ಬಿಹಾರದ ಶಿಕ್ಷಣ ಸಚಿವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಗಳಿಗೆ ಪರೋಕ್ಷವಾಗಿ ಬೆದರಿಕೆ
ಪಾಟಲಿಪುತ್ರ (ಬಿಹಾರ) – ಸಂತ ತುಲಸಿದಾಸರು ಬರೆದಿರುವ ಶ್ರೀರಾಮಚರಿತಮಾನಸದ ಮೇಲೆ ಟೀಕೆಯನ್ನು ಮಾಡುವ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ ಯಾದವ ಇವರು ಈಗ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಗುರಿ ಮಾಡಿದ್ದಾರೆ. ಯಾದವ ಇವರು, `ಒಂದು ವೇಳೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಬಿಹಾರದಲ್ಲಿ ಕೆಟ್ಟ ಕೆಲಸಗಳನ್ನು ಮಾಡಲು ಬರುತ್ತಿದ್ದರೆ, ಅವರಿಗೆ ಬಿಹಾರ ಅನುಮತಿ ನೀಡುವುದಿಲ್ಲ. ಅವರು ದ್ವೇಷವನ್ನು ಹರಡಲು ಬರುತ್ತಿದ್ದರೆ, ಈ ಹಿಂದೆ ಯಾವ ರೀತಿ ಲಾಲಕೃಷ್ಣ ಅಡ್ವಾಣಿಯವರನ್ನು ಜೈಲಿಗೆ ಕಳುಹಿಸಲಾಗಿತ್ತೋ, ಹಾಗೆ ಇತರೆ ಜನರೂ ಹೋಗುವರು’’, ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಬರುವ ಮೇ 13 ರಂದು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಬಿಹಾರಕ್ಕೆ ಬರುವವರಿದ್ದಾರೆ. ಪಾಟಲಿಪುತ್ರದಲ್ಲಿ ಅವರ ದರಬಾರ ಏರ್ಪಡಿಸಲಾಗಿದೆ. ಈ ಹಿಂದೆ ಲಾಲೂಪ್ರಸಾದ ಯಾದವರ ಪುತ್ರ ಮತ್ತು ರಾಜ್ಯದ ಮಂತ್ರಿ ತೇಜಪ್ರತಾಪ ಯಾದವ ಇವರೂ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಬಿಹಾರ ಪ್ರವಾಸದ ಕುರಿತು ಬೆದರಿಕೆ ಹಾಕಿದ್ದರು.
ಚಂದ್ರಶೇಖರ ಯಾದವ ಮಾತನಾಡುತ್ತಾ, ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಬಾಬಾ ಅಲ್ಲ ಮತ್ತು ಅವರು ಯಾವುದೇ ಚಮತ್ಕಾರ ಮಾಡುತ್ತಿಲ್ಲ. ಅವರು ಮತ್ತು ಅವರ ಜನರು ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನ ಮುಖಂಡ ಬಿಹಾರಿನಲ್ಲಿ ದ್ವೇಷ ಹರಡುವ ಹೇಳಿಕೆ ನೀಡುತ್ತಾರೆ, ಗಲಭೆ ನಡೆಸುತ್ತಾರೆ, ಅವರ ಮೇಲೆ ಜನತಾ ದಳ(ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಪಕ್ಷಗಳ ಸರಕಾರ ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ; ಆದರೆ ಜನರಲ್ಲಿ ಪ್ರೀತಿ ಮತ್ತು ಭಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಹಿಂದೂ ಸಂತರ ಮೇಲೆ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಹಾಕುತ್ತಾರೆ ಎನ್ನುವುದನ್ನು ಗಮನಿಸಬೇಕು ! |