ಕಳೆದ 5 ತಿಂಗಳಿನಲ್ಲಿ ನಾಶಿಕನಿಂದ 956 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆ !

ಪೊಲೀಸರ ವರದಿಯಲ್ಲಿನ ಮಾಹಿತಿ

ನಾಶಿಕ – ಇಲ್ಲಿಂದ ಪ್ರತಿದಿನ 2-3 ಹುಡುಗಿಯರು ನಾಪತ್ತೆಯಾಗುತ್ತಿದ್ದಾರೆ. ಜನೇವರಿಯಿಂದ ಮೇ 8, 2023 ವರೆಗಿನ ಕಾಲಾವಧಿಯಲ್ಲಿ 956 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆಂದು ಪೊಲೀಸ ಆಯುಕ್ತರ ಬಳಿ ಮಾಹಿತಿ ಇದೆ. ನಾಶಿಕ ಪೊಲೀಸರ ಪ್ರತಿದಿನದ ಅಪರಾಧದ ಸಂದರ್ಭದ ವರದಿಯಿಂದ ಈ ಅಂಕಿ-ಅಂಶಗಳು ಬಹಿರಂಗವಾಗಿದೆ. 956 ರಲ್ಲಿ 221 ಹುಡುಗಿಯರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, 18 ವರ್ಷಕ್ಕಿಂತ ಮೇಲಿನ ಹುಡುಗಿಯರು 735 ರಷ್ಟು ಇದ್ದಾರೆ. ಪೊಲೀಸರಿಗೆ ಕೇವಲ 31 ಅಪ್ರಾಪ್ತ ಹುಡುಗಿಯರು ಸಿಕ್ಕಿದ್ದಾರೆ. ಇನ್ನುಳಿದವರ ಶೋಧಕಾರ್ಯ ಮುಂದುವರಿದಿದೆ.

ನೌಕರಿ, ವಿವಾಹ, ಕೌಟುಂಬಿಕ ಕಲಹ, ಸಾಮಾಜಿಕ ಪ್ರಸಾರ ಮಾಧ್ಯಮಗಳ ಹೆಚ್ಚಿನ ಉಪಯೋಗ, ಪ್ರಿಯತಮೆಯಿಂದ ವಿವಾಹದ ಆಮಿಷ, ವಿವಾಹೇತರ ಸಂಬಂಧ, ಪ್ರೀತಿಯ ಆಮಿಷಗಳನ್ನೊಡ್ಡಿ ಹುಡುಗಿಯರ ದಿಕ್ಕು ತಪ್ಪಿಸುವುದೇ ನಾಪತ್ತೆಯಾಗಿರುವುದರ ಹಿಂದಿನ ಕಾರಣವಿರಬಹುದೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

`ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ವಿರೋಧಿಸಲು ಪ್ರಯತ್ನಿಸುವವರು ಈ ವಿಷಯದಲ್ಲಿ ಏನು ಹೇಳುವರು? ? ಈ ವಿಷಯವನ್ನು ಈಗಲೇ ಗಂಭೀರತೆಯಿಂದ ನೋಡುವ ಆವಶ್ಯಕತೆಯಿದೆ, ಇಲ್ಲವಾದರೆ `ದಿ ಮಹಾರಾಷ್ಟ್ರ ಸ್ಟೋರಿ’ ಚಲನಚಿತ್ರವನ್ನು ನಿರ್ಮಿಸಲು ಸಮಯ ತಗಲುವುದಿಲ್ಲ !