ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ. ಬೇಸಿಗೆಯಲ್ಲಿ ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಬಾಯಿಯಲ್ಲಿ ಹುಣ್ಣಾಗುವುದು, ಮೈಮೇಲೆ ಗುಳ್ಳೆಗಳಾಗುವುದು, ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯಾಗು ವುದು, ತಲೆಸುತ್ತುವುದು, ಮೈಕಡಿತ, ಕೂದಲು ಉದುರು ವುದು ಇಂತಹ ತೊಂದರೆಗಳಾಗುತ್ತವೆ. ಆದ್ದರಿಂದ ಇಂತಹ ಪದಾರ್ಥಗಳನ್ನು ಬೇಸಿಗೆಯಲ್ಲಿ ತಿನ್ನಬಾರದು. ಬೇಸಿಗೆಯಲ್ಲಿ ದಿನದ ಊಟದಲ್ಲಿಯೂ ಕೆಂಪು ಖಾರ ಮತ್ತು ಮಸಾಲೆಗಳ ಉಪಯೋಗವನ್ನು ಕಡಿಮೆ ಮಾಡಬೇಕು.’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೩)