ಬೇಸಿಗೆಯಲ್ಲಿ ಮುಂದಿನ ಮುನ್ನೆಚ್ಚರಿಕೆಯನ್ನು ವಹಿಸಿ ವಿವಿಧ ಕಾಯಿಲೆಗಳಿಂದ ದೂರವಿರಿ !

‘ಸದ್ಯ ಬೇಸಿಗೆ ಪ್ರಾರಂಭವಾಗಿದೆ. ಈ ದಿನಗಳಲ್ಲಿ ಶರೀರದ ಉಷ್ಣತೆ ಹೆಚ್ಚುವುದು, ಬೆವರು ಬರುವುದು, ಶಕ್ತಿ ಕಡಿಮೆ ಯಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ಉಷ್ಣತೆ ಹೆಚ್ಚಾಗಿರುವುದರಿಂದ ವ್ಯಕ್ತಿಗಳು ಮೂರ್ಛೆ ಹೋಗಿ ಮರಣ ಹೊಂದಿದ ಅನೇಕ ಉದಾಹರಣೆಗಳಿವೆ. ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಎಲ್ಲರೂ ಮುಂದಿನ ದಕ್ಷತೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ವೈದ್ಯ ಮೇಘರಾಜ ಮಾಧವ ಪರಾಡಕರ

೧. ದಿನವಿಡೀ ಸಾಕಷ್ಟು ನೀರು ಅಥವಾ ನೀರಿಗೆ ಸಮಾನವಾದ ಪಾನೀಯಗಳನ್ನು ಕುಡಿಯಬೇಕು. ನೀರು ಕುಡಿಯಲು ಬಾಯಾರಿಕೆಯ ದಾರಿಯನ್ನು ಕಾಯಬಾರದು. ಗಾಢ ಬಣ್ಣದ ಮೂತ್ರವಾಗುತ್ತಿದ್ದರೆ ‘ಹೆಚ್ಚು ನೀರು ಕುಡಿಯಬೇಕು’, ಎಂಬುದನ್ನು ಗಮನದಲ್ಲಿಡಬೇಕು. ಶೀತಕಪಾಟದಲ್ಲಿನ ನೀರನ್ನು ಕುಡಿಯಬಾರದು. ಬೆಳಗ್ಗೆ ಮನೆಯಿಂದ ಹೊರಗೆ ಹೋಗುವ ಮೊದಲು ಒಂದು ಲೋಟ ನೀರು ಕುಡಿದು ಹೊರಡಬೇಕು. ಹೊರಗೆ ಹೋಗುವಾಗ ಜೊತೆಯಲ್ಲಿ ತಮ್ಮ ನೀರಿನ ಬಾಟಲಿ ಯನ್ನು ಇಟ್ಟುಕೊಳ್ಳಬಹುದು.

೨. ನೀರನ್ನು ಒಂದೇ ಸಲಕ್ಕೆ ಗಟಗಟ ಮತ್ತು ಹೆಚ್ಚು ನೀರು ಕುಡಿಯದೇ ನಿಧಾನವಾಗಿ ಕುಡಿಯಬೇಕು. ಬಿಸಿಲಿನಿಂದ ಬಂದ ನಂತರ ತಕ್ಷಣ ನೀರು ಕುಡಿಯದೇ ೫-೧೦ ನಿಮಿಷಗಳ ವರೆಗೆ ಶಾಂತವಾಗಿ ಕುಳಿತು ನಂತರ ನೀರು ಕುಡಿಯಬೇಕು.

೩. ಸಕ್ಕರೆ ಇರುವ ಪೇಯಗಳನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆ ಇರುವ ಪೇಯವು ಜೀರ್ಣವಾಗಲು ಜಡವಾಗಿರುವುದರಿಂದ ಸಾಧ್ಯವಾದಷ್ಟು ಅದನ್ನು ಕುಡಿಯಬಾರದು. ಸಾಧ್ಯವಾದರೆ ಪ್ರತಿ ದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಶರಬತ್ತುಗಳಿರಬೇಕು.

೪. ಹೊರಗಿನ ತಿಂಡಿತಿನಿಸುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

೫. ಸಡಿಲವಾದ, ತಿಳಿಬಣ್ಣದ ಮತ್ತು ಹಗುರವಾಗಿರುವ (ಸಾಧ್ಯವಾದರೆ ಹತ್ತಿಯ) ಬಟ್ಟೆಗಳನ್ನು ಉಪಯೋಗಿಸಬೇಕು.

