ಜೆಎನ್‌ಯುನಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ವಿರೋಧ !

ನವ ದೆಹಲಿಯ – ಇಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು)ನಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ, ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಾದ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ (ಎಸ್‌.ಎಫ್‌.ಐ.) ಅದನ್ನು ವಿರೋಧಿಸಲು ಪ್ರಯತ್ನಿಸಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು.

1. ಎಸ್‌.ಎಫ್‌.ಐ.ಯು, ಈ ಪ್ರದರ್ಶನವನ್ನು ನಾವು ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ ಎಂದು ಹೇಳಿದೆ. ಈ ಸಿನಿಮಾ ಜಾತ್ಯತೀತತೆಗೆ ಮಸಿ ಬಳಿಯುತ್ತಿದೆ. ಈ ಚಿತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧೋರಣೆಯಾಗಿದೆ.

2. ಚಿತ್ರದ ಬಿಡುಗಡೆಯನ್ನು ನಿಷೇಧಿಸಬೇಕೆಂಬ ಬೇಡಿಕೆಯನ್ನು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ. ತಕ್ಷಣ ಅರ್ಜಿಯ ವಿಚಾರಣೆ ನಡೆಸಲು ಕೋರ್ಟ್ ನಿರಾಕರಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ಶಿಪ್ ಚಿತ್ರಕ್ಕೆ ‘ವಯಸ್ಕರರಿಗೆ ಮಾತ್ರ’ ಎಂದು ಪ್ರಮಾಣಪತ್ರ ನೀಡಿತು

‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ಶಿಪ್ ಪ್ರಮಾಣ ಪತ್ರ ನೀಡಿದೆ. ಅದರಲ್ಲಿ ‘ವಯಸ್ಕರಿಗೆ ಮಾತ್ರ’ ಎಂದು ಬರೆಯಲಾಗಿದೆ, ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಚಲನಚಿತ್ರವನ್ನು ವೀಕ್ಷಿಸಬಹುದು. ಪ್ರಮಾಣಪತ್ರ ನೀಡುವಾಗ ಚಿತ್ರಗಳಲ್ಲಿನ ಕೆಲವು ದೃಶ್ಯಗಳನ್ನು ಬದಲಾಯಿಸುವಂತೆಯೂ ಕೇಳಲಾಗಿದೆ. ಅದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳ ದೇವರನ್ನು ಅವಮಾನಿಸುವ ಹೇಳಿಕೆ ನೀಡಿದ್ದಾನೆ ಇದನ್ನು ತೆಗೆಯಲಾಗಿದೆ. ಭಾರತದಲ್ಲಿನ ಕಮ್ಯುನಿಸ್ಟರ ದ್ವಿಮುಖ ನೀತಿಯ ಕುರಿತಾದ ಹೇಳಿಕೆಯಿಂದ ‘ಭಾರತೀಯ’ ಪದವು ತೆಗೆಯಲಾಗಿದೆ.

ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಯುತಾನಂದ ಅವರು ‘ಕೇರಳ ರಾಜ್ಯ ಇಸ್ಲಾಮಿಕ್ ರಾಜ್ಯವಾಗಲಿದೆ’ ಎಂದು ಭವಿಷ್ಯ ನುಡಿದಿದ್ದರು. ಆ ವಾಕ್ಯವನ್ನು ಅಳಿಸಲಾಗಿದೆ. ಒಟ್ಟು 10 ದೃಶ್ಯಗಳನ್ನು ತೆಗೆದ ನಂತರ ಚಿತ್ರಕ್ಕೆ ಈ ಪ್ರಮಾಣಪತ್ರವನ್ನು ನೀಡಲಾಗಿದೆ.

ಸಂಪಾದಕೀಯ ನಿಲುವು

ಕಮ್ಯುನಿಸ್ಟರು ಹಿಂದೂ ದ್ವೇಷಿಗಳು ಮತ್ತು ಜಿಹಾದಿ ಪ್ರೇಮಿಗಳಾಗಿರುವುದರಿಂದ ಅಂತಹ ಚಿತ್ರಗಳನ್ನು ವಿರೋಧಿಸುತ್ತಾರೆ ! ಇಂತಹ ಪಕ್ಷಗಳನ್ನು ಮತ್ತು ಅವರ ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಲು ಹಿಂದೂ ಸಂಘಟನೆಗಳು ಚಳವಳಿ ನಡೆಸಬೇಕು !