ತೇಜಸ್ವಿನಿಯಿಂದ ದೇಹಸ್ವಿನಿಯತ್ತ – ಭಾರತೀಯ ಸ್ತ್ರೀಯರ ಅಧೋಗತಿಯ ಪ್ರಯಾಣ

ಚಲನಚಿತ್ರ ಅಥವಾ ಜಾಹೀರಾತುಗಳಿಂದಾಗಿ ಅತಿ ಕಡಿಮೆ ಬಟ್ಟೆಗಳಲ್ಲಿ ತಿರುಗಾಡಲು ಇಂದಿನ ಸ್ತ್ರೀಯರಿಗೆ ನಾಚಿಕೆ ಅನಿಸದಂತಾಗಿದೆ. ಸ್ತ್ರೀದೇಹದ ಮಾರುಕಟ್ಟೆಯನ್ನೇ ತೆರೆಯಲಾಗಿದೆ. ಈ ಮಾರುಕಟ್ಟೆಯಿಂದ ಅವರಿಗೆ ಹಣ, ಪ್ರಸಿದ್ಧಿ, ಪ್ರತಿಷ್ಠೆ ಇತ್ಯಾದಿಗಳು ಸಿಗುತ್ತಿರುವುದರಿಂದ ಮತ್ತು ಸಮಾಜವೂ ತನ್ನ ಬುದ್ಧಿಯನ್ನು ಕಳೆದುಕೊಂಡು ಮೇಲಿನ ಎಲ್ಲ ವಿಷಯಗಳನ್ನು ಅವಳ ಸೆರಗಿನಲ್ಲಿ ಸಹಜವಾಗಿ ಹಾಕುತ್ತಿರುವುದರಿಂದ ಚಲನಚಿತ್ರ, ‘ಮಾಡಲಿಂಗ್’, ಜಾಹಿರಾತು, ‘ರಿಯಾಲಿಟಿ ಶೋ’ ಇವುಗಳ ಮೂಲಕ ಪರದೆಯ ಮೇಲೆ ಮಿಂಚುವ ಈ ಸ್ತ್ರೀಯರು ಯಾವುದೇ ಬಂಧನ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಅಶ್ಲೀಲ, ಮುಚ್ಚುಮರೆಯಿಲ್ಲದ ‘ಐಟಂ ಸಾಂಗ’ ಮತ್ತು ಜಾಹಿರಾತುಗಳನ್ನು ಮಾಡುವುದರಲ್ಲಿ ನಟಿಯರ ಸ್ಪರ್ಧೆಯೇ ನಡೆಯುತ್ತಿದೆ. ಸ್ತ್ರೀಯರ ಈ ಹಣ ಮತ್ತು ಪ್ರಸಿದ್ಧಿಯ ಲಾಲಸೆಯನ್ನು ನೋಡಿ, ಅವರು ತಮ್ಮ ಮೈಮೇಲಿನ ಬಟ್ಟೆಗಳನ್ನು ಯಾವುದೇ ಮರ್ಯಾದೆಯ ವರೆಗೆ ಕಡಿಮೆ ಮಾಡುವ ಅಥವಾ ಬಿಚ್ಚುವ ಅವರ ಈ ಸಿದ್ಧತೆಯನ್ನು ನೋಡಿ ನಿರ್ಮಾಪಕರೂ ಅವರನ್ನು ಹೆಚ್ಚೆಚ್ಚು ನಗ್ನ ಮಾಡಿ ಕಾಮೋತ್ತೇಜಕ ಸ್ವರೂಪದಲ್ಲಿ ಪರದೆಯ ಮೇಲೆ ತೋರಿಸುತ್ತಿದ್ದಾರೆ. ಸ್ತ್ರೀ ದೇಹದ ಮಾರುಕಟ್ಟೆಯಿಂದ ತಮ್ಮ ತಿಜೋರಿಯನ್ನು ತುಂಬಿಸುವುದು, ಸಮಾಜವನ್ನು ಲೈಂಗಿಕತೆಯ ಕಂದಕಕ್ಕೆ ದೂಡಲು ನಿರ್ಮಾಪಕರಿಗೆ ತಮ್ಮ ಸ್ವಂತ ಮನಸ್ಸಿನ ನಾಚಿಕೆಯೂ ಇಲ್ಲ ಮತ್ತು ಜನರ ನಾಚಿಕೆಯೂ ಇಲ್ಲ. ಸ್ತ್ರೀಯರ ಈ ವಿವಸ್ತ್ರದ ಮತ್ತು ಪರದೆಯ ಮೇಲೆ ಕಾಮೋತ್ತೇಜಕ ದೃಶ್ಯಗಳನ್ನು ಸಾಕಾರಗೊಳಿಸುವ ವೃತ್ತಿಯ ಪರಿಣಾಮವೆಂದರೆ ಸಮಾಜದಲ್ಲಿ ಲೈಂಗಿಕ ಉತ್ತೇಜನೆ ಹೆಚ್ಚಾಗಿದೆ. ಅದಕ್ಕನುಸಾರ ಹೆಣ್ಣುಮಕ್ಕಳನ್ನು ಪೀಡಿಸುವುದು, ಪ್ರೇಮಪ್ರಕರಣಗಳು, ಮನೆಯಿಂದ ಓಡಿ ಹೋಗುವುದು, ವಿವಾಹದ ಮೊದಲು ಶಾರೀರಿಕ ಸಂಬಂಧಕ್ಕೆ ಉದ್ಯುಕ್ತರಾಗುವುದು, ಅಶ್ಲೀಲ ಚಲನಚಿತ್ರಗಳನ್ನು ನೋಡುವುದು ಮತ್ತು ಅಶ್ಲೀಲ ಚಲನಚಿತ್ರಗಳನ್ನು ತಯಾರಿಸುವುದು, ಬಲಾತ್ಕಾರ ಗಳ ಪ್ರಮಾಣವೂ ಹೆಚ್ಚಾಗಿದೆ. ಸಮಾಜದಲ್ಲಿ ಹೆಚ್ಚಾಗಿರುವ ಈ ಕಾಮವಾಸನೆಯಿಂದಾಗಿ ಚಿಕ್ಕ ವಯಸ್ಸಿನ ಹುಡುಗಿಯರು, ನಿರಪರಾಧಿ ಸ್ತ್ರೀಯರು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ‘ಬಲಾತ್ಕಾರ’ ಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿದಿನ ನಡೆಯುವ ಬಲತ್ಕಾರದ ಪ್ರಕರಣಗಳನ್ನು ಕೇಳಿ ಭಾರತವು ಭ್ರಷ್ಟಾಚಾರ ದಂತೆಯೇ, ಬಲಾತ್ಕಾರದ ದೇಶವೆಂದು ಜಗತ್ತಿನಲ್ಲಿ ಕುಪ್ರಸಿದ್ಧ ವಾಗುತ್ತದೆಯೋ, ಏನೋ ಎಂದೆನಿಸುತ್ತಿದೆ. ಚಿತ್ರನಟಿಯರ, ‘ರಿಯಾಲಿಟಿ ಶೋ’ ಮತ್ತು ಜಾಹಿರಾತುಗಳಲ್ಲಿ ನಟಿಸುವ ಸ್ತ್ರೀಯರ ತುಂಡು ಉಡುಪುಗಳ ಅನುಕರಣೆಯನ್ನು ಸಮಾಜದಲ್ಲಿನ ಸ್ತ್ರೀಯರು ಮತ್ತು ಯುವತಿಯರು ಬಹುದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಅವರ ಈ ಉಡುಪುಗಳ ಬಗ್ಗೆ ಕೆಲವರು ಮೆಚ್ಚದಿರುವುದನ್ನು ಹೇಳಿದರೆ ಅಥವಾ ಅವರ ಒಳ್ಳೆಯದಕ್ಕಾಗಿ ಸ್ವಲ್ಪ ಉಪದೇಶವನ್ನು ಮಾಡಿದರೆ, ಆ ಸ್ತ್ರೀಯರು ಮತ್ತು ಯುವತಿಯರು ದೊಡ್ಡ ಪ್ರಮಾಣದಲ್ಲಿ, ತೀವ್ರ ಮತ್ತು ಸಾಮೂಹಿಕ ರೀತಿಯಲ್ಲಿ ಮೆರವಣಿಗೆಗಳನ್ನು ತೆಗೆದು ವಿರೋಧಿಸುತ್ತಿದ್ದಾರೆ.

