‘ದ ಕೇರಳ ಸ್ಟೋರಿ’ಯ ಪ್ರಸಾರಕ್ಕೆ ನಿಷೇಧ ಹೇರುವುದು ಸೂಕ್ತವಲ್ಲ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ‘ದ ಕೇರಳ ಸ್ಟೋರಿ’ ಸಿನೆಮಾದ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ತಕ್ಷಣವೇ ವಿಚಾರಣೆ ನಡೆಸುವುದು ಸೂಕ್ತವಲ್ಲ. ‘ಸಿನೆಮಾದ ಪ್ರಸಾರಕ್ಕೂ ಮುನ್ನ ಅದನ್ನು ಪ್ರಶ್ನಿಸುವುದು ಸರಿಯಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಕೇರಳದ ಆಢಳಿತಾರೂಢ ಕಮ್ಯುನಿಸ್ಟ ಸರಕಾರವು ‘ಈ ಸಿನೆಮಾ ದ್ವೇಷವನ್ನು ಉತ್ತೇಜಿಸುತ್ತದೆ’, ಎಂದು ಆರೋಪಿಸಿ ಅರ್ಜಿಯನ್ನು ಸಲ್ಲಿಸಿತ್ತು.

(ಸೌಜನ್ಯ : Times Of India)

‘ಕೇರಳದಲ್ಲಿ ಲವ್ ಜಿಹಾದ್ ಷಡ್ಯಂತ್ರದ ಅಡಿಯಲ್ಲಿ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಮಿಕ್ ಸ್ಟೇಟ್ ಗೆ ಕಳುಹಿಸಲಾಗಿದೆ’ ಎಂಬ ವಾಸ್ತವವನ್ನು ಆಧರಿಸಿದ ಈ ಸಿನೆಮಾ ಮೇ ೫ ರಂದು ಬಿಡುಗಡೆಯಾಗಲಿದೆ.