ಸದಾ ಆರೋಗ್ಯವಂತ ಮತ್ತು ಉತ್ಸಾಹಿಯಾಗಿರಲು ಶರೀರವನ್ನು ಈ ಕೆಳಗಿನಂತೆ ನೋಡಿಕೊಳ್ಳಬೇಕು !

‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ. ಶರೀರ ಆರೋಗ್ಯವಾಗಿದ್ದರೆ ಅಪೇಕ್ಷಿಸುವುದನ್ನು ಸಾಧಿಸಲು ಸುಲಭವಾಗುತ್ತದೆ. ಶರೀರ ಆರೋಗ್ಯವಾಗಿರಲು ಪ್ರತಿದಿನ ಇದನ್ನು ಮಾಡಬೇಕು.

ವೈದ್ಯ ಮೇಘರಾಜ ಪರಾಡಕರ

೧. ಸೂರ್ಯೋದಯದ ಮೊದಲು ಏಳಬೇಕು ಮತ್ತು ರಾತ್ರಿ ೧೧ ಗಂಟೆಯೊಳಗೆ ಮಲಗಬೇಕು.

೨. ಬೆಳಗ್ಗೆ ಎದ್ದ ಮೇಲೆ ಹಾಗೂ ಆಹಾರ ಸೇವಿಸಿದ ನಂತರ ಹಲ್ಲುಗಳನ್ನು ಸ್ವಚ್ಛವಾಗಿ ತಿಕ್ಕಬೇಕು.

೩. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ೧೫ ನಿಮಿಷವಾದರೂ ವ್ಯಾಯಾಮ ಮಾಡಬೇಕು.

೪. ಚೆನ್ನಾಗಿ ಹೊಟ್ಟೆ ಹಸಿವಾದ ನಂತರವೇ ಆಹಾರವನ್ನು ತೆಗೆದುಕೊಳ್ಳಬೇಕು. ಊಟದ ಹೊರತಾಗಿ ಮಧ್ಯದಲ್ಲಿ ತಿನ್ನುವುದನ್ನು ಬಿಡಬೇಕು.

೫. ರಾತ್ರಿ ಮಲಗುವಾಗ ತಲೆ, ಮತ್ತು ಅಂಗಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಬೇಕು.’

-ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೩)