ದುರ್ದೈವದಿಂದ ‘ತಾಯಿಯೇ ಸಂಸ್ಕಾರಗಳ ಗಂಗೋತ್ರಿಯಾಗಿ ಉಳಿದಿಲ್ಲ !

ಮನೆಯಲ್ಲಿನ ಮಕ್ಕಳ ಮೇಲೆ ಸುಸಂಸ್ಕಾರಗಳನ್ನು ಮಾಡುವ ಬಹುದೊಡ್ಡ ಜವಾಬ್ದಾರಿಯು ತಾಯಿಯ ಮೇಲಿರುತ್ತದೆ; ಆದರೆ ಆ ತಾಯಿಯೇ ಭಾರತೀಯ ಸಂಸ್ಕೃತಿ, ಸಂಸ್ಕಾರ, ಜೀವನಮೌಲ್ಯಗಳನ್ನು ಮರೆಯುತ್ತಾ ಹೋದರೆ, ಆ ಮನೆಯ ಮೇಲೆ, ಮನೆಯಲ್ಲಿನ ಮಕ್ಕಳ ಮೇಲೆ ಸುಸಂಸ್ಕಾರಗಳನ್ನು ಯಾರು ಮಾಡುವುದು ? ದುರ್ದೈವದಿಂದ ಇಂದು ಮಕ್ಕಳ ಮೇಲೆ ಎಲ್ಲಕ್ಕಿಂತ ಮೊದಲು ಮತ್ತು ಮೂಲಭೂತ ಸುಸಂಸ್ಕಾರಗಳನ್ನು ಮಾಡುವ ಮನೆಯೇ ಮೊದಲ ಪಾಠಶಾಲೆ ಎಂಬ ಹೆಸರಿನ ಮೊದಲನೇಯ ಸಂಸ್ಕಾರಕೇಂದ್ರವೇ ನಾಶವಾಗುತ್ತಾ ಹೋಗುತ್ತಿದೆ.