೬. ಈ ದಿನಗಳಲ್ಲಿ ಹೆಚ್ಚು ಬೆವರುವುದರಿಂದ ಬೇಗ ದಣಿವಾಗು ತ್ತದೆ. ಆದ್ದರಿಂದ ವ್ಯಾಯಾಮವನ್ನು ಕಡಿಮೆ ಮಾಡಬೇಕು.

೭. ಬಿಸಿಲು ಇದ್ದಾಗ ಮನೆಯಲ್ಲಿ ಅಥವಾ ನೆರಳು ಇರುವ ಸ್ಥಳದಲ್ಲಿ ನಿಂತುಕೊಳ್ಳಬೇಕು.

೮. ವಾತಾವರಣವು ತಂಪಾಗಿರಲು ಕೂಲರದ (ವಾಯು ಶೀತಲೀಕರಣ ಯಂತ್ರದ) ಸೌಲಭ್ಯವಿದ್ದರೆ, ದಿನದ ಕೆಲವು ಗಂಟೆಗಳ ಕಾಲ ಅದನ್ನು ಬಳಸಬೇಕು.

೯. ಸಾಧ್ಯವಾದರೆ ಮುಂಜಾನೆ ೧೦ ಗಂಟೆಯ ಮೊದಲು ಮತ್ತು ಮಧ್ಯಾಹ್ನ ೪ ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಬೇಕು. ‘ಬಿಸಿಲಿನ ತಾಪ ತಾಗಬಾರದೆಂದು ಹೊರಗೆ ಹೋಗುವಾಗ ಕಣ್ಣುಗಳಿಗೆ ‘ಗಾಗಲ್’ ಹಾಕಬೇಕು. ಛತ್ರಿ ಅಥವಾ ತಲೆಯ ಮೇಲೆ ಎಲ್ಲ ಬದಿಗೆ ನೆರಳು ಬೀಳುವಂತೆ, ಟೊಪ್ಪಿಗೆ ಯನ್ನು ಉಪಯೋಗಿಸಬೇಕು. ಟೊಪ್ಪಿಗೆ ಲಭ್ಯವಿಲ್ಲದಿದ್ದರೆ ತಲೆಗೆ ಮತ್ತು ಕಿವಿಗಳಿಗೆ ದೊಡ್ಡ ಬಿಳಿ ವಸ್ತ್ರವನ್ನು ಕಟ್ಟಬೇಕು.

೧೦. ಕೆಲವರಿಗೆ ಅಧ್ಯಾತ್ಮಪ್ರಸಾರದ ಸೇವೆ ಅಥವಾ ಇತರ ಕಾರಣಗಳಿಂದ ಹೊರಗೆ ಹೋಗಬೇಕಾಗುತ್ತದೆ ಮತ್ತು ಪ್ರವಾಸ ಮಾಡಬೇಕಾಗುತ್ತದೆ. ‘ಉಷ್ಣತೆಯ ತೊಂದರೆ ಆಗಬಾರದೆಂದು ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ಅವರ ಕೈಚೀಲದಲ್ಲಿ (ಪರ್ಸ) ಈರುಳ್ಳಿಯನ್ನಿಟ್ಟು ಕೊಳ್ಳಬೇಕು. ಈರುಳ್ಳಿಯು ಶರೀರ ದಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ೩-೪ ದಿನಗಳ ನಂತರ ಅದು ಒಣಗುತ್ತದೆ. ಒಣಗಿದ ಈರುಳ್ಳಿಯನ್ನು ಎಸೆದು ಹೊಸ ಈರುಳ್ಳಿಯನ್ನು ಜೊತೆಯಲ್ಲಿಡಬೇಕು.

೧೧. ಜಾಗರಣೆ ಮಾಡುವುದರಿಂದ ಶರೀರದಲ್ಲಿ ಪಿತ್ತ ಮತ್ತು ವಾತ ಈ ದೋಷಗಳು ಹೆಚ್ಚಾಗುತ್ತವೆ. ಆದ್ದರಿಂದ ಅತೀ ಜಾಗರಣೆ ಮಾಡುವುದನ್ನು ತಪ್ಪಿಸಬೇಕು. (ಈ ದಕ್ಷತೆಯನ್ನು ಎಲ್ಲ ಋತುಗಳಲ್ಲಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.)

೧ ವರ್ಷಕ್ಕಿಂತ ಚಿಕ್ಕ ಮಕ್ಕಳ, ಹಾಗೆಯೇ ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಮೇಲಿನ ಅಂಶಗಳ ಆಧಾರದ ಮೇರೆಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.