ಪ್ರಸಂಗ ಬಂದಾಗ ಕ್ಷಾತ್ರಧರ್ಮವನ್ನು ಅಂಗೀಕರಿಸುವ ಹಿಂದೂ ಸ್ತ್ರೀಯರು !

ಮನಸ್ಸು ಮತ್ತು ದೇಹದಿಂದ ಕೋಮಲವಾಗಿರುವ ಭಾರತೀಯ ನಾರಿಯರು ಪ್ರಸಂಗ ಬಂದಾಗ ರಣರಾಗಿಣಿಯ ರೂಪವನ್ನು ತಾಳಿ ವೀರಾಂಗನೆಯರೂ ಆಗುತ್ತಾರೆ, ಎಂಬುದು ಸಿದ್ಧವಾಗಿದೆ. ಅನ್ಯಾಯ ಮಾಡುವ ಮಹಿಷಾಸುರನನ್ನು ಸಂಹರಿಸುವ ಶ್ರೀ ದುರ್ಗಾ,  ತನ್ನ ಪತಿಯ ಅವಮಾನದಿಂದ ಕುಪಿತಳಾಗಿ ತಂದೆಯ ಯಜ್ಞ ಕುಂಡದಲ್ಲಿ ನಿರ್ಭಯವಾಗಿ ಹಾರುವ ಶಿವಪತ್ನಿ ದಕ್ಷಾ, ಯಮನ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುತ್ತಾ ಪತಿ ಸತ್ಯವಾನನ ಪ್ರಾಣವನ್ನು ಮರಳಿ ತಂದ ಸಾವಿತ್ರಿ, ಸಾವಿತ್ರಿಯಂತೆಯೇ ಪತಿವ್ರತೆ ಹಾಗೂ ತಮಿಳುನಾಡಿನಲ್ಲಿ ಸಾವಿರಾರು ದೇವಾಲಯಗಳನ್ನು ಹೊಂದಿರುವ ಕನ್ನಗಿ, ಕೃಷ್ಣಪ್ರೇಮದಲ್ಲಿ ಸಮರ್ಪಣೆಯ ಉನ್ನತ ಮಟ್ಟದ ಆದರ್ಶವಾಗಿರುವ ರಾಧಾ ಮತ್ತು ಮೀರಾ, ತನ್ನ ಸ್ತ್ರೀತ್ವವನ್ನು ರಕ್ಷಿಸಲು ಉರಿಯುತ್ತಿರುವ ಚಿತೆಯೊಳಗೆ ಪ್ರವೇಶಿಸಿದ ಪದ್ಮಿನಿ, ಕರ್ಮಾವತಿ ಈ ರಾಣಿಯರು ಮತ್ತು ಇತರ ಸಾವಿರಾರು ರಜಪೂತ ಸ್ತ್ರೀಯರು, ಮೇವಾಡದ ವಂಶವನ್ನು ಉಳಿಸಲು ರಾಜಕುಮಾರ ಉದಯಸಿಂಗ್‌ನ ಬದಲಿಗೆ ತನ್ನ ಸ್ವಂತ ಮಗನನ್ನು ಬಲಿಕೊಟ್ಟ ಸ್ವಾಮಿನಿಷ್ಠೆ ಪನ್ನಾದಾಯಿ, ಐದು ಬಾದಶಾಹರು ಮತ್ತು ಸ್ವರಾಜ್ಯವನ್ನು ವಿರೋಧಿಸಿದ ತನ್ನ ಸಂಬಂಧಿಕರ ವಿರುದ್ಧ ಯುದ್ಧ ಮಾಡಿ ಮತ್ತು ಗಂಭೀರ ಪರಿಸ್ಥಿತಿಯಲ್ಲಿಯೂ ತನ್ನ ಮಗನಿಂದ ಹಿಂದವಿ ಸ್ವರಾಜ್ಯದ ಕನಸನ್ನು ನನಸಾಗಿಸಿದ ಜೀಜಾಬಾಯಿ, ಔರಂಗಜೇಬನ ಇಚ್ಛೆಗೆ ವಿರುದ್ಧವಾಗಿ ಛತ್ರಪತಿ ಶಿವಾಜಿ ಮಹಾರಾಜರ ಎರಡನೇ ಮಗ ರಾಜಾರಾಮ್‌ಗೆ ಆಶ್ರಯ ನೀಡಿದ ಕೆಳದಿ ರಾಣಿ ಚೆನ್ನಮ್ಮ, ೧೩ ನೇ ಶತಮಾನದಲ್ಲಿ ಎರಡು ದಶಕಗಳ ಕಾಲ ಆಂಧ್ರದಲ್ಲಿ ರಾಜ್ಯವನ್ನು ಸಮರ್ಥವಾಗಿ ನಿರ್ವಹಿಸಿದ ರುದ್ರಮಾಂಬ, ಅಕ್ಬರನಂತಹ ಬಲಾಢ್ಯ ರಾಜನ ಜೊತೆಗೆ ಹೋರಾಡಿದ ಗಡಮಂಡಲದ ರಾಣಿ ದುರ್ಗಾವತಿ, ಪತಿ ಮಲ್ಲಸರ್ಜನ ದೇಸಾಯಿಯವರ ನಿಧನದ ನಂತರ ರಾಜ್ಯವನ್ನು ವಶಪಡಿಸಿಕೊಳ್ಳಲು ಬಂದ ಬ್ರಿಟಿಷರ ಜೊತೆಗೆ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ‘ಮೇರಿ ಝಾಂನ್ಸಿ ನಹೀ ದುಂಗಿ ಹೀಗೆ ಹೇಳುತ್ತಾ ತನ್ನ ದತ್ತು ಮಗನನ್ನು ಬೆನ್ನಿನಲ್ಲಿ ಕಟ್ಟಿಕೊಂಡು ಬ್ರಿಟಿಷರಿಗೆ ತನ್ನ ಖಡ್ಗದ ಝಳಪನ್ನು ತೋರಿಸಿದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಮೊದಲ ಪೇಶ್ವೆ ಬಾಲಾಜಿ ವಿಶ್ವನಾಥ ಭಟ್ ಅವರ ಪತ್ನಿ ಮತ್ತು ಪರಾಕ್ರಮಿ ಅತುಲ್ ಬಾಜಿರಾವ್ ಪೇಶ್ವೆಯವರ ತಾಯಿ, ರಾಜಕಾರಣದಲ್ಲಿ ನಿಪುಣರಾಗಿದ್ದ ರಾಧಾಬಾಯಿ, ಭಾರತದ ಸ್ವಾತಂತ್ರ್ಯಕ್ಕಾಗಿ ಮರಣದಂಡನೆಯನ್ನು ಸಂತೋಷದಿಂದ ಎದುರಿಸಿದ ಇಪ್ಪತ್ತೆರಡು ವೀರಾಂಗನೇಯರ ಸಮರ್ಥ ಸ್ತ್ರಿಯರ ಈ ವಿವಿಧ ರೂಪಗಳು ನಿರಂತರ ನತಮಸ್ತಕವಾಗುವಂತೆ ಮಾಡುತ್ತವೆ.

– ಶ್ರೀ ಶಂಕರ ಗೊ. ಪಾಂಡೆ, ಪುಸದ, ಯವತಮಾಳ ಜಿಲ್ಲೆ

 (ಸಂದರ್ಭ : ‘ಎಕತಾ ಮೇ ೨೦೧೩)