ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಥಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥ !

೭ ವರ್ಷಗಳ ಕಾಲ ಶಿಕೆಯಾಗುವ ಸಾಧ್ಯತೆ !

ಶಾಸಕ ಅಬ್ದುಲ್ ರೆಹಮಾನ್

ದೆಹಲಿ – ಇಲ್ಲಿನ ಸೀಲಂಪುರ ಪ್ರದೇಶದ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಅಸ್ಮಾ ಅವರನ್ನು ಥಳಿಸಿದ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ೨೦೦೯ ರಲ್ಲಿ ಇಬ್ಬರೂ ಸರಕಾರಿ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯನ್ನು ಥಳಿಸಿ, ಬೆದರಿಸಿ ಬೆದರಿಸಿದ ಅಪರಾಧದ ವಿಚಾರಣೆಯನ್ನು ‘ರೌಜ್ ಎವೆನ್ಯೂ ನ್ಯಾಯಾಲಯ’ ನಡೆಸಿತ್ತು.

ಶಾಸಕರಾದ ಅಬ್ದುಲ್ ರೆಹಮಾನ್ ಮತ್ತು ಅಸ್ಮಾ ಅವರಿಗೆ ೭ ವರ್ಷ ಜೈಲು ಶಿಕ್ಷೆ ವಿಧಿಸಬಹುದು. ನಿಯಮಗಳ ಪ್ರಕಾರ, ಒಬ್ಬ ಶಾಸಕನಿಗೆ ೨ ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರು ವಿಧಾನಸಭೆಯ ಸದಸ್ಯತ್ವದಿಂದ ವಂಚಿತರಾಗುತ್ತಾರೆ. ಈ ಪ್ರಕರಣದಲ್ಲಿ ರೆಹಮಾನ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲಿದ್ದಾರೆ. ರೆಹಮಾನ್ ವಿರುದ್ಧ ಓರ್ವ ಮಹಿಳೆಗೆ ಕಿರುಕುಳ ನೀಡಿ ಥಳಿಸಿದ ಪ್ರಕರಣವೂ ದಾಖಲಾಗಿದೆ. ಮಾರ್ಚ್ ೨೦೨೧ ರಲ್ಲಿ ಈ ಅಪರಾಧ ದಾಖಲಿಸಲಾಗಿತ್ತು.

(ಸೌಜನ್ಯ – The News)

ಸಂಪಾದಕೀಯ ನಿಲುವು

ಅಪರಾಧಿಗಳಿಂದ ಕೂಡಿರುವ ಆಮ್ ಆದ್ಮಿ ಪಕ್ಷ !