಾರೂಖ ಅಬ್ದುಲ್ಲಾ ಇವರು ಸ್ವಾತಂತ್ರ್ಯ ದೊರೆತಾಗಿನಿಂದ ಪಾಕಿಸ್ತಾನದ ಒಂದು ಕಪಟತನದ ಇತಿಹಾಸವಿದೆ; ಆದರೆ ಅಸ್ಥಿರ ಪಾಕಿಸ್ತಾನ ಭಾರತಕ್ಕೆ ಅಪಾಯಕಾರಿಯಾಗಿದೆ. ಪಾಕಿಸ್ತಾನದ ಸ್ಥಿರತೆ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ, ಎಂದು ಹೇಳಿದ್ದಾರೆ. (ಪಾಕಿಸ್ತಾನವು ಕಪಟತನದಿಂದ ಕಬಳಿಸಿರುವ ಕಾಶ್ಮೀರದ ಪ್ರದೇಶವನ್ನು ಮರಳಿ ಭಾರತದಲ್ಲಿ ವಿಲೀನಗೊಳಿಸುವುದೇ, ಪಾಕಿಸ್ತಾನದ ಸ್ಥಿರತೆಗಾಗಿ ಮಹತ್ವದ್ದಾಗಿದೆಯೆಂದು ಫಾರೂಖ ಅಬ್ದುಲ್ಲಾ ಹೇಳಿಕೆ ನೀಡುವರೇನು ?- ಸಂಪಾದಕರು)

ಫಾರೂಖ ಅಬ್ದುಲ್ಲಾ ಇವರು ಪಾಕಿಸ್ತಾನದ ಸಧ್ಯದ ಪರಿಸ್ಥಿತಿಯ ಬಗ್ಗೆಯೂ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಅರ್ಥವ್ಯವಸ್ಥೆ ನಿರಂತರವಾಗಿ ಕುಸಿಯುತ್ತಿದೆ. ಬಲೂಚಿಸ್ಥಾನದಲ್ಲಿ ನೆರೆಹಾವಳಿಯಿಂದ ಬಹಳ ದೊಡ್ಡ ಹಾನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಸ್ಥಿರತೆಯ ಅವಶ್ಯಕತೆಯಿದೆ ಎಂದು ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪ್ರತೀ ಸಲವೂ ಪಾಕ್ ಪ್ರೇಮ ಇಷ್ಟು ಉಮ್ಮಳಿಸುತ್ತಿರುವವರನ್ನು ಸರಕಾರ ಪಾಕಿಸ್ತಾನ ದೇಶಕ್ಕೆ ಏಕೆ ಅಟ್ಟುವುದಿಲ್ಲ?