‘ದಿ ಕೇರಳ ಸ್ಟೋರಿ’ ಚಲನಚಿತ್ರ ‘ಇಸ್ಲಾಮಿಕ್ ಸ್ಟೇಟ್’ ಮೇಲಾಧಾರಿತವಿದೆ, ಅದನ್ನು ವಿರೋಧಿಸುವವರು ಉಗ್ರರು ! – ನಟಿ ಕಂಗನಾ ರಣಾವತ್

(ಎಡಬದಿಗೆ) ಕಂಗನಾ ರಣಾವತ್

ಮುಂಬೈ – ‘ದಿ ಕೇರಳ ಸ್ಟೋರಿ’ ಚಲನಚಿತ್ರವು ಇಸ್ಲಾಮಿಕ್ ಸ್ಟೇಟ್ ಅನ್ನು ಹೊರತುಪಡಿಸಿ ಯಾರನ್ನೂ ಕೆಟ್ಟ ಅಥವಾ ತಪ್ಪು ಎಂದು ಕರೆಯುವುದಿಲ್ಲ ಎಂದು ದೇಶದ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾಗಿರುವ ಉಚ್ಚನ್ಯಾಯಾಲಯ ಹೇಳುವುದಾದರೆ ಅದು ಸರಿಯೇ ಆಗಿರುತ್ತದೆ. ಇಸ್ಲಾಮಿಕ್ ಸ್ಟೇಟ್ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ನಾನೆ ಈ ಸಂಘಟನೆಯನ್ನು ಭಯೋತ್ಪಾದಕ ಎಂದು ಕರೆಯದೇ ನಮ್ಮ ದೇಶ, ಗೃಹ ಸಚಿವಾಲಯ ಮತ್ತು ಇತರ ದೇಶಗಳು ಕೂಡ ಇದನ್ನೇ ಹೇಳುತ್ತಿವೆ. ಇದು ಭಯೋತ್ಪಾದಕ ಸಂಘಟನೆಯಲ್ಲ ಎಂದು ನೀವು ಭಾವಿಸಿದರೆ, ನೀವು ಸಹ ಭಯೋತ್ಪಾದಕರಾಗಿದ್ದೀರಿ. ಈ ಸಿನಿಮಾದ ಬಗ್ಗೆ ನಿಮಗೆ ಹಾಗೆ ಅನಿಸದಿದ್ದರೆ ಅದು ಸಿನಿಮಾದ ಸಮಸ್ಯೆ ಅಲ್ಲ, ನಿಮ್ಮ ಸಮಸ್ಯೆ. ನೀವು ಜೀವನದಲ್ಲಿ ಯಾವ ಸ್ಥಾನದಲ್ಲಿದ್ದೀರಿ ? ಎಂದು ಮೊದಲು ಯೋಚಿಸಬೇಕು ಎಂದು ನಟಿ ಕಂಗನಾ ರಣಾವತ್ ಅವರು ಮರಾಠಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಯಾರಿಗಾದರೂ ಈ ಚಲನಚಿತ್ರ ಇಸ್ಲಾಮಿಕ್ ಸ್ಟೇಟ್ ಬಗ್ಗೆ ಅಲ್ಲದೆ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಎಂದು ಅನಿಸುತ್ತಿದ್ದರೆ, ನೀವು ಭಯೋತ್ಪಾದಕರಾಗಿದ್ದಿರಿ. ಎಂಬುದು ಸರಳ ಲೆಕ್ಕಾಚಾರವಾಗಿದೆ ಎಂದು ಕಂಗನಾ ರಣಾವತ್‌ ಹೇಳಿದ್ದಾರೆ.