ಚೀನಾ ಆನ್ ಲೈನ್ ನಲ್ಲಿನ ತನ್ನ ದೇಶದ ಬಡತನದ ವಿಷಯಗಳ ವಿಡಿಯೋಗಳನ್ನು ಡಿಲೀಟ್ ಮಾಡುತ್ತಿದೆ !

ಬೀಜಿಂಗ (ಚೀನಾ) – ಚೀನಾದಲ್ಲಿರುವ ಬಡತನದ ವಿಷಯದ ವಿಡಿಯೋ ಆನ್ ಲೈನ್ ಮಾಧ್ಯಮದಿಂದ ಡಿಲೀಟ್ ಮಾಡುತ್ತಿದೆ. ಇದರ ಹಿಂದೆ ಚೀನಾ ಸರಕಾರದ ಕೈವಾಡವಿದೆಯೆಂದು ನ್ಯೂಯಾರ್ಕ ಟೈಮ್ಸ ವರದಿ ಮಾಡಿದೆ. ಚೀನಾ ಸರಕಾರ ತನ್ನ ದೇಶದಲ್ಲಿರುವ ಬಡತನ ಜಗತ್ತಿಗೆ ತೋರಿಸಲು ಇಚ್ಛಿಸುತ್ತಿಲ್ಲವೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಚೀನಾದ ಓರ್ವ ಸೇವಾನಿವೃತ್ತ ವ್ಯಕ್ತಿಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿತ್ತು. ಇದರಲ್ಲಿ ಈ ವ್ಯಕ್ತಿ ಅಂಗಡಿಯಿಂದ ಕಿರಾಣಿ ಸಾಮಾನುಗಳನ್ನು ಖರೀದಿಸಲು ಸಾಧ್ಯವಾಗದೇ ಇರುವುದನ್ನು ತೋರಿಸಲಾಗಿತ್ತು. ಈ ವಿಡಿಯೋವನ್ನು ಚೀನಾ ಅಧಿಕಾರಿ ತೆಗೆದುಹಾಕಿದನು. ಹಾಗೆಯೇ ಒಬ್ಬ ಗಾಯಕನು ಯುವಕರು ಮತ್ತು ಸುರಕ್ಷಿತ ಜನರ ಎದುರಿಗೆ ಆರ್ಥಿಕ ಸಂಕಷ್ಟ ಮತ್ತು ನಿರಾಶಾಜನಕ ನೌಕರಿಯ ಸಾಧ್ಯತೆ ಇತ್ಯಾದಿ ವಿಷಯಗಳ ಕುರಿತು ಹಾಡನ್ನು ಹಾಡಿದ್ದನು. ಈ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಯಿತು. ತದನಂತರ ಈ ಹಾಡನ್ನು ನಿಷೇಧಿಸಲಾಯಿತು. ಹಾಗೆಯೇ ಸಾಮಾಜಿಕ ಮಾಧ್ಯಮದ ಮೇಲಿನ ಆ ಯುವಕನ ಖಾತೆಯನ್ನು ನಿರ್ಬಂಧಿಸಲಾಗಿದೆ.